ಆಯುರ್ವೇದದ ಅಭಿವೃದ್ಧಿಗೆ ಮುಂದಾಗಬೇಕು
ಕ.ಪ್ರ.ವಾರ್ತೆ ಮೈಸೂರು ಜೂ. 26
ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದದ ಅಭಿವೃದ್ಧಿಗೆ ಸಂಶೋಧಕರು ಮುಂದಾಗಬೇಕು ಎಂದು ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ರೇಣುಕಾರ್ಯ ಹೇಳಿದರು.
ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯ 150ನೇ ವರ್ಷಾಚರಣೆ ಅಂಗವಾಗಿ ಔಷಧ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣಧಲ್ಲಿ ಬುಧವಾರ ಏರ್ಪಡಿಸಿದ್ದ ಮೆಟಬಾಲಿಕ್ ಕಾಯಿಲೆಗಳ ನಿವಾರಣೆಯಲ್ಲಿ ಸಸ್ಯರಾಸಾಯನಿಕಗಳು, ಗಿಡಮೂಲಿಕೆಗಳ ಸೂತ್ರೀಕರಣ ಹಾಗೂ ಔಷಧಗಳ ಸಾಂಪ್ರದಾಯಿಕ ವ್ಯವಸ್ಥೆಗಳಿಂದ ಪಡೆದ ಔಷಧಗಳ ಕುರಿತು ಇತ್ತೀಚಿನ ಪ್ರವೃತ್ತಿಗಳು ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಜನರ ಪ್ರಾಥಮಿಕ ಅಗತ್ಯತೆಗಳಲ್ಲಿ ಒಂದಾಗ ಆರೋಗ್ಯ ಹಾಗೂ ಔಷಧಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಅಲೋಪತಿ, ಆಯುರ್ವೇದದಲ್ಲಿ ಹೊಸ ಅಂಶಗಳನ್ನು ಕಂಡುಹಿಡಿಯಬೇಕು. ಜತೆಗೆ ಇವುಗಳ ಆರ್ಥಿಕತೆಯ ಬಗ್ಗೆಯೂ ಗಮನಹರಿಸಬೇಕು. 1997-2007ರ ನಡುವೆ ಸುಮಾರು 72 ದಶಲಕ್ಷ ಮಂದಿ ಬದಲಿ ವ್ಯವಸ್ಥೆ ಬಳಸಿದ್ದಾರೆ. ಅದರ ಮೇಲೆ 34 ಬಿಲಿಯನ್ ಡಾಲರ್ ಖರ್ಚು ಮಾಡಲಾಗಿದ್ದು, ಬದಲಿ ಔಷಧ ಕ್ರಮಗಳನ್ನು ಉಪಯೋಗಿಸಿ ಅದರಿಂದ ಅನುಕೂಲವಿದೆ ಎಂದರು. ಬೆಳಗಾವಿಯಲ್ಲಿರುವ ಔಷಧ ಸಂಶೋಧನೆಗಳ ಭಾರತೀಯ ಮಂಡಳಿಯ ಔಷಧ ಸಂಶೋಧನೆಗಳ ಪ್ರಾದೇಶಿಕ ಕೆಂದ್ರದ ಹಿರಿಯ ವಿಜ್ಞಾನಿ ಡಾ. ಹರ್ಷ ಹೆಗ್ಡೆ, ಶಾರದಾ ವಿಲಾಶ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಗೌರವ ಕಾರ್ಯದರ್ಶಿ ಎಸ್. ರವಿಶಂಕರ್, ಶಾರದಾ ವಿಲಾಸ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹನುಮಂತಾಚಾರ್ ಜೋಷಿ, ಎಂ. ದಿನೇಶ್ ಇದ್ದರು.
ತಮಿಳುನಾಡಿಗೆ ನೀರು ಹರಿಸಿದ್ದಕ್ಕೆ ಖಂಡನೆ
ಮೈಸೂರು: ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿದ ಕ್ರಮವನ್ನುಮೈಸೂರು ಜಿಲ್ಲಾ ಸರ್ವ ಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ ಖಂಡಿಸಿದ್ದಾರೆ.
ಕಳೆದ 2012ರಲ್ಲಿ ನೀರಿಲ್ಲದ ಸಮಯದಲ್ಲಿ ಕಬಿನಿ ಬಲದಂಡೆ ನಾಲೆಗಳಿಗೆ ಕಟ್ಟು ನೀರನ್ನು ಕೊಟ್ಟು ಸಂಬಂಧಿಸಿದ ಅಚ್ಚುಕಟ್ಟು ಪ್ರದೇಶದರೈತರಿಗೆ ನೀರಿನ ತೊಂದರೆಯಿಂದ ಬೆಳೆ ಹಾನಿ ಮತ್ತು ಬೆಳೆದ ಬೆಳೆಗಳು ಹಲವಾರು ರೋಗ- ರುಜಿನಗಳಿಗೆ ುತ್ತಾಗಿ ರೈತರು ಭವಣೆಪಡುವಂತಾಗಿದೆ.
ಇಂತಹ ಪರಿಸ್ಥಿತಿ ಮುಂದೆ ಬಾರದಂತೆ ಮುನ್ನೆಚ್ಚರಿಕೆ ಕ್ರಮದಿಂದ ನೀರು ಹರಿಸಬಾರದು. ಒಂದು ವೇಳೆ ಹರಿಸಿದಲ್ಲಿ ಉಗ್ರವಾಗಿ ಪ್ರತಿಭಟಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

