ಮೈಸೂರು

ಶ್ರೀರಾಮ ಮಂದಿರದಲ್ಲಿ ವಾಲ್ಮೀಕಿ ಪುತ್ಥಳಿ ಸ್ಥಾಪಿಸಿ

Published On :

ಟಿ.ನರಸೀಪುರ:  ಮಹರ್ಷಿ ವಾಲ್ಮೀಕಿ ಅವರು ರಾಮಾಯಣದಂತಹ ಗ್ರಂಥವನ್ನು ರಚನೆ ಮಾಡುವ ಮೂಲಕ, ಶ್ರೀ ರಾಮಚಂದ್ರನ ಇತಿಹಾಸವನ್ನು ಜಗತ್ತಿಗೆ ತಿಳಿಸಿದ ಹಿನ್ನೆಲೆಯಲ್ಲಿ, ಶ್ರೀ ರಾಮನ ಮಂದಿರದಲ್ಲಿ ವಾಲ್ಮೀಕಿ ಪುತ್ಥಳಿಯನ್ನು ಪ್ರತಿಷ್‌ಠಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಎಸಿಪಿ ಚಲುವರಾಜು ಹೇಳಿದರು.
ಇಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಕ್ಯಾಲೆಂಡರನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ವೈಷ್ಣವ ದೇವಾಲಯಗಳಲ್ಲಿ ಗುರು ಶ್ರೀರಾಮಾನುಜಚಾರ್ಯರ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಹಿನ್ನೆಲೆ ಎಲ್ಲಾ ರಾಮ ಮಂದಿರಗಳಲ್ಲಿ ಮಹರ್ಷಿ ವಾಲ್ಮೀಕಿ ಅವರು ಪ್ರತಿಮೆ  ಸ್ಥಾಪಿಸಿ, ಧಾರ್ಮಿಕ ಗೌರವ ನೀಡಬೇಕು ಎಂದು ತಿಳಿಸಿದರು.
ದಕ್ಷಿಣ ಭಾರತದ ವರ್ಣಚಿತ್ರ ಕಲಾವಿದ ಕೆ.ಎಸ್.ಶ್ರೀಹರಿ ಮಾತನಾಡಿ, ಸಮಯಕ್ಕೆ ಹೆಚ್ಚಿನ ಮಹತ್ವವನ್ನು ನಾವು ನೀಡಬೇಕು. ಕಾಲದ ಮಿತಿಯಲ್ಲಿ ಸಮರ್ಥವಾಗಿ ಕೆಲಸ ಮಾಡಿದಾಗ ಪ್ರಗತಿ ಪಥದಲ್ಲಿ ಸಾಗಬಹುದು. ಈ ಹಿನ್ನೆಲೆ ನಾಯಕ ಸಂಘಗಳ ಒಕ್ಕೂಟ ದಿನದರ್ಶಿಕೆಯನ್ನು ಹೊರತಂದಿದೆ. ಎಸಿಪಿ ಚಲುವರಾಜು ಅವರ ಮುಂದಿನ ರಾಜಕೀಯ ಜೀವನಕ್ಕೆ ನಾವೆಲ್ಲರೂ ಶಕ್ತಿಯನ್ನು ತುಂಬೋಣ ಎಂದು ತಿಳಿಸಿದರು.
ಯುವ ನಟಿ ಸುಷ್ಮಿತಾ, ಒಕ್ಕೂಟದ ತಾಲೂಕು ಅಧ್ಯಕ್ಷ ಮಹದೇವ, ಕಾರ್ಯದರ್ಶಿ ಲೋಹಿತ್, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎಂ.ರಾಮು, ಕಸಾಪ ಅಧ್ಯಕ್ಷ ಆರ್.ನಾಗೇಂದ್ರಕುಮಾರ್, ವರುಣ ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಎನ್.ಚಂದ್ರು, ಮುಖಂಡರಾದ ಗೋವಿಂದರಾಜು, ಎಸ್. ಮಾದಯ್ಯ, ಎಲ್. ಮಹದೇವಪ್ಪ, ಜಯರಾಮು, ಮಂಜುನಾಥ್, ಎ.ಸಿ. ಪೂರ್ಣಚಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.