'ರೋಟ್ರ್ಯಾಕ್ಟ್ ಜಿಐಎಂಡಿಎಸ್ ಮೊದಲ ಸ್ಥಾನಕ್ಕೇರಲಿ'
ಕ.ಪ್ರ.ವಾರ್ತೆ ಮೈಸೂರು ಜು. 25
ರೋಟ್ರ್ಯಾಕ್ಟ್ ಜಿಐಎಂಡಿಎಸ್ ಮೊದಲ ಸ್ಥಾನಕ್ಕೆ ಏರಬೇಕು ಎಂಬುದು ನಮ್ಮ ಆಶಯ ಎಂದು ಕ್ಲಬ್ನ ಹಿರಿಯ ಸದಸ್ಯ ಮನೋಹರ್ ಹೇಳಿದರು.
ರೋಟ್ರ್ಯಾಕ್ಟ್ ಜಿಐಎಂಡಿಎಸ್ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹಿಂದಿನ ಸದಸ್ಯರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲಾ 3180ರ 26 ಕ್ಲಬ್ಗಳಲ್ಲಿ ಮೂರನೆ ಅತ್ಯುತ್ತಮ ಕ್ಲಬ್ ಪ್ರಶಸ್ತಿ ಪಡೆದಿದೆ. ಅಂತೆಯೆ ನೀವುಗಳು ಹಿಂದಿನ ಸದಸ್ಯರ ಮಾರ್ಗದರ್ಶನದೊಂದಿಗೆ ಅವರ ಕಾರ್ಯಕ್ರಮ ಮುಂದುವರಿಸಬೇಕು.
ಜಿಲ್ಲಾ 3180ಕ್ಕೆ ಹೊಸದಾಗಿ ಸೇರ್ಪಡೆಯಾದ 24 ಹೊಸ ಕ್ಲಬ್ ಸೇರಿ ಜಿಲ್ಲೆಯ ಒಟ್ಟು 50 ಕ್ಲಬ್ಗಳಲ್ಲಿ ನೀವು ಮೊದಲ ಸ್ಥಾನಕ್ಕೇರಬೇಕು ಎಂದರು.
ಇಂದಿನ ವಿದ್ಯಾರ್ಥಿಗಳಿಗೆ ಕಷ್ಟಪಡದೆ ಸುಖಪಡುವ ಮನಸ್ಸಿದೆ. ಕೈ ಕೆಸರಾದರೆ ಬಾಯಿ ಮೊಸರು. ಒಮ್ಮೆ ಸೋತರೆ ಅದರಿಂದ ಧೃತಿಗೆಡಬಾರದು. ಸೋಲೆ ಗೆಲವಿನ ಸೋಪಾನ ಎಂದು ತಿಳಿಯಬೇಕು. ಕಷ್ಟಪಟ್ಟಾಗಲೆ ಸುಖದ ಬೆಲೆ ತಿಳಿಯುವುದು. ಸೋತಾಗಲೆ ಗೆಲವಿನ ಸಿಹಿ ರುಚಿಸುವುದು. ಜಗತ್ತಿನ ಮಹಾನ್ ಸಾಧಕರೆಲ್ಲ ನಿರಂತರ ಶ್ರಮದಿಂದಲೆ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ರೋಟ್ರ್ಯಾಕ್ಟ್ ಜಿಐಎಂಡಿಎಸ್ನ ಅಧ್ಯಕ್ಷರಾಗಿ ಸಚಿನ್, ಉಪಾಧ್ಯಕ್ಷರಾಗಿ ಕೃಷ್ಣಪ್ರಸಾದ್, ಕಾರ್ಯದರ್ಶಿ ನಾಟ್ಯ, ಜಂಟಿ ಕಾರ್ಯದರ್ಶಿ ಹಿತೇಶ್, ಖಜಾಂಚಿ ಲಿಖಿತ್, ಸಂಪಾದಕರಾಗಿ ದೀನ, ಕ್ಲಬ್ನ ವಿವಿಧ ನಿರ್ದೇಶಕರಾಗಿ ಪೊನ್ನಪ್ಪ, ರಮ್ಯಾ, ಕ್ಷೀರಾ, ಲಕ್ಷ್ಮಿ ಮತ್ತು ಅರ್ಜುನ ಪ್ರಮಾಣ ವಚನ ಸ್ವೀಕರಿಸಿದರು.
ಸಂಸ್ಥೆ ಅಧ್ಯಕ್ಷ ಜಯಚಂದ್ರರಾಜು, ಪ್ರಾಂಶುಪಾಲ ಎ.ಎಸ್. ಮಹೇಶ, ಉಪ ಪ್ರಾಂಶುಪಾಲ ಸಂಧಾನಕೃಷ್ಣ, ಮುದ್ದುಕುಮಾರ್, ರವಿಶಂಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

