ಹುಲಿ ದಾಳಿ: ವ್ಯಕ್ತಿಗೆ ಗಾಯ
ಕ.ಪ್ರ.ವಾರ್ತೆ ಎಚ್.ಡಿ. ಕೋಟೆ ಮಾ.26
ತಾಲೂಕಿನ ತಾರಕಾ ಜಲಾಶಯದ ಬಳಿ ಇರುವ ತೋಟಗಾರಿಕೆ ಇಲಾಖೆಗೆ ಸೇರಿದ ಸೀಬೆಹಣ್ಣು ತೋಟದಲ್ಲಿ ಸೊಪ್ಪು ಕೀಳಲು ಹೋಗಿದ್ದ ವ್ಯಕ್ತಿಯೊಬ್ಬನ ಮೇಲೆ ಹುಲಿ ದಾಳಿ ನಡೆಸಿ, ಗಾಯಗೊಳಿಸಿದೆ.
ಹುಣಸೇಕುಪ್ಪೆ ಹಾಡಿಯ ಆದಿವಾಸಿ ಗಿರಿಜನ ಚಿಕ್ಕನಾಗ ಎಂಬವರ ಮಗ ಪುಟ್ಟ (35) ಗಾಯಗೊಂಡಿರುವ ವ್ಯಕ್ತಿ. ಇವರ ಬೆನ್ನ ಮೇಲೆ ಹಾಗೂ ಕಾಲು ಹಾಗೂ ತೊಡೆಯ ಭಾಗದಲ್ಲಿ ಗಾಯಗಳಾಗಿದೆ.
ವಿಷಯ ತಿಳಿದ ಅಂತರಸಂತೆ ವನ್ಯ ಜೀವಿ ವಲಯದ ಅರಣ್ಯಾಧಿಕಾರಿ ಪೂವಯ್ಯ, ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಾ. ವೀಣಾ ಗಾಯಾಳುವಿಗೆ ಚಿಕಿತ್ಸೆ ನೀಡಿದ್ದಾರೆ. ಗಾಯಾಳು ಚೇತರಿಸಿಕೊಳ್ಳುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದರೆ, ಮೈಸೂರಿಗೆ ಕರೆದೊಯ್ಯಲಾಗುವುದು ಎಂದು ಅರಣ್ಯಾಧಿಕಾರಿ ಪೂವಯ್ಯ ತಿಳಿಸಿದ್ದಾರೆ.
ಪುಟ್ಟ ಸೋಮವಾರ ಸಂಜೆ 4 ಗಂಟೆಯಲ್ಲಿ ಇತರ ನಾಲ್ಕಾರು ಜನರೊಂದಿಗೆ ತೋಟಗಾರಿಕೆ ಇಲಾಖೆಯ ಸೀಬೆಹಣ್ಣಿನ ತೋಟದಲ್ಲಿ ಸೊಪ್ಪು ಕೀಳುತ್ತಿದ್ದಾಗ, ಹಿಂದಿನಿಂದ ಹುಲಿ ದಾಳಿ ನಡೆಸಿದೆ. ಇದರಿಂದ ಗಾಬರಿಗೊಂಡು ಇವರ ಜತೆಗಿದ್ದ ಪ್ರಕಾಶ್, ಕುಮಾರ್, ಪ್ರಕಾಶನ್ ಅವರು ಕಿರುಚಲಾಗಿ ಮತ್ತು ಹತ್ತಿರದಲ್ಲಿದ್ದ ದೊಣ್ಣೆಯಿಂದ ಹುಲಿಯ ಮೇಲೆ ಎರಗಲಾಗಿ ಹುಲಿ ಗಾಯಾಳುವನ್ನು ಬಿಟ್ಟು ಓಡಿದೆ. ಅಲ್ಲಿಂದ ನಾಲ್ಕು ಕಿಮೀ ಹಾಡಿಗೆ ನಡೆದ ಇವರು, ಹಾಡಿಗೆ ಬಂದು ವಿಷಯ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

