ಮೈಸೂರು

14ಕ್ಕೆ ರೋಟರಿ ಪದಗ್ರಹಣ

Published On :

ಕೆ.ಆರ್. ನಗರ: ಇಲ್ಲಿನ ರೋಟರಿ ಕ್ಲಬ್ 2013- 14ನೇ ಸಾಲಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ಪದಗ್ರಹಣ ಸಮಾರಂಭ ಇಲ್ಲಿನ ಭಾರತೀಯ ವೈದ್ಯಕೀಯ ಸಂಘದ ಭವನದಲ್ಲಿ ಜು. 14ರ ಸಂಜೆ 6.30ಕ್ಕೆ ನಡೆಯಲಿದೆ. ಡಾ. ಭರತೇಶ್ ನೂತನ ಪದಾಧಿಕಾರಿಗಳಿಗೆ ಪ್ರರ್ತಿಜವಿಧಿ ಬೋಧಿಸುವರು. ಸಹಾಯಕ ಗವರ್ನರ್ ಬಿ.ಕೆ. ರವೀಂದ್ರರಾಯ್, ಎಚ್.ಎಸ್. ಸತೀಶ್, ನಿಕಟಪೂರ್ವ ಅಧ್ಯಕ್ಷ ಬಿ.ಎ. ಸತೀಶ್, ಕಾರ್ಯದರ್ಶಿ ಎಲ್. ಅಮರನಾಥ್ ಮತ್ತು ನೂತನ ಅಧ್ಯಕ್ಷ ಸಿ.ಆರ್. ಮಲ್ಲಿಕಾರ್ಜುನ, ಕಾರ್ಯದರ್ಶಿ ಎಲ್.ವಿ. ರವಿಶಂಕರ್ ಭಾಗವಹಿಸುವರು.
ಅರ್ಜಿ ಆಹ್ವಾನ
ನಂಜನಗೂಡು: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಉದ್ಯೋಗಿನಿ ಯೋಜನೆಯಡಿಯಲ್ಲಿ ಅರ್ಜಿ ಆಹ್ವಾನಿಸಿದ್ದು, 18 ರಿಂದ 45 ವಯೋವಾನವುಳ್ಳ ಆಸಕ್ತ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.
ಬೈಕ್ ಸವಾರ ಸಾವು
ಪಿರಿಯಾಪಟ್ಟಣ: ಚಲಿಸುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೆ ಮೃತಪಟ್ಟಿರುವ ಘಟನೆ ಬಿ.ಎಂ ರಸ್ತೆಯಲ್ಲಿ ಜರುಗಿದೆ. ಇಲ್ಲಿನ ಮೇದರ್ ಬ್ಲಾಕ್ ನಿವಾಸಿ ಕೃಷ್ಣ ಎಂಬವರ ಪುತ್ರ ಚೇತನ್ (18) ಮೃತಪಟ್ಟವರು. ಮಹದೇಶ್ವರ ಪೆಟ್ರೋಲ್ ಬಂಕ್ ಮುಂಭಾಗದ ಬಿ.ಎಂ. ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಗೆ ಚೇತನ್ ಹಿಂಬದಿಯಿಂದ ಬೈಕ್ನಲ್ಲಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.