ಮೈಸೂರು

ಬಜೆಟ್ ಮುನ್ನ ದಲಿತರ ಸಭೆ ಕರೆಯಲು ದಸಂಸ ಆಗ್ರಹ

Published On :

ಕ.ಪ್ರ.ವಾರ್ತೆ ಮೈಸೂರು ಮೇ 21
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ ಮೊದಲ ವಾರದಲ್ಲಿ ಮಂಡಿಸಲು ಉದ್ದೇಶಿಸಿರುವ ಬಜೆಟ್‌ಗೂ ಮುನ್ನಾ ದಲಿತರ ಸಮಸ್ಯೆ ಕುರಿತು ಚರ್ಚಿಸಲು ದಲಿತರ ಸಭೆ ಕರೆಯುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಮಂಗಳವಾರ ನಗರದ ಚಾಮುಂಡಿ ಅತಿಥಿಗೃಹದಲ್ಲಿ ನಡೆದ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ನೀಡಿದ್ದ ಭರವಸೆ ಅಧಿಕಾರ ವಹಿಸಿಕೊಂಡ ಕೆಲವೇ ಕ್ಷಣಗಳಲ್ಲಿ ದಲಿತರ ಪರವಾಗಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಉಳಿದ ಸಮಸ್ಯೆಗಳ ಕುರಿತು ಚರ್ಚಿಸಲು ಮೂರು ದಿನಗಳ ಕಾಲ ದಸಂಸ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಬರುವ ಒಮ್ಮತದ ತೀರ್ಮಾನ ಆಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಿಸಿದ ಮಂತ್ರಿಗಳು, ಅಧಿಕಾರ ಜತೆಗೂಡಿ ಸಭೆ ಆಯೋಜಿಸಬೇಕು. ಅವಿಭಜಿತ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವಿಗೆ ದಸಂಸ ದುಡಿದಿದೆ. ಹಾಗೆ ಮೇ 28ರ ಪಿರಿಯಾಪಟ್ಟಣ ಚುನಾವಣೆಯಲ್ಲಿ ವೆಂಕಟೇಶ್ ಪರ ಕೆಲಸ ಮಾಡಲಿದೆ ಎಂದು ಬೆಟ್ಟಯ್ಯ ಸಭೆಗೆ ತಿಳಿಸಿದರು.
ಪದಾಧಿಕಾರಿಗಳಾದ ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಶಿವಣ್ಣ, ಪುಟ್ಟಸ್ವಾಮಿ, ಬಿ.ಪಿ. ಶಿವಬುದ್ಧಿ, ಭೀಮರಾಜ್, ಮಹೇಶ್, ರಾಜು, ದಾಸಯ್ಯ, ಬಸವಣ್ಣ, ಮಂಜು, ಸತೀಶ್, ಮಲ್ಲೇಶ್, ಎಸ್.ಆರ್. ರಾಜಣ್ಣ, ಮುತ್ತು, ಮಹೇಶ್, ಕುಮಾರ್, ಸೋಮಣ್ಣ, ಮಂಜು, ಮಹದೇವ ಮೊದಲಾದವರು ಇದ್ದರು.

ಇಂದು ಟಿಬೆಟಿಯನ್ನರಿಂದ ಕರಾಳ ದಿನ
ಮೈಸೂರು: ಚೀನಾ ಸರ್ಕಾರವು 1951ರಲ್ಲಿ ಟಿಬೆಟ್‌ನಿಂದ ಬಲವಂತವಾಗಿ 17 ಅಂಶಗಳ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿರುವುದನ್ನು ಖಂಡಿಸಿ ಮೇ 23 ರಂದು ಕರಾಳ ದಿನ ಆಚರಿಸುವುದಾಗಿ ಪ್ರಾದೇಶಿಕ ಟಿಬೆಟಿಯನ್ ಮಹಿಳಾ ಸಂಘದ ಅಧ್ಯಕ್ಷೆ ತೆಂಜಿನ್ ದೊಲ್ಮಾ, ಪ್ರಾದೇಶಿದ ಟಿಬೆಟಿಯನ್ ಯುವ ಕಾಂಗ್ರೆಸ್ ಅಧ್ಯಕ್ಷ ತ್ಸೆರಿಂಗ್ ಲಾಖ್ಯಾಬ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.