ಮೈಸೂರು

ಮರಳು ದಂಧೆಗೆ ಕಡಿವಾಣ ಹಾಕಿದ್ದರಿಂದ ಪ್ರತಿಭಟನೆ: ಆರೋಪ

Published On :

ಕ.ಪ್ರ. ವಾರ್ತೆ ಟಿ. ನರಸೀಪುರ, ಮಾ.25
ಟಿಪ್ಪರ್‌ಗಳಲ್ಲಿ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಿದ್ದರಿಂದ ಜಿಲ್ಲಾಡಳಿತವನ್ನು ಬ್ಲಾಕ್‌ಮೇಲ್ ಮಾಡಲು ಟಿಪ್ಪರ್ ಲಾರಿಗಳ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ ಎಂದು ತಾಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಪುಟ್ಟಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ತಾಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿಗಳು ನೂತನ ಮರಳು ನೀತಿ ಜಾರಿಗೆ ತರಲು ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ 1500ಕ್ಕೂ ಹೆಚ್ಚು ಸ್ಥಳೀಯ ಲಾರಿ ಮಾಲೀಕರು ಮತ್ತು ಚಾಲಕರ ಕುಟುಂಬಗಳ ಜೀವನ ನಿರ್ವಹಣೆ ನೆಮ್ಮದಿಯಿಂದ ಸಾಗುವಂತಾಗಿದೆ. ಸರ್ಕಾರಕ್ಕೆ ಸೋರಿಕೆಯಾಗುತ್ತಿದ್ದ ಆದಾಯಕ್ಕೂ ಕತ್ತರಿ ಬಿದ್ದಿದೆ ಎಂದರು.  
ಕಾನೂನು, ನೀತಿ ಮತ್ತು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಜಿಲ್ಲಾಡಳಿವನ್ನೇ ಬ್ಲಾಕ್‌ಮೇಲ್ ಮಾಡುವ ಟಿಪ್ಪರ್ ಲಾರಿ ಮಾಲೀಕರ ಮುಷ್ಕರಕ್ಕೆ ಯಾವುದೇ ಬೆಂಬಲವನ್ನು ನಮ್ಮ ಸಂಘಟನೆ ನೀಡುವುದಿಲ್ಲ. ಜಿಲ್ಲೆಗೆ ಅಗತ್ಯವಿರುವ ಮರಳು ಸರಬರಾಜನ್ನು ನಾವೇ ಮಾಡುತ್ತೇವೆ. ಟಿಪ್ಪರ್ ಮಾಲೀಕರ ಮುಷ್ಕರಕ್ಕೆ ದಿ ಮೈಸೂರು ಸಿಟಿ ಮಾಲೀಕರ ಸಂಘ ಬೆಂಬಲ ಸೂಚಿಸಿದೆ. ಪ್ರತಿಭಟನೆ ಆರಂಭಿಸುವ ಮೊದಲು ಸ್ಥಳೀಯ ಲಾರಿ ಮಾಲೀಕರ ಅಭಿಪ್ರಾಯ ಕೇಳುವ ಸೌಜನ್ಯವೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಖಲೀಲ್ ಅಹಮದ್, ಗೌರವ ಕಾರ್ಯದರ್ಶಿ ಸಮೀಉಲ್ಲಾ, ಸಂಘಟನಾ ಕಾರ್ಯದರ್ಶಿ ಎಂ. ಮಂಜುನಾಥ್, ಖಜಾಂಚಿ ರವೀಶ್, ಲಾರಿ ಮಾಲೀಕರಾದ ನಟರಾಜು, ಕೃಷ್ಣ, ನಾಜೀಂ ಷರೀಫ್, ರಿಹಾನ್, ಏಜಾಜ್ ಅಹಮದ್, ಮನ್ಸೂರ್, ಸಲಾಂಸಾಬ್, ಸಲೀಂ ಪಾಷ, ರಂಗಪ್ಪ, ಸಂತೋಷ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.