ಬಣ್ಣ ನನ್ನ ಒಲವಿನ ಬಣ್ಣ...
ಕ.ಪ್ರ.ವಾರ್ತೆ ಮೈಸೂರು ಮಾ.26
ಬಣ್ಣ ಎಲ್ಲರಿಗೂ ಇಷ್ಟವೇ, ಆದರೆ ಅದನ್ನು ಹಚ್ಚಿಸಿಕೊಳ್ಳುವುದೆಂದರೆ ತುಸು ಕಷ್ಟವೇ.
ಅದಕ್ಕಾಗಿ ಬಣ್ಣ ಬಳಿಯಲು ಬಂದರೆ ಕೈಗೆ ಸಿಗದಂತೆ ತಪ್ಪಿಸಿಕೊಂಡು ಓಡಾಡುವ ದೃಶ್ಯಗಳು ಸರ್ವೇ ಸಾಮಾನ್ಯ.
ಅಂತೆಯೇ, ಹೋಳಿ ಹಬ್ಬದ ಅಂಗವಾಗಿ ಮಂಗಳವಾರ ಮಹಾರಾಜ, ಮಹಾರಾಣಿ, ಮರಿಮಲಪ್ಪ, ಯುವರಾಜ, ಸಂತ ಫಿಲೋಮಿನಾ, ಎನ್‌ಐಇ, ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಮುಂತಾದೆಡೆ ವಿದ್ಯಾರ್ಥಿಗಳು ಸಡಗರದಲ್ಲಿ ಸ್ನೇಹಿತರಿಗೆ ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದ್ದು ಕಂಡುಬಂತು. ವಿವಿಧ ಬಡಾವಣೆಗಳಲ್ಲಿಯು ಹೋಳಿ ಹಬ್ಬದ ಅಂಗವಾಗಿ ತಮ್ಮ ಬಂಧು- ಬಳಗ ಹಾಗೂ ಸ್ನೇಹಿತರೊಂದಿಗೆ ಬಣ್ಣದ ಓಕುಳಿಯಲ್ಲಿ ಮಿಂದು, ಸಿಹಿ ಹಂಚಿ ತಮ್ಮ ಸಾಂಪ್ರದಾಯಿಕ ಹಬ್ಬವನ್ನು ಮಕ್ಕಳು, ಮಹಿಳೆಯರು ಸೇರಿದಂತೆ ಕುಟುಂಬದ ಸದಸ್ಯರು ಆಚರಿಸಿದರು. ಮಾರುಕಟ್ಟೆಯಲ್ಲಿ ಬಣ್ಣದ ವ್ಯಾಪಾರ ಭರಾಟೆಯಿಂದ ನಡೆದಿತ್ತು. ಮೊದಲೇ ಪೊಲೀಸರು ಮುನ್ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಹಾಗೂ ಕೆಲವು ಕಾಲೇಜುಗಳ ಮುಂದೆ ಪೊಲೀಸರು ನಿಗಾ ವಹಿಸಿದ್ದ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಹೋಳಿ ಹಬ್ಬ ನೆರವೇರಿತು.
ಹೋಳಿಕಾ ದಹನ್: ಹೋಳಿ ಹಬ್ಬದ ಪ್ರಯುಕ್ತ ಪುಷ್ಪಾಂಜಲಿ ಸಂಸ್ಥೆಯು ವಿಜಯನಗರದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಬಳಿಯ ಆವರಣದಲ್ಲಿ ಹೋಳಿಕಾ ದಹನ್ ಬೆಳಕು ಹಾಗೂ ಬಣ್ಣದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಂಘದ ಅಧ್ಯಕ್ಷ ರಾಮ್ವಾತ್ತಾರ್ ಬಿಹಾನಿ, ಉಪಾಧ್ಯಕ್ಷ ನವೀನ್ ಗುಪ್ತಾ, ಕಾರ್ಯದರ್ಶಿ ಕಮಲ್ ಮುಂದ್ರ, ಖಜಾಂಚಿ ಅಮಿತಾಬ್ ಸಂತಾಲಿಯಾ, ಸಂಚಾಲಕ ಡಾ.ಎಸ್.ಕೆ. ಮಿತ್ತಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

