5ನೇ ದಿನಕ್ಕೆ ರಂಗಾಯಣ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಮಾ.26
ರಂಗಾಯಣ ಕಲಾವಿದರ ವರ್ಗಾವಣೆ ಹಾಗೂ ನಿರ್ದೇಶಕ ಡಾ.ಬಿ.ವಿ. ರಾಜಾರಾಂ ಅವರನ್ನು ಹುದ್ದೆಯಿಂದ ವಜಾಗೊಳಿಸುವ ಸರ್ಕಾರದ ಧೋರಣೆ ಖಂಡಿಸಿ ಕಲಾವಿದರು, ರಂಗಾಸಕ್ತರು ನಡೆಸುತ್ತಿರುವ ಹೋರಾಟ 5ನೇ ದಿನಕ್ಕೆ ಕಾಲಿಟ್ಟರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು ಇತ್ತ ಕಡೆ ತಿರುಗಿ ಸಹ ನೋಡದಿರುವುದುಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಬಿ.ವಿ. ಕಾರಂತರ ರಂಗ ಕನಸು ಭಗ್ನಗೊಳ್ಳುತ್ತಿದ್ದರೂ ಸಚಿವರು ಮೌನ ವಹಿಸಿ, ಸಾಂಸ್ಕೃತಿಕ ಅಧಃಪತನಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಮಾ. 27 ವಿಶ್ವ ರಂಗಭೂಮಿ ದಿನ. ಆಗಲಾದರು ಬಂದು ನಮ್ಮ ಭಿನ್ನಹ ಸ್ವೀಕರಿಸುವಂತೆ ರಂಗಕರ್ಮಿ ಜನಾರ್ದನ್ (ಜನ್ನಿ) ಆಗ್ರಹಿಸಿದರು.
ಮಂಗಳವಾರ ನಡೆದ ರಂಗಾಯಣ ಉಳಿಸಿ ಆಂದೋಲನಕ್ಕೆ ಮಾಜಿ ಮೇಯರ್ ವಾಸು, ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್, ಸಮತಾ ವೇದಿಕೆಯ ಮೀರಾ ನಾಯಕ್, ರೂಪರಾವ್, ರತಿರಾವ್, ದಸಂಸ ಮುಖಂಡ ದೇವಗಳ್ಳಿ ಸೋಮಶೇಖರ್, ರಂಗ ನಿರ್ದೇಶಕರಾದ ನಾ. ರತ್ನ, ಕಿಕ್ಕೇರಿ ನಾರಾಯಣ, ಬಾಲನ್ಯಾಯ ಮಂಡಳಿ ಸದಸ್ಯ ಪಿ. ಬಾಬುರಾಜ್, ಸಿಪಿಎಂ ಮುಖಂಡರಾದ ಲ. ಜಗನ್ನಾಥ್, ಜಿ.ಪಿ. ಬಸವರಾಜು, ಡಾ.ಜೆ. ನಾರಾಯಣ ಕಿಕ್ಕೇರಿ ಸಾಥ್ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

