23 ರಂದು ಮನೆ ಮನೆ ಕವಿಗೋಷ್ಠಿ
ಪಿರಿಯಾಪಟ್ಟಣ: ಇಲ್ಲಿನ ಶಿಕ್ಷಕರ ಭವನದಲ್ಲಿ ಜೂ.23ರ ಬೆಳಗ್ಗೆ 11ಕ್ಕೆ 161ನೇ ಮನೆ ಮನೆ ಕವಿಗೋಷ್ಠಿ ಏರ್ಪಡಿಸಿದೆ ಎಂದು ಮನೆ ಮನೆ ಕವಿಗೋಷ್ಠಿ ಬಳಗದ ಅಧ್ಯಕ್ಷ ಕಂಪ್ಲಾಪುರ ಮೋಹನ್ ಹೇಳಿದ್ದಾರೆ. ಬರಹಗಾರ ಹಾಗೂ ಕನ್ನಡಪರ ಸಂಘಟಕ ಕೊ.ಸು. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯ್ಕುಮಾರ್ ಕವಿಗೋಷ್ಠಿ ಉದ್ಘಾಟಿಸುವರು. ಮೈಸೂರು ವಿವಿ ಜಾನಪದ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಮಾನಾಪುರ ಹಾಗೂ ಮೈಸೂರಿನ ಸಿದ್ದಾರ್ಥನಗರ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪಿ. ಚಂದ್ರಶೇಖರ್ ಭಾಗವಹಿಸುವರು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 9880900893 ಸಂಪರ್ಕಿಸಬಹುದು.
ಚಿಕ್ಕಹೊನ್ನೂರು: ಛತ್ರ ಶಿಥಿಲ
ಬೈಲುಕುಪ್ಪೆ: ಬೈಲುಕುಪ್ಪೆ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಹೊನ್ನೂರು ಗ್ರಾಮದಲ್ಲಿನ ವೆಂಕಟರಮಣ ದೇವಸ್ಥಾನದ ಅನ್ನದಾನ ಛತ್ರ ಶಿಥಿಲವಾಗಿದೆ ಎಂದು ಇಲ್ಲಿನ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ದೊಡ್ಡಯ್ಯ ಹಾಗೂ ಸಮಿತಿಯ ಸದಸ್ಯರು ದೂರಿದ್ದಾರೆ. ಸಮಿತಿ ವತಿಯಿಂದ 1.5 ಲಕ್ಷ ಹಣ ಮಂಜೂರು ಮಾಡಿಸಿ ಹೊರಗಡೆಯಿಂದ ಬರುವ ಭಕ್ತಾದಿಗಳಿಗೆ ಅನ್ನ ಸಮರ್ಪಣೆಗಾಗಿ ಛತ್ರವನ್ನು ಕಟ್ಟಿಸಲಾಗಿದ್ದು, ಈ ಛತ್ರವು ಶಿಥಿಲಗೊಂಡು ಬೀಳುವ ಹಂತದಲ್ಲಿದೆ. ಹೊರಗಡೆಯಿಂದ ಬಂದ ಭಕ್ತಾಧಿಗಳು ಅಲ್ಲಿ ಕುಳಿತು ಊಟ ಮಾಡಲು ಭಯ ಪಡೆವಂತಾಗಿದೆ. ಕಾಮಗಾರಿ ಕಳಪೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಪಿರಿಯಾಪಟ್ಟಣ ಶಾಸಕರಾದ ಕೆ.ವೆಂಕಟೇಶ್ ಇತ್ತ ಗಮನ ಹರಿಸಿ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಹಾಗೂ ಸಂಪೂರ್ಣ ಹದಗೆಟ್ಟಿರುವ ಛತ್ರದ ದುರಸ್ತಿಗೆ ಮುಂದಾಗಿ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಟಿಪ್ಪರ್ ಕಳವು
ಪಿರಿಯಾಪಟ್ಟಣ: ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಟಿಪ್ಪರ್ ವಾಹನ ಕಳ್ಳತನವಾಗಿರುವ ಘಟನೆ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಭಾನುವಾರ ಮುಂಜಾನೆ ಜರುಗಿದೆ. ಬಸವೇಶ್ವರ ಕಾಲೋನಿಯ ನಿವಾಸಿ ದೊರೆಸ್ವಾಮಿ ಎಂಬವರಿಗೆ ಸೇರಿದ ಬಿಳಿ ಬಣ್ಣದ ಟಿಪ್ಪರ್ ಮನೆಯ ಮುಂಭಾಗ ನಿಲ್ಲಿಸಿದ್ದಾಗ ಕಳ್ಳತನವಾಗಿದೆ. ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

