ಮೈಸೂರು

'ಈ ನೆಲದ ಚಲನಚಿತ್ರಗಳು ಬರಬೇಕು'

Published On :

ಕ.ಪ್ರ.ವಾರ್ತೆ ಮೈಸೂರು ಜು. 27
ಈ ನೆಲದ ಸಾಹಿತ್ಯ, ಸಂಸ್ಕೃತಿಯನ್ನು ಒಳಗೊಂಡ ಚಲನಚಿತ್ರಗಳು ಬರಬೇಕು ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂ.ರಾಜೀವ ತಾರಾನಾಥ್ ಹೇಳಿದರು.
ಮೈಸೂರು ವಿವಿ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರವು ಏರ್ಪಡಿಸಿರುವ ನಾಲ್ಕು ದಿನಗಳ ಚಲನಚಿತ್ರ ರಸಗ್ರಹಣ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಪಾಶ್ಚಾತ್ಯ ಸಂಸ್ಕೃತಿ, ಸಾಹಿತ್ಯ ನಮ್ಮ ಚಲನಚಿತ್ರಗಳ ಹೆಚ್ಚು ಪ್ರಭಾವ ಬೀರುತ್ತಿವೆ. ಈ ನೆಲದ ಸೊಗಡು ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು. ನಮ್ಮ ನಾಡಿನ ಸಂಗೀತ, ಕಲೆ, ನೃತ್ಯ, ಅಡುಗೆಯ ಮೇಲೆ ಅಂತಹ ಪರಿಣಾಮ ಬೀರುತ್ತಿಲ್ಲ. ಆದರೆ, ಸಾಹಿತ್ಯ, ಚನಲಚಿತ್ರದ ಮೇಲೆ ಪಾಶ್ಚಾತ್ಯ ಸಂಸ್ಕೃತಿ ಹಂಗು ಸಾಧಿಸುತ್ತಿದೆ. ಇದರಿಂದ ನಾವೆಲ್ಲರೂ ಹೊರಬರಬೇಕು. 70ರ ದಶಕದಲ್ಲಿ ಕಾದಂಬರಿಗಳ ಆಧಾರಿತ ಚಲನಚಿತ್ರಗಳು ಹೊರಬರುತ್ತಿದ್ದವು. ನಂತರ ಹೊಸ ಅಲೆ ಆರಂಭವಾಗಿ ನೈಜ ಚಿತ್ರಣಗಳು ಖಾಲಿಯಾದವು. ಒತ್ತಾಯಪೂರ್ವಕವಾಗಿ ಬೇರೆ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ಚಲನಚಿತ್ರಗಳು ಹೊರಬರುತ್ತಿವೆ ಎಂದರು.
ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ರಸಗ್ರಹಣ ಶಿಬಿರದ ನಿರ್ದೇಶಕ ಎನ್.ಎಸ್. ರಘುನಾಥ್ ಇದ್ದರು.
ಇಂದು ಎರಡು ಚಿತ್ರಗಳ ಪ್ರದರ್ಶನ: ಜು.28 ರಂದು ಸಂಜೆ 5.30ಕ್ಕೆ ಚಾರ್ಲಿ ಚಾಪ್ಲಿನ್ ಅವರ ಮಾಡರ್ನ್ ಟೈಮ್ಸ್ ಹಾಗೂ ಪುಟ್ಟಣ ಕಣಗಾಲರ ಕಥಾ ಸಂಗಮ ಚಲನಚಿತ್ರಗಳ ಪ್ರದರ್ಶನ ಹಾಗೂ ನಂತರ ಸಂವಾದ ಕಾರ್ಯಕ್ರಮ ಇರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.