ಮೈಸೂರು

ನಿರುಪಮಾಗೆ ಡಾಕ್ಟರೇಟ್

Published On :

ಮೈಸೂರು: ಪ್ರೊ.ಎಚ್.ಎನ್. ಯಜುರ್ವೇದಿ ಅವರ ಮಾಗದರ್ಶನದಲ್ಲಿ ಸಂಶೋಧನೆ ನಡೆಸಿದ ಆರ್. ನಿರುಪಮಾ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಪ್ರಾಣಿಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ. ಇತ್ತೀಚೆಗೆ ನಡೆದ ಮೈಸೂರು ವಿವಿ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಸ್ವೀಕರಿಸಿದರು.
ನಾಳೆ ಅರಿವು ಕಾರ್ಯಕ್ರಮ
ನಗರಪಾಲಿಕೆ, ಜೆಎಸ್ಎಸ್ ಅಂಗವಿಕಲರ ಪಾಲಿಟೆಕ್ನಿಕ್ ಆಶ್ರಯದಲ್ಲಿ ಜು.22ರ ಬೆಳಗ್ಗೆ 10.30ಕ್ಕೆ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಸುಲಭ ಚಲನವನಕ್ಕೆ ತಡೆರಹಿತ ನಿರ್ಮಿತ ವಾತಾವರಣ ಕುರಿತ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಬಿ.ಆರ್. ಉಮಾಕಾಂತ್ ಅಧ್ಯಕ್ಷತೆ ವಹಿಸುವರು.
ಕ್ಯಾಂಪಸ್ ಸಂದರ್ಶನ
ಗೋಪಾಲಸ್ವಾಮಿ ಕಾಲೇಜ್ ಆಫ್ ಪ್ರೊಫೆಷನಲ್ ಸ್ಟಡೀಸ್ ಹಾಗೂ ಮಹಾರಾಜ ಉದ್ಯೋಗ ಮಿತ್ರ ಸಂಸ್ಥೆಯಿಂದ ಜು.22 ರಂದು ಕಾಲೇಜು ಆವರಣದಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದ್ದು, ದೂ.0821- 2333303 ಸಂಪರ್ಕಿಸಬಹುದು.
ಪ್ರಾಣಾಯಾಮ ಶಿಬಿರ ನಾಳೆಯಿಂದ
ಚಾಮರಾಜಪುರಂನಲ್ಲಿರುವ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದಲ್ಲಿ ಜು.22 ರಿಂದ 31 ರವರೆಗೆ ಪ್ರಾಣಾಯಾಮ, ಮುದ್ರೆ ಹಾಗೂ ಸಂಹಿತಾ ಧ್ಯಾನ ಶಿಬಿರ ಏರ್ಪಡಿಸಲಾಗಿದ್ದು, ಡಾ.ಕೆ.ರಾಘವೇಂದ್ರ ಆರ್. ಪೈ ಮಾರ್ಗದರ್ಶನ ನೀಡುವರು. ಮೊ. 94481 74457 ಸಂಪರ್ಕಿಸಿರಿ.
ಕಣ್ಣಿನ ತಪಾಸಣೆ ಶಿಬಿರ ನಾಳೆ
ಮೈಸೂರು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಟ್ರಸ್ಟ್ನಿಂದ ಜು.22ರ ಬೆಳಗ್ಗೆ 9ಕ್ಕೆ ರೇಸ್ ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿದ್ದು, ದೂ. 0821- 2472102 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.