ಮೈಸೂರು

ಬಸಂತ್ ಕೆಜೆಪಿ ಸೇರಲು ವಿಶ್ವನಾಥ್ ಕುತಂತ್ರ ಕಾರಣ

Published On :

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಮಾ.25
ಮಾಜಿ ಸಚಿವ ಎಸ್. ನಂಜಪ್ಪ ಅವರ ಪುತ್ರ ಕೆ.ಎನ್. ಬಸಂತ್ ಜೆಡಿಎಸ್ ಬಿಟ್ಟು ಕೆಜೆಪಿ ಸೇರಲು ಸಂಸದ ಎಚ್. ವಿಶ್ವನಾಥ್ ಅವರ ಕುತಂತ್ರ ರಾಜಕಾರಣವೇ ಕಾರಣ ಎಂದು ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್ ಆರೋಪಿಸಿದರು.
ಈ ಹಿಂದೆ ಮಂಚನಹಳ್ಳಿ ಮಹದೇವ್ ಅವರನ್ನು ಕಾಂಗ್ರೆಸ್‌ಗೆ ಬಂದ ನಂತರ ಸಂಸದರ ಸ್ಥಾನಕ್ಕೆ ಮತ್ತು ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡದೆ ಸಂಪೂರ್ಣವಾಗಿ ನಿರ್ನಾಮ ಮಾಡಿದ ಅವರು, ಈಗ ಬಸಂತ್ ಅವರನ್ನು ಬಳಸಿಕೊಂಡು ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಬಸಂತ್ ಈಗ ಸುಸೈಡ್ ಬಾಂಬರ್ ಆಗಿದ್ದು, ತಮ್ಮ ರಾಜಕೀಯ ಗೋರಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ನಂಜಪ್ಪನವರ ಕುಟುಂಬಕ್ಕೆ ಯಾವುದೆ ಅನ್ಯಾಯ ಮಾಡಿಲ್ಲ. ಅವರೆ ಪಕ್ಷ ತೊರೆದು ದ್ರೋಹ ಮಾಡಿದ್ದಾರೆ. ಜನಪರ ಕೆಲಸ ಮಾಡಿ ಜನ ನಾಯಕರಾಗಿರುವ ಸಾ.ರಾ. ಮಹೇಶ್ ಗೆಲವು ತಡೆಯಲು ಕುತಂತ್ರಿಗಳಿಂದ ಸಾಧ್ಯವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.