ಮೈಸೂರು

ನ್ಯಾಕ್ ಮಾನ್ಯತೆಗೆ 44 ಕಾಲೇಜು

Published On :

ಮೈಸೂರು: ರಾಜ್ಯದ 44 ಸರ್ಕಾರಿ ಕಾಲೇಜುಗಳು ಹೊಸದಾಗಿ ನ್ಯಾಕ್ (ರಾಷ್ಟ್ರೀಯ ಪರೀಕ್ಷೆ ಮತ್ತು ಮಾನ್ಯತಾ ಸಂಸ್ಥೆ) ಮೌಲ್ಯಮಾಪನಕ್ಕೆ ಒಳಪಡಲು ಸಿದ್ಧವಾಗುತ್ತಿವೆ.
40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 2 ಸರ್ಕಾರಿ ಗೃಹ ವಿಜ್ಞಾನ ಮಹಿಳಾ ಕಾಲೇಜು ಹಾಗೂ 2 ಸರ್ಕಾರಿ ಕಾನೂನು ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆಯಲು ಸಿದ್ಧಗೊಳ್ಳುತ್ತಿವೆ.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ 2006- 07ರ ನಂತರ ಆರಂಭಗೊಂಡು 5 ವರ್ಷ ಪೂರೈಸಿದ 44 ಸರ್ಕಾರಿ ಕಾಲೇಜುಗಳು ನ್ಯಾಕ್ ಮೌಲ್ಯಮಾಪನಕ್ಕೆ ಒಳಪಡುವುದು ಕಡ್ಡಾಯ. ಈ ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡಲು ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಈ ಕಾಲೇಜುಗಳು ಹೊಂದಿವೆ.
ಈ 44 ಸರ್ಕಾರಿ ಕಾಲೇಜುಗಳು ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಗೆ ಒಳಪಡಲು, ಮೌಲ್ಯಮಾಪನ ಪೂರ್ವ ಸಿದ್ಧತೆಗಾಗಿ 2012- 13ನೇ ಸಾಲಿನ ಮುಂದುವರಿಕೆ ಕಾರ್ಯಕ್ರಮ ರಾಷ್ಟ್ರೀಯ ಅಂಗಿಕೃತ ಪರಿಷತ್ತು ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯು ಅನುದಾನ ಬಿಡುಗಡೆ ಮಾಡಿದೆ. 44 ಕಾಲೇಜುಗಳಿಗೆ ತಲಾ 1.20 ಲಕ್ಷನಂತೆ ಒಟ್ಟು 52.80 ಲಕ್ಷ ಅನುದಾನ ನೀಡಿದೆ.
ವೆಬ್‌ಸೈಟ್ ನಿರ್ಮಿಸಬೇಕು: ವೆಬ್‌ಸೈಟ್ ನಿರ್ಮಾಣಕ್ಕಾಗಿ 10 ಸಾವಿರ, ಸ್ವಯಂ ಮೌಲ್ಯಮಾಪನ ವರದಿ ತಯಾರಿಸಲು 35 ಸಾವಿರ ಹಾಗೂ ಮೌಲ್ಯಮಾಪನ ಶುಲ್ಕ ಪಾವತಿಸಲು 75 ಸಾವಿರ ಸೇರಿ ಒಟ್ಟು 1.20 ಲಕ್ಷವನ್ನು ಪ್ರತಿ ಕಾಲೇಜುಗಳಿಗೆ ನೀಡಲಾಗಿದೆ. ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಯ ಪೂರ್ವ ಸಿದ್ಧತೆಗಾಗಿ ಮಾತ್ರ ಈ ಅನುದಾನ ಬಳಸಿಕೊಳ್ಳಲು ಸಂಬಂಧಿಸಿದ ಕಾಲೇಜುಗಳ ಪ್ರಾಂಶುಪಾಲರಿಗೆ ಅನುಮತಿ ನೀಡಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಡಾ.ಎನ್.ಎಸ್. ಚನ್ನಪ್ಪಗೌಡ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಬಿ. ಶೇಖರ್ ಗೋಪಿನಾಥಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.