ಮನೆ ಮುಂದೆ ನಿಲ್ಲಿಸಿದ್ದ ಲಾರಿ ಕಳವು
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜು. 26
ಮನೆಯ ಮುಂಭಾಗ ನಿಲ್ಲಿಸಲಾಗಿದ್ದ ಲಾರಿಯು ಕಳ್ಳತನವಾಗಿರುವ ಘಟನೆ ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿ ಜರುಗಿದೆ.
ಇಲ್ಲಿನ ಗೋಣಿಕೊಪ್ಪ ರಸ್ತೆಯ ನಿವಾಸಿ ವಾಣಿಜ್ಯೋದ್ಯಮಿ ಬಿ.ಎಸ್. ರಾಮಚಂದ್ರು ಎಂಬವರಿಗೆ ಸೇರಿದ ಲಾರಿಯನ್ನು ಅವರ ಮನೆಯ ಮುಂಭಾಗ ಗುರುವಾರ ರಾತ್ರಿ ನಿಲ್ಲಿಸಲಾಗಿದ್ದು, ಶುಕ್ರವಾರ ಬೆಳಗಿನ ಜಾವ ಕಳ್ಳತನವಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಆರ್.ಬಿ. ಮೋಹನ್ರೆಡ್ಡಿ ಭೇಟಿ ನೀಡಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿ, ಲಾರಿಯಂತಹ ದೊಡ್ಡ ವಾಹನಗಳ ಮಾಲೀಕರು ಜಿಪಿಆರ್ಎಸ್ ತಂತ್ರಜ್ಞಾನವನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ದೊಡ್ಡ ವಾಹನಗಳ ಕಳ್ಳತನಗಳು ಹೆಚ್ಚುತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಥವಾ ಕಳ್ಳತನವಾದ ವಾಹನವನ್ನು ಪತ್ತೆಹಚ್ಚಲು ಜಿಪಿಆರ್ಎಸ್ ತಂತ್ರಜ್ಞಾನ ಅಳವಡಿಸಿದ್ದರೆ ವಾಹನ ಪತ್ತೆಗೆ ಸಹಕಾರಿಯಾಗಲಿದೆ. ಎಲ್ಲ ದೊಡ್ಡ ವಾಹನಗಳ ಮಾಲೀಕರು ಜಿಪಿಆರ್ಎಸ್ ತಂತ್ರಜ್ಞಾನ ತಮ್ಮ ವಾಹನಗಳಿಗೆ ಅಳವಡಿಸುವಂತೆ ತಿಳಿಸಿದರು.
ತನಿಖಾ ತಂಡ: ಪ್ರಸಕ್ತ ವರ್ಷದಲ್ಲಿ ಪಿರಿಯಾಪಟ್ಟಣ ವೃತ್ತದ ಬೆಟ್ಟದಪುರ ಪೊಲೀಸ್ಠಾಣೆ ವ್ಯಾಪ್ತಿಯಲ್ಲಿ 1, ಬೈಲುಕುಪ್ಪೆ ಠಾಣೆ ವ್ಯಾಪ್ತಿಯಲ್ಲಿ 2 ಹಾಗೂ ಪಿರಿಯಾಪಟ್ಟಣ ಠಾಣೆ ವ್ಯಾಪ್ತಿಯಲ್ಲಿ 3 ದೊಡ್ಡ ವಾಹನಗಳ ಕಳ್ಳತನ ನಡೆದಿದ್ದು, ಕಳ್ಳರ ಪತ್ತೆಗಾಗಿ ಜಿಲ್ಲಾ ಮಟ್ಟದಲ್ಲಿ ತನಿಖಾ ತಂಡವನ್ನು ರಚಿಸಲಾಗುವುದು ಎಂದು ತಿಳಿಸಿದರು.
ವಾಹನ ಮಾಲೀಕರು ತಮ್ಮ ವಾಹನಗಳಿಗೆ ಜಿಪಿಆರ್ಎಸ್ ತಂತ್ರಜ್ಞಾನ ಅಳವಡಿಸುವ ಮೂಲಕ ಕಳ್ಳರ ಪತ್ತೆಗೆ ಸಹಕರಿಸುವಂತೆ ಸರ್ಕಲ್ ಇನ್ಸ್ಪೆಕ್ಟರ್ ಪಿ.ವಿ. ವೆಂಕಟೇಶ್ ವಾಹನಗಳ ಮಾಲೀಕರಲ್ಲಿ ಮನವಿ ಮಾಡಿದರು. ಜಿಪಿಆರ್ಎಸ್ ಅಳವಡಿಸಿಕೊಳ್ಳಲು ಮೊ. 9482546600, 9964394395 ಕರೆ ಮಾಡುವಂತೆ ಮಾಹಿತಿ ನೀಡಿದರು.
ಅಕ್ರಮ ಕಂಡರೆ ದೂರು ನೀಡಿ
ಹುಣಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಹುಣಸೂರು, ಕೆ.ಆರ್. ನಗರ, ಪಿರಿಯಾಪಟ್ಟಣ ಹಾಗೂ ಎಚ್.ಡಿ. ಕೋಟೆ ತಾಲೂಕು ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಅಕ್ರಮ ಕಂಡುಬಂದರೆ ದೂರು ನೀಡಬಹುದು ಎಂದು ಅಬಕಾರಿ ಉಪ ಅಧೀಕ್ಷಕ ನಾಗಶಯನ ತಿಳಿಸಿದ್ದಾರೆ. ಉಪವಿಭಾಗ ವ್ಯಾಪ್ತಿಯಲ್ಲಿ ನಡೆಯಬಹುದಾದ ಅಕ್ರಮ ಮದ್ಯ ಸಂಗ್ರಹ, ನಕಲಿ ಮದ್ಯ ತಯಾರಿಕೆ, ದಾಸ್ತಾನು, ಮಾರಾಟ, ಸಾಗಣೆ ಮತ್ತು ವಿತರಣೆಯಂತಹ ಕಾನೂನು ಬಾಹಿರ ಚಟುವಟಿಕೆ ಕಂಡುಬಂದರೆ ಹುಣಸೂರು ಉಪವಿಭಾಗ ದೂ.08222-252434, ಹುಣಸೂರು ವಲಯ ದೂ.251690, ಪಿರಿಯಾಪಟ್ಟಣ ದೂ. 08223- 273373, ಕೆ.ಆರ್. ನಗರ ದೂ. 08223-264801 ಹಾಗೂ ಎಚ್.ಡಿ. ಕೋಟೆ ವಲಯ ದೂ. 08228-257095 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

