ಕುಷ್ಠರೋಗ ನಿವಾರಣೆ ದಿನ
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಜ.31ರ ಸಂಜೆ 4.30ಕ್ಕೆ ಸಯ್ಯಾಜಿರಾವ್ ರಸ್ತೆಯ ಐಎಂಎ ಭವನದಲ್ಲಿ ಕುಷ್ಠರೋಗ ನಿವಾರಣಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ.ಎಚ್.ಹನುಮಂತಪ್ಪ ಉಪನ್ಯಾಸ ನೀಡುವರು. ಸಂಘದ ಅಧ್ಯಕ್ಷ ಡಾ.ಸಿ. ಶರತ್‌ಕುಮಾರ್ ಅಧ್ಯಕ್ಷತೆ ವಹಿಸವರು.
ಕ್ಯಾನ್ಸರ್‌ನ ಉಚಿತ ತಪಾಸಣೆ ಶಿಬಿರ
ಲಕ್ಷ್ಮೀಪುರಂನ ಪ್ರೀತಿ ಕ್ಯಾನ್ಸರ್ ಸೆಂಟರ್ ವತಿಯಿಂದ ಜ.31ರಂದು ಕ್ಯಾನ್ಸರ್‌ನ ಉಚಿತ ತಪಾಸಣಾ ಶಿಬಿರ ಏರ್ಪಡಿಸಿದೆ. ಮಾಹಿತಿಗಾಗಿ 4259259, ಮೊ. 72040 59259 ಸಂಪರ್ಕಿಸಬಹುದು.
ಹಿಮಾಲಯದ ತಾಣಗಳಲ್ಲಿ ಚಾರಣ
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಕ್ಕಳಿಗೆ ಪರಿಸರ ಅಧ್ಯಯನ ಶಿಬಿರ ಹಾಗೂ ಕುಟುಂಬ ವರ್ಗದವರಿಗೆ ಸಾಹಸ ಶಿಬಿರವನ್ನು ಉತ್ತರಾಂಚಲದ ಕುಲು-ಮನಾಲಿ ಪ್ರದೇಶದಲ್ಲಿ ಆಯೋಜಿಸಿದೆ. ಶಿಬಿರದಲ್ಲಿ ಭಾಗವಹಿಸುವ ಆಸಕ್ತರು ವಿವರಗಳಿಗೆ ಕೆ.ಎಂ. ಗೋಪಿ, ಮೊ. 9449047132, ಎ.ಜಿ. ಸೋಮಶೇಖರ್, ಮೊ. 9480379773 ಸಂಪರ್ಕಿಸಿ.
ವಾರ್ಷಿಕೋತ್ಸವ
ಕೃಷ್ಣಮೂರ್ತಿಪುರಂನ ಮೈಸೂರು ಮಕ್ಕಳ ಕೂಟ, ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಕಾಲೇಜು ವಾರ್ಷಿಕೋತ್ಸವವು ಜ.31ರ ಬೆಳಗ್ಗೆ 10ಕ್ಕೆ ನಡೆಯಲಿದೆ. ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರೊ. ಕೆ.ವಿ. ದಾಮೋದರ ಗೌಡ ಅಧ್ಯಕ್ಷತೆ ವಹಿಸುವರು.
ತಾಂತ್ರಿಕ ತಜ್ಞರ ನೇಮಕ
ಮೈಸೂರು ವಿವಿ ಬಹುಮಾಧ್ಯಮ ಕಲಿಕಾ ಸಂಪನ್ಮೂಲ ಕೇಂದ್ರವು ತಾಂತ್ರಿಕ ಪರಿಣತರು, ಛಾಯಾಗ್ರಹಕರು, ನಿರ್ಮಾಣ ಸಹಾಯಕರು, ದೃಶ್ಯ ಸಂಪಾದಕರು ಮತ್ತು ಗ್ರಾಫಿಕ್ ಕಲಾವಿದರನ್ನು ನೇಮಕ ಮಾಡಿಕೊಳ್ಳುತ್ತಿದೆ. ಆಸಕ್ತರು ಅರ್ಜಿಯನ್ನು ಜ.31ರೊಳಗೆ ವೆಬ್ ವಿಳಾಸ ಢಿಢಿಢಿ.್ಡಟ್ಝಿ-ಟಣಡ್ಟ್ಠಜ.ಛ್ಛ.್ಝಟಿ ಅಥವಾ ಸಂಚಾಲಕರು, ಎಂಎಲ್‌ಆರ್‌ಸಿಸಿ, ಇಎಂಎಂಆರ್‌ಸಿ ಕಟ್ಟಡ, ಮಾನಸ ಗಂಗೋತ್ರಿ, ಮೈಸೂರು ಇಲ್ಲಿಗೆ ಕಳುಹಿಸಬೇಕು.
ಶಾಸ್ತ್ರೀಯ ಸಂಗೀತ
ನಾರಾಯಣಶಾಸ್ತ್ರಿ ಸುಬ್ಬರಾಯನಕೆರೆಯ ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿಧಾನದಲ್ಲಿ ಜ.31ರ ಸಂಜೆ 7.30ಕ್ಕೆ ವಿದುಷಿ ವೀಣಾ ಸೋಮಶೇಖರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

