ಚಾಮರಾಜ ಎಡದಂಡೆ ನಾಲೆಗೆ ನೀರು
ಕ.ಪ್ರ.ವಾರ್ತೆ ಸಾಲಿಗ್ರಾಮ ಜು. 22
ಕೆ.ಆರ್. ನಗರ ತಾಲೂಕಿನ ಸುಮಾರು 35 ಸಾವಿರಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರು ಒದಗಿಸುವ ಚಾಮರಾಜ ಬಲದಂಡೆ ಮತ್ತು ಎಡದಂಡೆ, ಮಿರ್ಲೆ ಹತ್ತಿಕಟ್ಟೆ ನಾಲೆ, ರಾಮಸಮುದ್ರ ನಾಲೆಗಳಿಗೆ ಕಾವೇರಿ ನದಿಯಿಂದ ನೀರು ಬಿಡುವ ಕಾರ್ಯಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಸಾಂಕೇತಿಕವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಸೋಮವಾರ ಎಇಇ ಬಸವರಾಜು, ಕೆ.ಬಿ. ಪ್ರಕಾಶ್, ನರಸೇಗೌಡ ಅವರು ತಾಲೂಕಿನ ಬಳ್ಳೂರು ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟೆಗೆ ಬಾಗಿನ ಅರ್ಪಿಸುವ ಮೂಲಕ ಕ್ರಸ್ಟ್‌ಗೇಟ್ ತೆರೆದು ಚಾಮರಾಜ ಎಡದಂಡೆ ನಾಲೆಗೆ ನೀರು ಹರಿಸಿ, ರೈತರಿಗೆ ಶುಭಾಶಯ ಕೋರಿದರು.
ಈ ವೇಳೆ ಮಾತನಾಡಿದ ಎಇಇ ಬಸವರಾಜು, ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿದೆ. ನೀರಿನ ಅಭಾವ ಕಡಿಮೆಯಾಗಿದೆ. ನೀರಿನ ಕೊರತೆ ಕಂಡುಬಂದಿಲ್ಲ ಎಂದರು. ಈ ಎಲ್ಲಾ ನಾಲೆಯ ಆಧುನೀಕರಣ ಕಾಮಗಾರಿ ಶೇ.65ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಮುಂದಿನ ಜನವರಿ 15ರ ನಂತರ ಪ್ರಾರಂಭಿಸಿ ಪೂರ್ಣಗೊಳಿಸಲಾಗುವುದು. ರೈತರು ನೀರಿಗಾಗಿ ನಾಲೆ ಏರಿ ಒಡೆಯುವುದು ನಾಲೆಯ ತೂಬುಗೇಟ್‌ನ್ನು ನಾಶಪಡಿಸುವುದು ಮಾಡಿದರೆ ನೀರಾವರಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಎಂಜಿನಿಯರ್‌ಗಳಾದ ಗಳಿಗೆಕೆರೆ ಸಿದ್ದೇಶ್ವರಪ್ರಸಾದ್, ಎ.ಪುಟ್ಟಸ್ವಾಮಿ, ಪ್ರಕಾಶ್, ಚಂದ್ರಶೇಖರ್, ರವಿಕುಮಾರ್, ಶಂಕರೇಗೌಡ, ನಾಲೆ ಗುತ್ತಿಗೆದಾರರಾದ ನಾಗಪ್ಪ ಡಿ. ವಡ್ಡರ್, ರಾಧಾಕೃಷ್ಣ, ರಾಮಾನುಜಂ, ಮಧು, ಪ್ರಸನ್ನ, ಹರೀಶ್, ಪ್ರಸನ್ನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

