ಅಪರಿಚಿತ ಮಹಿಳೆ ಸಾವು
ಮೈಸೂರು: ಅಪರಿಚಿತ ಮಹಿಳೆಯ ಶವವು ಹಾಸನ ರೈಲು ನಿಲ್ದಾಣದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಭಾನುವಾರ ಪತ್ತೆಯಾಗಿದೆ. ಈ ಸಂಬಂಧ ಅಸಹಜ ಮರಣ ಪ್ರಕರಣ ದಾಖಲಿಸಿಕೊಂಡು, ರೇಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದು, ಮೃತರ ವಾರಸುದಾರರು ಪತ್ತೆಯಾಗಿಲ್ಲ. ಚಹರೆ- 45 ವರ್ಷ, 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಕೋಲು ಮುಖ, ಉದ್ದನೆಯ ತಲೆ ಕೂದಲು, ಎಡಗೈ ಮೊಣಕೈ ಮೇಲೆ ಪಿ ಎಂದು ಹಚ್ಚೆ ಗುರುತಿದೆ. ನೀಲಿ ಬಿಳಿ ಚೌಕುಳಿಗಳಿರುವ ಪಂಚೆ, ಬಿಳಿ ಉದ್ದನೆಯ ಬಟ್ಟೆ, ಕಾಲಿಗೆ ಕರಿದಾರ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.
8 ರಿಂದ ವಿವಿಧೆಡೆ ಯಕ್ಷೋತ್ಸವ
ಮೈಸೂರು: ಶ್ರೀರಂಗಪಟ್ಟಣದ ಯಕ್ಷ ಕೌಮುದೀ ಟ್ರಸ್ಟ್ ವತಿಯಿಂದ ಜೂ. 8,9,15 ಮತ್ತು 16 ರಂದು ಯಕ್ಷೋತ್ಸವ ಕಾರ್ಯಕ್ರಮವನು ನಗರದ ವಿವಿಧೆಡೆ ಆಯೋಜಿಸಲಾಗಿದೆ. ಜೂ. 8ರ ಸಂಜೆ 5.30ಕ್ಕೆ ಆಂದೋಲನ ವೃತ್ತದ ಬಳಿಯ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಸರಸೇತು ಬಂಧ ಯಕ್ಷ ಪ್ರದರ್ಶನ ಏರ್ಪಡಿಸಿದ್ದು, ರಂಗ ಚಿಂತಕ ಎಂ. ಜಯರಾಮ ಪಾಟೀಲ್ ಉದ್ಘಾಟಿಸುವರು. ವೇದಾಂತ ಪ್ರಚಾರಿಣೀ ಸಭಾ ಅಧ್ಯಕ್ಷ ಎನ್. ಎಸ್. ದ್ವಾರಕನಾಥ್ ಅತಿಥಿಯಾಗಿ ಭಾಗವಹಿಸುವರು ಎಂದು ಯಕ್ಷ ಕೌಮುದೀ ಟ್ರಸ್ಟ್ ಅಧ್ಯಕ್ಷ ಗ.ನಾ. ಭಟ್ಟ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜೂ. 9ರ ಸಂಜೆ 5.30ಕ್ಕೆ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ರಾಜಾ ದ್ರೋಣ ಯಕ್ಷ ಪ್ರದರ್ಶನವಿದ್ದು, ಜೂ. 15ರ ಸಂಜೆ 5.30ಕ್ಕೆ ಕುವೆಂಪುನಗರದ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ಶ್ರೀರಾಮ ನಿರ್ಯಾಣ ತಾಳಮದ್ದಳೆ ಪ್ರದರ್ಶನ ಏರ್ಪಡಿಸಿದ್ದು, ಮಂಗಳೂರು ಬೀಡಿ ವರ್ಕ್ಸ್ ಎಂಡಿ ಎಂ. ಜಗನಾಥ ಶೆಣೈ, ಎನ್‌ಐಇ ಸೊಸೈಟಿ ಗೌರವ ಕಾರ್ಯದರ್ಶಿ ಎಸ್.ಎಲ್. ರಾಮಚಂದ್ರ ಅತಿಥಿಯಾಗಿ ಪಾಲ್ಗೊಳ್ಳುವರು. ಜೂ. 16ರ ಬೆಳಗ್ಗೆ 9ಕ್ಕೆ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಯಕ್ಷಗಾನ ವಿಚಾರ ಸಂಕಿರಣ ಪ್ರಾತ್ಯಕ್ಷಿಕೆ ನಡೆಯದೆ ಎಂದು ಗ.ನಾ. ಭಟ್ಟ ತಿಳಿಸಿದರು.
