ರಂಗಾಯಣ ಸಂಘರ್ಷ 4ನೇ ದಿನಕ್ಕೆ...
ಕ.ಪ್ರ.ವಾರ್ತೆ ಮೈಸೂರು ಮಾ.25
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆದ ಅನ್ಯಾಯ ಖಂಡಿಸಿ ಸಾಹಿತಿಗಳು- ಕಲಾವಿದರ ಒಕ್ಕೂಟದಡಿ ರಂಗಾಯಣದ ಮುಂಭಾಗ ನಡೆಸುತ್ತಿರುವ ಹೋರಾಟವು ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿತು.
ಮೈಸೂರಿನ ಸಾಹಿತಿಗಳು, ರಂಗಾಯಣ ಕಲಾವಿದರು, ರಂಗಾಸಕ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ರಂಗಾಯಣ ಉಳಿಸಲು ಮುಂದಾಗುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.
ತಮಟೆ ಬಾರಿಸಿ ರಂಗ ಗೀತೆ ಪ್ರಸ್ತುತಪಡಿಸಿ ಆಡಳಿತಶಾಹಿ ನಡೆದುಕೊಳ್ಳುವ ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಶ್ವರಂಗಭೂಮಿ ದಿನಾಚರಣೆಗೆ ಇನ್ನೆರಡು ದಿನ ಬಾಕಿ ಇದ್ದು, ಈ ಸಂದರ್ಭದಲ್ಲಿ ಸರ್ಕಾರ ಕೆಟ್ಟ ಸಂದೇಶ ನೀಡುತ್ತಿದೆ ಎಂದು ಜರಿದರು.
ರಂಗಾಯಣ ಕಲಾವಿದರು ಬೆಳಗ್ಗೆಯಿಂದ ಸಂಜೆಯವರೆಗೆ ನಡೆಸುತ್ತಿರುವ ಹೋರಾಟಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದರಿಂದ ತಾಳ್ಮೆ ಕಳೆದುಕೊಳ್ಳುತ್ತಿರುವ ಸಾಹಿತಿಗಳ ವಲಯ ಕಟು ಭಾಷೆಯಲ್ಲಿಯೇ ಸರ್ಕಾರದ ಧೋರಣೆ ಖಂಡಿಸುತ್ತಿದೆ. ರಂಗ ಸಮಾಜದ ನಿರ್ಲಜ್ಜ ಸದಸ್ಯರು ರಂಗಾಯಣ ಉಳಿಸುವ ಬದಲು ನಾಶ ಮಾಡುತ್ತಿದ್ದಾರೆ. ಇವರ ಜತೆ ಇಲ್ಲಿಯೇ ಬೆಳೆದ ಮಂಡ್ಯ ರಮೇಶ್ ರೀತಿಯೂ ಹೇಯವಾಗಿದೆ ಎಂದರು.
ಕಲಾವಿದರ ಹೋರಾಟಕ್ಕೆ ಬೆಂಬಲ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಮ.ಗು. ಸದಾನಂದಯ್ಯ, ರಂಗ ಸಮಾಜದ ಸದಸ್ಯರು ಇಲ್ಲಿಯವೆರೆಗೆ ಒಳ್ಳೆಯ ನಿರ್ಧಾರ ತೆಗೆದುಕೊಂಡ ನಿದರ್ಶನಗಳೆ ಇಲ್ಲ. ಸರ್ಕಾರದಿಂದ ನೀಡುವ ಭತ್ಯೆಗಾಗಿ ತಿರುಗಾಡುವ ಇವರು ರಂಗಭೂಮಿಗೆ ಮೋಸ ಮಾಡುತ್ತಿದ್ದಾರೆ. ರಂಗಾಯಣದ ಅಭಿವೃದ್ಧಿಯತ್ತ ಆಲೋಚನೆ ಮಾಡಬೇಕಾದವರು ಈ ರೀತಿ ನಡೆದುಕೊಳ್ಳುತ್ತಿರುವುದು ದಿಗ್ಭ್ರಮೆ ಉಂಟು ಮಾಡಿದೆ ಎಂದರು.
ಪ್ರತಿಪರ ಚಿಂತಕ ಪ. ಮಲ್ಲೇಶ್ ಮಾತನಾಡಿ, ನಿತ್ಯ ಬದುಕಿನ ನೋವು ನಲಿವುಗಳನ್ನು ಜನಮಾನಸಕ್ಕೆ ತೆಗೆದುಕೊಂಡು ಹೋಗುವ ಮಾಧ್ಯಮವೇ ನಾಟಕ. ಹೆಸರಾಂತ ಸಾಹಿತಿಗಳ ಬರಹಗಳು ಜನರನ್ನು ಮುಟ್ಟಿದ್ದು, ನಾಟಕದಿಂದಲೇ ಎಂಬುದು ಅಕ್ಷರಶಃ ಸತ್ಯ. ಹೀಗಿರುವಾಗ ಆಡಳಿತಶಾಹಿ ತೆಗೆದುಕೊಂಡ ನಿರ್ಧಾರ ಹೇಯವಾದದು. ಇದರ ಹಿಂದಿರುವ ಅಜೆಂಡಾವನ್ನು ಬುಡ ಸಮೇತ ಕಿತ್ತು ಹಾಕಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

