ಮೈಸೂರು

ನಡೆಯದ ಸಭೆ: ಇಂದು ಪ್ರತಿಭಟನೆ

Published On :

ಮೈಸೂರು:  ಜನವರಿ ತಿಂಗಳ ಸಭೆ ಕರೆಯದ ಮೇಯರ್ ರಾಜೇಶ್ವರಿ ವಿರುದ್ಧ ಜ.30ರ ಬೆಳಗ್ಗೆ 11ಕ್ಕೆ ಮೇಯರ್ ಕಚೇರಿ ಎದುರು ಪ್ರತಿಭಟಿಸುವುದಾಗಿ ಪಾಲಿಕೆ ಪ್ರತಿಪಕ್ಷ ನಾಯಕ ಮ.ವಿ. ರಾಮಪ್ರಸಾದ್ ಹೇಳಿದ್ದಾರೆ.
10 ಲಕ್ಷ ಬಿಡುಗಡೆ
ಮೈಸೂರು:  ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಿವಿಧ ಜನಾಂಗದ ಸಂಘ-ಸಂಸ್ಥೆಗಳಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಲಾ 10 ಲಕ್ಷ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರೂ ಆದ ಮಾಜಿ ಶಾಸಕ ಇ.ಮಾರುತಿರಾವ್ ಪವಾರ್ ಅನುದಾನ ಬಿಡುಗಡೆಗೆ ಒತ್ತಾಯಿಸಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 10 ಸಂಘ-ಸಂಸ್ಥೆಗಳಿಗೆ ತಲಾ 10 ಲಕ್ಷ ಬಿಡುಗಡೆ ಮಾಡುವುದಾಗಿ ಶೆಟ್ಟರ್ ಭರವಸೆ ನೀಡಿದ್ದಾರೆ.
ಕವನಗಳ ಆಹ್ವಾನ
ಮೈಸೂರು:  ಮೈಸೂರಿನ ಯುವತಿ ಮಹಿಳಾ ಮಂಡಳಿ, ಮಂಡ್ಯದ ಜಿಲ್ಲಾ ಸಿರಿಗನ್ನಡ ವೇದಿಕೆಯು ಯುಗಾದಿ ಕುರಿತು ರಾಜ್ಯಮಟ್ಟದ ಕವಿ-ಕಾವ್ಯ ಸಮ್ಮೇಳನ ಏರ್ಪಡಿಸಿದೆ. ರಾಜ್ಯದ ನಾನಾ ಕವಿಗಳಿಂದ ಯುಗಾದಿ ಮುನ್ನ ದಿನ ಮಂಡ್ಯದಲ್ಲಿ ನೂರೊಂದು ಕವಿತೆಗಳ ಕವನ ಸಂಕಲನ ಹಾಗೂ ಕವಿಗೋಷ್ಠಿ ಆಯೋಜಿಸಲಾಗಿದೆಂದು ಮಂಡಳಿ ಅಧ್ಯಕ್ಷೆ ಕೆ. ಮಂಜುಳಾ ರಮೇಶ್ ತಿಳಿಸಿದ್ದಾರೆ. ಆಸಕ್ತರು ಎಲ್ಲೂ ಪ್ರಕಟವಾಗಿರದ ತಮ್ಮ 3 ಕವನ, ಇತ್ತೀಚಿನ 2 ಭಾವಚಿತ್ರದೊಂದಿಗೆ ಪೋತೇರ ಮಹದೇವು, ಅಧ್ಯಕ್ಷ, ಸಿರಿಗನ್ನಡ ವೇದಿಕೆ, ಹುಲಿವಾನ ಗ್ರಾಮ ಅಂಚೆ, ಕೆರಗೋಡು ಹೋಬಳಿ, ಮಂಡ್ಯ ಈ ವಿಳಾಸಕ್ಕೆ ಫೆ.10 ರೊಳಗೆ ಕಳುಹಿಸುವಂತೆ ಕೋರಿದ್ದಾರೆ.  ಮಾಹಿತಿಗೆ ಮೊ. 9739693599 ಅಥವಾ 9945247992 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.