ರೋಲ್ಕಾಲ್ ಸಂಘಟನೆಗಳಿಗೆ ಜನರೇ ಬುದ್ಧಿ ಕಲಿಸಲಿ
ನಂಜನಗೂಡು: ರಾಜ್ಯದಲ್ಲಿ ನಾಯಿಕೊಡೆಗಳಂತೆ ಹಲವು ಡೋಂಗಿ ಸಂಘ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದ್ದು, ಸಮಾಜಸೇವೆ ಹೆಸರಿನಲ್ಲಿ ಸಾರ್ವಜನಿಕರಿಂದ ರೋಲ್ಕಾಲ್ ಮಾಡುವಂತಹ ಸಂಘವನ್ನು ಜನಸಾಮಾನ್ಯರೆ ಬುದ್ಧಿ ಕಲಿಸಬೇಕೆಂದು ರಾಜ್ಯ ಕನ್ನಡ ಕಾವಲುಪಡೆ ಸಮಿತಿ ಅಧ್ಯಕ್ಷ ಎಂ. ಮೋಹನಕುಮಾರ್ ಗೌಡ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನೂತನವಾಗಿ ಆಯ್ಕೆಯಾದ ಪಟ್ಟಣದ ಕನ್ನಡ ಕಾವಲು ಸಮಿತಿ ಅಧ್ಯಕ್ಷ ಶ್ರೇಯಸ್ಗೌಡ ಅವರಿಗೆ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಸಂಘ ಸಂಸ್ಥೆಗಳು ನಿಂತ ನೀರಾಗದೆ ಶೋಷಿತರ, ಬಡವರ ಸೇವೆ ಹಾಗೂ ರಾಜ್ಯದ ನೆಲ, ಜಲ, ಭಾಷೆಗಳ ಸಂರಕ್ಷಣೆಗೆ ಮುಂದಾಗಬೇಕು. ಕನ್ನಡಕ್ಕೆ ಧಕ್ಕೆ ಬಂದಾಗ ರಾಜ್ಯದ ಎಲ್ಲ ಕನ್ನಡ ಪರ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಕಪಿಲಾ ನದಿಯಿಂದ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುತ್ತಿದ್ದು, ದಕ್ಷಿಣ ಕಾಶಿ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಭಾರಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಧರ್ಮೇಂದ್ರ, ಮುಖಂಡರಾದ ಮಂಜುಗೌಡ, ಸಯೀದ್, ಸಂಜೀವ್, ವಿದ್ಯಾಸಾಗರ, ಮಂಜು, ಎಸ್.ರವಿ, ಪ್ರಮೋದಗೌಡ, ಗಿರೀಶ್, ಉಮೇಶ್, ಶಿವರಾಜ್, ಪ್ರವೀಣ್, ಶ್ರೀಕಾಂತ್, ಮಾಜಿ ಪುರಸಭಾ ಉಪಾಧ್ಯಕ್ಷ ಎನ್. ಇಂದ್ರ, ಮಾಜಿ ಸದಸ್ಯ ನಾಸೀರ್ ಖಾನ್, ಪುಟ್ಟಸ್ವಾಮಿ, ಕೆಂಚಪ್ಪ ಇದ್ದರು.
ಗುರುಪುರ: ಡೆಂಘೀ ವಿರುದ್ಧ ಜಾಥಾ
ಹುಣಸೂರು: ತಾಲೂಕಿನ ಗುರುಪುರದಲ್ಲಿ ಆರೋಗ್ಯ ಇಲಾಖೆ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಯು ಶಾಲಾ ವಿದ್ಯಾರ್ಥಿಗಳೊಂದಿಗೆ ಡೆಂಘೀ ಜ್ವರದ ಬಗ್ಗೆ ಜಾಥಾ ನಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಗ್ರಾಮದ ಬೀದಿಗಳಲ್ಲಿ ಶಾಲಾ ಮಕ್ಕಳೊಂದಿಗೆ ಮೆರವಣಿಗೆ ನಡೆಸಿದ ಶಿಕ್ಷಕರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಘೋಷಣೆ ಕೂಗಿದರು. ಆರೋಗ್ಯ ಸಹಾಯಕಿ ಭಾಗ್ಯ ಡೆಂಘೀ ಜ್ವರ ಹರಡುವ ಹಾಗೂ ನಿಯಂತ್ರಿಸುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಆಫೀಜ್ ಶರೀಫ್, ನೈರ್ಮಲ್ಯ ಸಮಿತಿಯ ಕುಮಾರ್, ತಾಜುನ್ನೀಸಾ ಇದ್ದರು.
ಶಾಲಾ ಮಂತ್ರಿ ಮಂಡಲ ರಚನೆ: ಗುರುಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 2013-14ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಚುನಾವಣೆ ನಡೆಸಿ ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಶಿಕ್ಷಕ ಶ್ರೀಶೈಲ ಬೀಳಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

