ಮೈಸೂರು

ಕಾವಲುಗಾರರ ಮೇಲೆ ಹಲ್ಲೆ

Published On :

ಎಚ್.ಡಿ. ಕೋಟೆ: ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಅಕ್ರಮವಾಗಿ ಮೀನುಗಳನ್ನು ಹಿಡಿದು ಆಟೋದಲ್ಲಿ ಸಾಗಿಸುತ್ತಿದ್ದಾಗ, ತಡೆಯಲು ಹೋದ ಗಿರಿಜನ ಮೀನುಗಾರರ ಸಹಕಾರ ಸಂಘದ ಕಾವಲುಗಾರರನ್ನು ಕಳ್ಳರು ಥಳಿಸಿ ಪರಾರಿಯಾಗಿದ್ದಾರೆ. ರಾತ್ರಿ ವೇಳೆಯಲ್ಲಿ ಕದ್ದು ಮೀನುಗಳನ್ನು ಹಿಡಿಯುವುದನ್ನು ತಡೆಯುವುದಕ್ಕಾಗಿ ಸಹಕಾರ ಸಂಘದ ವತಿಯಿಂದ ಕಾವಲುಗಾರರನ್ನು ನೇಮಕ ಮಾಡಿದ್ದಾರೆ. ಗುರುವಾರ ಬೆಳಗ್ಗೆ 8 ಗಂಟೆಯಲ್ಲಿ ಮೀನುಗಳನ್ನು ಆಟೋದಲ್ಲಿ ಸಾಗಿಸುತ್ತಿರುವುದನ್ನು ಕಂಡ ಕಾವಲುಗಾರರಾದ ವೆಂಕಟೇಶ್, ಮುರುಗೇಶ್, ಸಣ್ಣಪ್ಪನಾಯಕ, ರಾಜೇಶ್ ಅವರು ಆಟೋವನ್ನು ಹಿಂಬಾಲಿಸಿ ಬಳ್ಳೆ ಗೇಟಿನ ಬಳಿ ತಡೆದು ಹಿಡಿದು ನಿಲ್ಲಿಸಿದಾಗ ಹಿಂದಿನಿಂದ ಮೂರು ಬೈಕ್‌ನಲ್ಲಿ ಬಂದ 9 ಮಂದಿ ಕಾವಲುಗಾರರ ಮೇಲೆ ದೊಣ್ಣೆ, ಮಚ್ಚಿನಿಂದ ಹಲ್ಲೆ ನಡೆಸಿ, ಮೀನು ಸಮೇತ ಪರಾರಿಯಾದರು.ಕಾವಲುಗಾರರು ಬೀಚನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗಣಪತಿ ಮಹೋತ್ಸವ
ಬೈಲಕುಪ್ಪೆ: ಪ್ರಸನ್ನ ಗಣಪತಿ ಸಮಿತಿಯ ವತಿಯಿಂದ ಪ್ರಸನ್ನ ಗಣಪತಿ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬೈಲಕುಪ್ಪೆ ಬಿ.ಎಂ. ರಸ್ತೆಯ ಪಕ್ಕದಲ್ಲಿರುವ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಹೋಮ, ನೈವೇದ್ಯಾಭಿಷೇಕ, ಬಂದಂತಹ ಭಕ್ತಾದಿಗಳಿಗೆ ಅನ್ನದಾನ, ಸಾಯಂಕಾಲ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆಯನ್ನು ಒಡ್ಡೋಲಗದ ಮುಖಾಂತರ ನೆರವೇರಿಸಲಾಯಿತು.ಸಮಿತಿ ಅಧ್ಯಕ್ಷ ಕೆ. ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎನ್. ಸ್ವಾಮಿ, ಸದಸ್ಯರಾದ ಕಾಂತರಾಜ್, ಸುಬ್ರಹ್ಮಣ್ಯ, ಕೆ. ರಮೇಶ್, ಮರಿನಾಯಕ, ಲೋಕೇಶ್, ಮಂಜುನಾಥ್, ಅಣ್ಣಪ್ಪ, ಜಗದೀಶ್, ಜಯರಾಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.