ಮೈಸೂರು

ರೈತ ಕ್ಷೇತ್ರ ಪಾಠ ಶಾಲೆ ಸದ್ಬಳಕೆಯಾಗಲಿ

Published On :

ಕ.ಪ್ರ.ವಾರ್ತೆ ಹುಣಸೂರು ಜು. 28
ರೈತ ಕ್ಷೇತ್ರ ಪಾಠಶಾಲೆಯು ತೋಟಗಾರಿಕೆ ಬೆಳೆ ಬೆಳೆಯಲು ಸ್ಥಳೀಯವಾಗಿ ತಲೆದೋರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿದೆ. ರೈತರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹುಣಸೂರು ತಾಪಂ ಅಧ್ಯಕ್ಷೆ ದೇವಕಿ ತಿಮ್ಮನಾಯಕ ಕರೆ ನೀಡಿದರು.
ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ದೇವರಹಳ್ಳಿ ಗ್ರಾಮದ ರೈತ ಚಿಕ್ಕೇಗೌಡ ಅವರ ಜಮೀನಿನಲ್ಲಿ ತೋಟಗಾರಿಕೆ ಇಲಾಖೆಯು ಆಯೋಜಿಸಿದ್ದ 'ಆತ್ಮ' ಯೋಜನೆಯ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಶಕ ಕೆ. ಕೆಂಚೇಗೌಡ ಮಾತನಾಡಿ, ಕೃಷಿ ಭೂಮಿಯಲ್ಲಿ ಸತತವಾಗಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಲಘು ಪೋಷಕಾಂಶ ಕೊರತೆ ಕಂಡು ಬಂದಿದೆ. ಇವುಗಳ ಪೂರೈಕೆಗೆ ಟೊಮೆಟೋ ಬೆಳೆಯುವುದು ಅವಶ್ಯಕ. ಇದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದರು.
ಹಿರಿಯ ತೋಟಗಾರಿಕ ಸಹಾಯಕ ನಿರ್ದೇಶಕ ಎನ್. ಸೋಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, 'ಆತ್ಮ' ಯೋಜನೆಯಡಿ ತೋಟಗಾರಿಕಾ ಬೆಳೆಯಾದ ಟೊಮೆಟೋ ಬೆಳೆಯಲ್ಲಿ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಾನಿ ರೈತ ಸೇರಿದಂತೆ 24 ಜನ ಸ್ಥಳೀಯ ರೈತರು ಶಿಕ್ಷಣಾರ್ಥಿಗಳಾಗಿ ಭಾಗವಹಿಸಿದ್ದಾರೆ. ರೈತರಿಗೆ ಬಿತ್ತನೆಯಿಂದ ಬೆಳೆ ಕಟಾವಿನವರೆಗೆ ಭಾಗವಹಿಸಿ ಸಾಂಪ್ರದಾಯಿಕ ಪದ್ಧತಿಗೂ ಮತ್ತು ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆದ ಬೆಳೆಗೂ ಇರುವ ವ್ಯತ್ಯಾಸ ಕಂಡುಕೊಳ್ಳಬೇಕು. ರೈತರು ವೈಜ್ಞಾನಿಕ ಪದ್ಧತಿಯನ್ನೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹುಣಸೂರು ತಾಪಂ ಉಪಾಧ್ಯಕ್ಷ ಮಹದೇವ, 'ಆತ್ಮ' ಯೋಜನೆ ಉಪ ಯೋಜನಾ ನಿರ್ದೇಶಕ ಬಿ.ಎಸ್. ಅಂದಾನಿಗೌಡ, ಕೃಷಿ ತಜ್ಞ ಅರಸು ಮಲ್ಲಯ್ಯ, 'ಆತ್ಮ' ಯೋಜನೆ ವಿಷಯ ತಜ್ಞ ಸಿ.ಕೆ. ಸತೀಶ್, ಸದಸ್ಯ ಮಹದೇವ, ದಾನಿ ರೈತ ಚಿಕ್ಕೇಗೌಡ, ಗ್ರಾಪಂ ಸದಸ್ಯರಾದ ವಿಜಯ ಮುರುಳಿ, ಪುಟ್ಟಸ್ವಾಮಿಗೌಡ, ಮುಖಂಡರಾದ ವೆಂಕಟೇಗೌಡ, ಭೂಚಹಳ್ಳಿ ವೆಂಕಟೇಶ, ಕೃಷ್ಣೇಗೌಡ, ರವಿ, ಚಲುವೇಗೌಡ, ಶಿವಣ್ಣೇಗೌಡ, ಮೊಗಣ್ಣ ಇದ್ದರು.

ಕನ್ನಡಪ್ರಭ ಓದಿ...
'ಆತ್ಮ' ಯೋಜನೆಯ ಹುಣಸೂರು ತಾಲೂಕು ತಾಂತ್ರಿಕ ವ್ಯವಸ್ಥಾಪಕ ಡಾ.ಎಂ.ವಿ. ಗೋವಿಂದರಾಜು ಮಾತನಾಡಿ, 2012- 13ನೇ ಸಾಲಿನಲ್ಲಿ 'ಆತ್ಮ' ಯೋಜನೆಯಡಿ ಕೈಗೊಂಡ ಕಾರ್ಯಕ್ರಮಗಳ ಯಶೋಗಾಥೆಗಳು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರತಿದಿನ ಬರುತ್ತಿದೆ. ರೈತ ಬಾಂಧವರು ಪತ್ರಿಕೆಯನ್ನು ಓದಬೇಕು. ಕೃಷಿ ಜೊತೆಗೆ ಅದಕ್ಕೆ ಸಂಬಂಧಿಸಿದ ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಉಪಯುಕ್ತ ಮಾಹಿತಿಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.