ಉತ್ತಮ ಶಿಕ್ಷಕರಿಗೆ ಕೌಶಲ್ಯ ಮುಖ್ಯ: ಪ್ರೊ.ವೆಂಕಟರಾಮಯ್ಯ
ಕ.ಪ್ರ.ವಾರ್ತೆ ಮೈಸೂರು ಜೂ. 20
ಉತ್ತಮ ಶಿಕ್ಷಕರಾಗಲು ಜ್ಞಾನದ ಜತೆ ಕೌಶಲ್ಯವೂ ಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಹೇಳಿದರು.
ನಗರದ ಜ್ಞಾನಬುತ್ತಿ ಶಿಕ್ಷಣ ಸಂಸ್ಥೆಯು ಯುಜಿಸಿ-ನೆಟ್ ಪರೀಕ್ಷೆ ಕುರಿತ ತರಬೇತಿ ಶಿಬಿರದ ಅಧ್ಯಯನ ಸಾಮಗ್ರಿ ಬಿಡುಗಡೆ ಸಮಾರಂಭದಲ್ಲಿ ಅವರು ಶುಭ ಹಾರೈಸಿ ಮಾತನಾಡಿದರು. ಜ್ಞಾನದ ಜತೆಗೆ ಕೌಶಲ್ಯತೆಯೂ ಮುಖ್ಯ. ಆದ್ದರಿಂದ ನಮ್ಮ ಅಧ್ಯಯನ ಕೇವಲ ಒಂದೆ ವಿಷಯವನ್ನು ಕೇಂದ್ರೀಕರಿಸಬಾರದು. ಅದಕ್ಕೆ ಪೂರಕವಾದಿ ಅಧ್ಯಯನ ಮಾಡಬೇಕು. ನಮ್ಮ ಜ್ಞಾನ ಕ್ಷೇತ್ರವನ್ನು ವಿಸ್ತರಿಸಿಕೊಳ್ಳಬೇಕು. ಆಗ ಮಾತ್ರ ಪ್ರತಿಭಾವಂತರಾಗುತ್ತೀರಿ. ಅಲ್ಲದೆ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಉನ್ನತ ಶಿಕ್ಷಣ ಪೂರಕವಾಗುವುದರಿಂದ ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಪ್ರಾಧ್ಯಾಪಕ ಎಂ.ಕೃಷ್ಣೇಗೌಡ ಮಾತನಾಡಿ, ಸಾಕಷ್ಟು ಮಂದಿ ವಿದ್ಯಾರ್ಥಿಗಳು ತಮ್ಮಲ್ಲಿನ ಮಾಹಿತಿಯನ್ನೇ ಜ್ಞಾನ ಎಂದು ತಿಳಿದುಕೊಂಡಿದ್ದಾರೆ. ಅಮೆರಿಕ ದೇಶದ ಅಧ್ಯಕ್ಷ ಯಾರು, ಭಾರತದ ರಾಷ್ಟ್ರಪತಿ ಯಾರು ಮುಂತಾದ ವಿಷಯಗಳು ಕೇವಲ ಮಾಹಿತಿ ಅಷ್ಟೆ. ಆದರೆ ಇತ್ತೀಚೆಗೆ ಹಲವು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳು ಮಾಹಿತಿಯನ್ನು ಮುಖ್ಯ ಗುರಿಯಾಗಿಸಿಕೊಂಡಿವೆ. ಇದು ತಪ್ಪು. ವಿದ್ಯಾರ್ಥಿಗಳಿಗೆ ಜ್ಞಾನದ ಜತೆ ಕೌಶಲ್ಯ ಮುಖ್ಯ. ಆದರೆ ನಮ್ಮ ಶಾಲಾ, ಕಾಲೇಜುಗಳಲ್ಲಿ ಕಲಿಯುವ ಮತ್ತು ಕಲಿಸುವ ಪ್ರಕ್ರಿಯೆ ತಿಳಿಸುತ್ತಿಲ್ಲ ಎಂದರು.
ಉಪ ವಿಭಾಗಾಧಿಕಾರಿ ಬಸವರಾಜು ಅಧ್ಯಯನ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿದರು. ಸಂಸ್ಥೆಯ ಪ್ರೊ. ಮಲ್ಲಿಕಾರ್ಜುನಶಾಸ್ತ್ರಿ, ಪ್ರಹ್ಲಾದ್, ಜೈನಹಳ್ಳಿ ಸತ್ಯನಾರಾಯಣಗೌಡ, ಎಚ್.ಬಾಲಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

