ಮೈಸೂರು

ಜಾತಿ ಹೆಸರಲ್ಲಿ ಸಮಾಜ ವಿಂಗಡಣೆ ಸಲ್ಲ: ಬಿದರಿ

Published On :

ಮೈಸೂರು: ರಾಜಕೀಯ, ಆರ್ಥಿಕ ಕಾರಣಗಳಿಂದ ಹರಿದು ಹಂಚಿಹೋಗಿರುವ ಅನುಭವ ಮಂಟಪವನ್ನು ಮತ್ತೆ ಒಂದುಗೂಡಿಸುವ ಕಾರ್ಯ ಆಗಬೇಕಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಮಹದೇವ ಬಿದರಿ ಕರೆ ನೀಡಿದರು.
ಬಿಇಎಂಎಲ್ ಬಸವ ಸಮಿತಿ ಭಾನುವಾರ ಹೊಸಮಠದ ನಟರಾಜ ಮಂದಿರದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಮತ್ತು ಸಮಿತಿಯ 22ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಸವಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕ್ರಾಂತಿಕಾರಿ ಬಸವಣ್ಣ ಕಟ್ಟಿದ ಅನುಭವ ಮಂಟಪ ರಾಜಕೀಯವಾಗಿ ದುರ್ಬಳಕೆಯಾಗುತ್ತಿದೆ. ಉಪಜಾತಿಗಳ ಹೆಸರಿನಲ್ಲಿ ವಿಭಜನೆಯಾಗಿರುವ ಅನುಭವ ಮಂಟಪ ಮತ್ತೆ ಹಿಂದಿನ ಘನತೆ ಪಡೆದುಕೊಳ್ಳುವಂತೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜಾತಿ ವಿಂಗಡಣೆ ಅಪಾಯಕಾರಿ: ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಜಾತಿ ಹೆಸರಿನಲ್ಲಿ ಸಮಾಜ ವಿಂಗಡಣೆಯಾಗುತ್ತಿರುವುದು ಕೆಟ್ಟ ಬೆಳವಣಿಗೆ. ಇದು ದೇಶದ ಏಕತೆಗೂ ಕೊಡಲಿ ಪೆಟ್ಟು ಹಾಕಲಿದೆ. ಈಗ ಸಮಾಜ ವಿಭಜನೆ ಮಾಡುತ್ತಿರುವವರಿಗೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ಬಸವಣ್ಣನವರ ಅನುಭವ ಮಂಟಪದಲ್ಲಿ ಬಣಜಿಗ, ಶೆಟ್ಟಿ ಲಿಂಗಾಯಿತ, ಗಾಣಿಗರು ಇನ್ನು ಮುಂತಾದದವರು ಬಸವ ತತ್ವಕ್ಕೆ ಮಾರು ಹೋಗಿ ದ್ದರು ಎಂದರು. ಇದೇ ವೇಳೆ ಬಿಇಎಂಎಲ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸಿ.ಪಿ. ಬಸವರಾಜುಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.