ಮೈಸೂರು

ಬತ್ತದ ಬೆಳೆಯಲ್ಲಿ ಶ್ರೀ ಪದ್ಧತಿ ಅನುಸರಿಸಿ

Published On :

ಎಚ್.ಡಿ. ಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಪಡುಕೋಟೆ ಗ್ರಾಮದಲ್ಲಿ ಶ್ರೀ ಪದ್ಧತಿಯಡಿ ಬತ್ತ ಬೇಸಾಯದ ಕುರಿತು ನಡೆದ ತರಬೇತಿ, ಪ್ರಾತ್ಯಕ್ಷಿಕೆಯನ್ನು ಯೋಜನಾಧಿಕಾರಿ ಉಮಾರಬ್ಬ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಶ್ರೀ ಪದ್ಧತಿ ಬತ್ತ ಬೇಸಾಯ, ಅನುಸರಿಸಬೇಕಾದ ಕ್ರಮ, ಬಿತ್ತನೆ ಬೀಜದ ಬಳಕೆ, ಬೀಜದ ಆಯ್ಕೆ ಬಗ್ಗೆ ತಿಳಿಸಿ, ಅತ್ಯಂತ ಪ್ರಮಾಣದ ನೀರಿನ ಬಳಕೆ ಮೂಲಕ ಇಳುವರಿ ಸಾಧ್ಯವಾಗಲಿದೆ. ರೈತರು ಇಂತಹ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದು ಹೇಳಿದರು. ಯೋಜನೆಯ ಕೃಷಿ ಅಧಿಕಾರಿ ಲಿಂಗರೆಡ್ಡಿ ಹಾಗೂ ಹೈನುಗಾರಿಕಾ ಅಧಿಕಾರಿ ಸದಾಶಿವ ನಾಯಕ್ ತರಬೇತಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ರೈತರು ಭಾಗವಹಿಸಿದ್ದರು.

ರೋಟರಿ ಕ್ಲಬ್ ಪದವಿ ಪ್ರದಾನ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಜು. 26
ಪಟ್ಟಣದ ಗುರುಭವನದಲ್ಲಿ 2013-14ನೇ ಸಾಲಿನ ರೋಟರಿ ಕ್ಲಬ್‌ನ ಪದವಿ ಪ್ರದಾನ ಕಾರ್ಯಕ್ರಮವು ಜರುಗಿತು.
ಜಿಲ್ಲಾ ನಿಯೋಜಿತ ಗವರ್ನರ್ ಡಾ.ಭರತೇಶ್ ನೂತನ ಪದಾಧಿಕಾರಿಗಳ ಪದವಿ ಪ್ರದಾನ ಮಾಡಿ ಮಾತನಾಡಿ, ಕಳೆದ ಸಾಲಿನ ಅಧ್ಯಕ್ಷ ನಾಗರಾಜು ಉತ್ತಮ ಕೆಲಸ ಮಾಡಿದ್ದಾರೆ. ಶಾಂತಿಯಿಂದ ಕೆಲಸ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ದೊರಕಲು ಸಾಧ್ಯ. ನಿಸ್ವಾರ್ಥ ಸೇವೆ ನೀಡುವುದೆ ರೋಟರಿ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಹೊಸ ಚಿಂತನೆಯತ್ತ ಹರಿಸಬೇಕಿದೆ. ರೋಟರಿಯು ನಿಂತ ನೀರಾಗದೆ ಉತ್ತಮ ಕೆಲಸ ಮಾಡಬೇಕು. ಅಧ್ಯಕ್ಷರು ಮಾಡುವ ಪ್ರತಿ ಕೆಲಸಕ್ಕೂ ಸದಸ್ಯರು ತಮ್ಮ ಸಹಕಾರ ನೀಡಬೇಕು ಎಂದರು.
ಇದೆ ವೇಳೆ ತಾಲೂಕು ಸರಗೂರು ಪಟ್ಟಣದ ಡಾ.ಮೃತ್ಯುಂಜಯಪ್ಪ ಅವರಿಗೆ ರೋಟರಿ ಗೌರವ ಸದಸ್ಯತ್ವ ನೀಡಿ ಗೌರವಿಸಲಾಯಿತು.
ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಎನ್. ಚಂದ್ರಶೇಖರ್, ಕಾರ್ಯದರ್ಶಿ ಎನ್.ಎನ್. ಕೃಷ್ಣ, ನಿಕಟ ಪೂರ್ವ ಅಧ್ಯಕ್ಷ ಎಚ್.ವಿ. ನಾಗರಾಜು, ಉಪಾಧ್ಯಕ್ಷ ಸಂಪತ್ ಕುಮಾರ್, ಕೋಶಾಧ್ಯಕ್ಷ ಸ್ವಾಮಿ, ನಿರ್ದೇಶಕ ಜಿ.ರವಿ, ಆರ್ಮುಗಂ, ನಾಗನಾಯಕ, ಎಚ್.ಎಸ್. ಮಂಜುನಾಥ ಪ್ರಸಾದ್, ಪ್ರದೀಪ್ ಕುಮಾರ್, ನಾಗರಾಜು, ಸತೀಶ್ ಆರಾಧ್ಯ, ಕಾರ್ಯಾಧ್ಯಕ್ಷ ಡಾ. ಮುರುಗೇಶ್ ಇದ್ದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಶಿವಣ್ಣ, ಭರತೇಶ್, ರಾಜಶೇಖರ್, ಶ್ರೀನಿವಾಸಗೌಡ, ರಮೇಶ್ ಬಾಬು, ರವಿ, ಸತೀಶ್, ಎಂ. ಮಾದಯ್ಯ, ಹರೀಶ್ ಗೌಡ, ಮೈಸೂರು ರೋಟರಿ ಸಂಸ್ಥೆ ಪದಾಧಿಕಾರಿಗಳು ಕೂಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.