ಮಹಿಳೆಗೆ ವಂಚನೆ
ಮೈಸೂರು: ವಿವಿ ಪುರಂ ಠಾಣೆ ಪೊಲೀಸರು ಕಳೆದ ವಾರ ಬಂಧಿಸಿರುವ ಆರೋಪಿ ಹರೀಶ್ ಎಂಬಾತನು ಮತ್ತೊಬ್ಬ ಮಹಿಳೆಗೆ ವಂಚಿಸಿರಿವುದು ಬೆಳಕಿಗೆ ಬಂದಿದೆ. ಈ ಸಂಬಂಧ ನಜರ್‌ಬಾದ್ ಠಾಣೆಯಲ್ಲಿ ಆ ಮಹಿಳೆ ದೂರು ದಾಖಲಿಸಿದ್ದಾರೆ. ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಾಗನಹಳ್ಳಿ ನಿವಾಸಿ ಶಿವಣ್ಣ ಎಂಬವರ ಪುತ್ರ ಹರೀಶ್ ಅ. ಹರ್ಷ (26) ಬಂಧಿತ ಆರೋಪಿ. ಈತನು ಮಹಾಲಕ್ಷ್ಮಿ ಮತ್ತು ಅನಿತಾ ಎಂಬವರನು ವಂಚಿಸಿ, ಚಿನಾಭರಣ ಕಳವು ಮಾಡಿದ್ದು, ಪೊಲೀಸರು ಕಳೆದ ವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ವಿಚಾರ ಗೊತ್ತಾಗಿ ವಂಚನೆಗೊಳಗಾಗಿದ್ದ ಮತ್ತೊಬ್ಬ ಮಹಿಳೆ ದೂರು ಸಲ್ಲಿಸಿದ್ದಾರೆ. ಷೇರು ವ್ಯವಹಾರದಲ್ಲಿ ಹೆಚ್ಚಿನ ಲಾಭ ಕೊಡಿಸುವುದಾಗಿ ಹರೀಶ್ ಆ ಮಹಿಳೆಯನು ನಂಬಿಸಿ, 80 ಗ್ರಾಂ. ಚಿನಾಭರಣ, 30 ಸಾವಿರ ನಗದು ದೋಚಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಜರ್‌ಬಾದ್ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹೂತಿದ್ದ ಶವ ಹೊರತೆಗೆದು ಪರೀಕ್ಷೆ
ಮೈಸೂರು: ಕೊಲೆ ಶಂಕೆ ಹಿನೆಲೆಯಲ್ಲಿ ಹೂತಿದ್ದ ಶವವನು ಹೊರ ತೆಗೆದು ಮತ್ತೊಮ್ಮೆ ಶವಪರೀಕ್ಷೆ ನಡೆಸಿದ ಘಟನೆ ಬನಿಮಂಟಪ ಸ್ಮಶಾನದಲ್ಲಿ ಮಂಗಳವಾರ ನಡೆಯಿತು. ಬಿಎಂಶ್ರೀ ನಗರ ನಿವಾಸಿ ವಿಜಯಕುಮಾರ್ (45) ಎಂಬವರು ಮೃತಪಟ್ಟವರು. ಇವರು ಶ್ರೀರಂಗಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಮೃತಪಟ್ಟಿದ್ದರು. ಇದು ಸಹಜ ಸಾವು ಎಂದು ಪರಿಗಣಿಸಲಾಗಿತ್ತು. ಆದರೆ, ವಿಜಯಕುಮಾರ್ ಸಹೋದರ ಚಂದ್ರು ಎಂಬವರು ಕೊಲೆ ಶಂಕೆ ದೂರು ನೀಡಿದ್ದರು. ಈ ಹಿನೆಲೆಯಲ್ಲಿ ಶ್ರೀರಂಗಪಟ್ಟಣ ಠಾಣೆ ಪೊಲೀಸರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ವೈದ್ಯರು ಹೂತಿದ್ದ ಶವ ಹೊರ ತೆಗೆದು ಪರೀಕ್ಷೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

