ಮೈಸೂರು

ಹಾರುತಿದೆ ಹೈಡ್ರೋಜನ್ ಬಲೂನ್

Published On :

 ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ   ಮೈಸೂರು   ಅ. 8
ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಸೆಸ್ಕ್ ನಗರದಾದ್ಯಂತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಿದೆ. ಅದರ ಜೊತೆಗೆ ವಸ್ತು ಪ್ರದರ್ಶನ ಆವರಣದಲ್ಲಿ ಇದೇ ಮೊದಲ ಬಾರಿಗೆ ದ್ವಿತೀಯ ದರ್ಜೆ ಹೈಡ್ರೋಜನ್ ಬಳಿಸಿ ನಿರ್ಮಿಸಿದ ಬಲೂನ್ ಹಾರಿಸಿದೆ.
ಪ್ರಚಾರದ ಬಲೂನ್ ಹಾರಿ ಬಿಡುವವರು ಸಾಮಾನ್ಯವಾಗಿ ಹೀಲಿಯಂ ಅಥವಾ ಆಕ್ಸಿಜನ್ ಬಳಸುತ್ತಾರೆ. ಇವು ಸಾಮಾನ್ಯವಾಗಿ 30ರಿಂದ 40 ಅಡಿ ಎತ್ತರಕ್ಕೆ ಹಾರಬಲ್ಲವು. ಆದರೆ ಹೈಡ್ರೋಜನ್ ಬಳಸಿ ಮಾಡಿರುವ ಈ ಬಲೂನ್ ಸುಮಾರು 200 ಅಡಿ ಎತ್ತರದವರೆಗೆ ಹಾರುತ್ತವೆ. ಆದರೆ ಮೈಸೂರಿನಲ್ಲಿ ದಸರಾ ವೇಳೆ ಲಘು ವಿಮಾನಗಳು, ಹೆಲಿಕಾಪ್ಟರ್ಗಳು ಹತ್ತಿರದಲ್ಲಿಯೆ ಸಂಚರಿಸುವುದರಿಂದ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ 120 ಅಡಿಗೆ ಇಳಿಸಲಾಗಿದೆ.
ಈ ಬಲೂನ್ ವಿಶೇಷವೇನು?: ಸಾಮಾನ್ಯವಾಗಿ ಬಲೂನ್ ಹಾರಿ ಬಿಡುವವರು ಅದಕ್ಕೆ ವಿದ್ಯುತ್ ವ್ಯವಸ್ಥೆ ಮಾಡಿರುವುದಿಲ್ಲ. ಬದಲಾಗಿ ಬೆಳಗಿನ ವೇಳೆ ಮಾತ್ರ ಕಾಣಿಸುವಂತೆ ಹಾರಿ ಬಿಟ್ಟಿರುತ್ತಾರೆ. ಆದರೆ ಸೆಸ್ಕ್ ವತಿಯಿಂದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಹಾರಿ ಬಿಟ್ಟಿರುವ ಈ ಬಲೂನ್ಗೆ ವಿದ್ಯುತ್ ಬಲ್ಬ್ಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಮಿತವ್ಯಯದ ದೃಷ್ಟಿಯಿಂದ ಎಲ್ಇಡಿ ಮತ್ತು ಸಿಎಫ್ಎಲ್ ಬಲ್ಬ್ ಬಳಸಲಾಗಿದೆ.
ಬಲೂನ್ಗೆ ದ್ವಿತೀಯ ದರ್ಜೆ ಹೈಡ್ರೋಜನ್ ತುಂಬಲಾಗುತ್ತದೆ. ಅದರೊಳಗೆ ಎರಡು ಪೌಚ್ಗಳನ್ನು ಬಳಸಿ ಸಿಎಫ್ಎಲ್ ಅಥವಾ ಎಲ್ಇಡಿ ಬಲ್ಬ್ ಅಳವಡಿಸಲಾಗುತ್ತದೆ. ಬಲೂನ್ಗೆ ಹಬ್ಬದ ಮೂಲಕವೆ ವೈಯರ್ ಸೇರಿಸಿ ವಿದ್ಯುತ್ ಪ್ರವಹಿಸುವಂತೆ ಮಾಡುತ್ತದೆ. ಬಲ್ಪ್ಗಳನ್ನು ಹೆಚ್ಚು ಬಳಿಸಿದಷ್ಟು ಬಲೂನ್ ಹೆಚ್ಚು ಬೆಳಕನ್ನು ಹೊರ ಸೂಸುತ್ತದೆ.
12, 15 ಮತ್ತು 20 ಅಡಿಯಷ್ಟು ಅಗಲದ ಬಲೂನ್ಗಳು ಲಭ್ಯವಿದೆ. ಈ ಪೈಕಿ ಸೆಸ್ಕ್ 15 ಅಡಿಯ ಬಲೂನ್ ಬಳಸಿಕೊಂಡಿದೆ. ಒಂದು ಬಲೂನ್ಗೆ 30 ಕೆ.ಜಿ. ಹೈಡ್ರೋಜನ್ ಹೊಂದಿದ 5 ಸಿಲಿಂಡರ್ ಬಳಸಲಾಗುತ್ತದೆ. ಬಳಿಕ ಮೂರು ದಿನಕ್ಕೊಮ್ಮೆ ಒಂದು ಸಿಲಿಂಡರ್ ಹೈಡ್ರೋಜನ್ ತುಂಬಲಾಗುತ್ತದೆ. ಹೈಡ್ರೋಜನ್ ತುಂಬಿದ ಬಲೂನ್ ಗಾಳಿಯಲ್ಲಿ ವೇಗವಾಗಿ ಮೇಲೇರುವುದರಿಂದ ಕೆಲವೊಮ್ಮೆ ಮನುಷ್ಯರನ್ನೇ ಹೊತ್ತೊಯ್ಯಬಲ್ಲ ಶಕ್ತಿ ಇರುತ್ತದೆ.
ಹೀಗೆ ತಯಾರಿಸಲ್ಪಟ್ಟ ಬಲೂನನ್ನು ಇದೆ ಮೊದಲ ಬಾರಿಗೆ ದಸರಾ ವೇಳೆ ಹಾರಿ ಬಿಡಲಾಗಿದೆ. ರಾತ್ರಿ ವೇಳೆ ಬಲೂನ್ ಆಕರ್ಷಕವಾಗಿ ವಿದ್ಯುತ್ ದೀಪದೊಂದಿಗೆ ಕಾಣುವುದರಿಂದ ಬಲೂನ್ ಈಗ ಸಾರ್ವಜನಿಕರು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ತಲಕಾಡು ಸೆಸ್ಕ್ ಉಪ ವಿಭಾಗದ ಕಿರಿಯ ಅಭಿಯಂತರ ರಕ್ಷಕ್ ಈ ಹೈಡ್ರೋ ಬಲೂನ್ ರೂವಾರಿಗಳು. ಇದಕ್ಕೆ ಪೂರಕವಾಗಿ ಸೆಸ್ಕ್ನ ಹಿರಿಯ ಅಧಿಕಾರಿಗಳು ಸ್ಪಂದಿಸಿದ್ದರಿಂದಾಗಿ ಮೈಸೂರಿನಲ್ಲಿ ಈ ವಿಶಿಷ್ಟ ಪ್ರಯೋಗ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.