ದ್ವಿತೀಯ ಪಿಯುಸಿ ಪಠ್ಯಪುಸ್ತಕ ಲಭ್ಯ
ಮೈಸೂರು: ನಗರ ರಾಮಸ್ವಾಮಿ ವೃತ್ತದ ಬಳಿ ಇರುವ ಆಕ್ಸ್ಫರ್ಡ್ ಮಳಿಗೆಯಲ್ಲಿ ದ್ವಿತೀಯ ಪಿಯುಸಿಯ ನೂತನ ಪಠ್ಯಕ್ರಮದ ಪುಸ್ತಕಗಳಾದ ಪಿಸಿಎಂಬಿ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಎಲ್ಲಾ ಭಾಷೆಗಳ ಪಠ್ಯ ಪುಸ್ತಕಗಳು ಹಾಗೂ ಪುನರಾವರ್ತನೆ ಪುಸ್ತಕಗಳು ಲಭ್ಯವಿದೆ ಎಂದು ವ್ಯವಸ್ಥಾಪಕ ಕೆ.ಜಿ. ವಿನಯ್ಕುಮಾರ್ ತಿಳಿಸಿದ್ದಾರೆ. ರೆಫರೆನ್ಸ್ ಪುಸ್ತಕಗಳನ್ನು ಶೇ. 20 ರಷ್ಟು ರಿಯಾಯಿತಿ ದರದಲ್ಲಿ ಸರಬರಾಜು ಮಾಡಲಾಗುತ್ತದೆ.
ಮಾಹಿತಿ ಹಕ್ಕು ಆಂದೋಲನ
ಭ್ರಷ್ಟಾಚಾರ ವಿರೋಧಿ ಆಂದೋಲನ ಸಮಿತಿಯವರು ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಸಾರ್ವಜನಿಕ ಗ್ರಂಥಾಲಯ ಕುವೆಂಪುನಗರ ಶಾಖೆಯ ಎದುರು ಭಾನುವಾರ ಬೆಳಗ್ಗೆ ಮಾಹಿತಿ ಹಕ್ಕು ಜನ ಜಾಗೃತಿ ಪ್ರಚಾರ ಆಂದೋಲನ ಹಮ್ಮಿಕೊಂಡಿದ್ದರು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲು ಈಗಲೂ ಜನರಿಗೆ ಹಿಂಜರಿಕೆ, ತಿಳಿವಳಿಕೆ ಕೊರತೆ ಇದೆ. ವಿದ್ಯಾವಂತರಲ್ಲೂ ಮಾಹಿತಿಯ ಕೊರತೆ ಇದೆ. ಮಾಹಿತಿ ಹಕ್ಕು ಕಾಯ್ದೆಯಿಂದ ಭ್ರಷ್ಟಾಚಾರ, ಅಕ್ರಮಗಳ ತಡೆಯಬಹುದು ಎಂದ ಅವರು, ಗ್ರಂಥಾಲಯಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಮಾಹಿತಿ ಹಕ್ಕು ಕುರಿತ ಕರಪತ್ರ ಹಂಚಿದರು. ಸಮಿತಿಯ ಅಧ್ಯಕ್ಷ ಜಿ. ನಾಗೇಂದ್ರ ಶರ್ಮ ನೇತೃತ್ವ ವಹಿಸಿದ್ದರು.
ಚುನಾವಣೆಯಲ್ಲಿ ಗೆಲ್ಲಿಸಲು ಮನವಿ
ಮೇ 5 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕೆ.ಆರ್. ಕ್ಷೇತ್ರದಿಂದ ಸ್ಪರ್ಧಿಸುವ ಯಾವುದೇ ಪಕ್ಷದ ಕುರುಬ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕೃಷ್ಣರಾಜ ಯುವಜನ ಬಳಗದ ಅಧ್ಯಕ್ಷ ನಂಜಪ್ಪ ಮನವಿ ಮಾಡಿದ್ದಾರೆ. ಯಾರು ಕುರುಬ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಾರೋ ಅಂತವರಿಗೆ ಸಮುದಾಯದವದರು ಮನ್ನಣೆ ನೀಡಬೇಕು. ಕಳೆದ ನಗರಪಾಲಿಕೆ ಚುನಾವಣೆಯಲ್ಲಿ ಸಮಾಜದ ಸ್ಪರ್ಧಿಗಳು ಪರಾಜಿತರಾಗಲು ಸಮುದಾಯದ ರಾಜಕಾರಣಿಗಳೆ ಕಾರಣರಾಗಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

