ಮಧುಮೇಹ, ರಕ್ತದೊತ್ತಡ ತಪಾಸಣೆ
ಹುಣಸೂರು: ಪ್ರಸ್ತುತ ಸಮಾಜದಲ್ಲಿ ಮನುಷ್ಯನ ದೈಹಿಕ ಹಾಗೂ ಮಾನಸಿಕ ಸಮಸ್ಥಿತಿ ಇದ್ದಲ್ಲಿ ಮಾತ್ರ ಮನುಷ್ಯ ಸಕಾರಾತ್ಮಕವಾಗಿ ಚಿಂತಿಸಲು ಸಾಧ್ಯವೆಂದು ಮಧುಮೇಹ ವೈದ್ಯ ಡಾ. ಬ್ರಿಡ್ಜ್ ಮೋಹನ್ ಕುಮಾರ್ ಹೇಳಿದರು. ಹುಣಸೂರು ರೋಟರಿ ಸಂಸ್ಥೆ ಹಾಗೂ ಮೈಕ್ರೋ ಔಷಧಿ ಕಂಪನಿ ಸಹಯೋಗದಲ್ಲಿ ಗುರುವಾರ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಧುಮೇಹ ಹಾಗೂ ರಕ್ತದೊತ್ತಡ ಕಾಯಿಲೆಗಳ ಕುರಿತಾದ ಅರಿವು ಹಾಗೂ ಉಚಿತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಒಟ್ಟು 110 ರೋಗಿಗಳು ತಪಾಸಣೆಗೊಳಗಾದರು. ಹಾಗೂ ಎಲ್ಲರಿಗೂ ಉಚಿತವಾಗಿ ಔಷಧಿಗಳನ್ನು ಮೈಕ್ರೋ ಔಷಧಿ ಕಂಪನಿಯ ಸಹಯೋಗದಲ್ಲಿ ನೀಡಲಾಯಿತು. ರಾಜಶೇಖರ್, ಡಾ. ವೃಷಭೇಂದ್ರಪ್ಪ, ಡಾ. ಸರೋಜಿನಿ ವಿಕ್ರಂ, ಆನಂದ್, ಸತ್ಯನಾರಾಯಣ ಗುಪ್ತ, ಸ್ವಾಮಿಗೌಡ, ಅನಂತರಾಜೇ ಅರಸ್ ಇದ್ದರು.
ಪಾನಮುಕ್ತರಿಗೆ ಸಹಾಯಧನ ವಿತರಣೆ
ಹುಣಸೂರು: ತಾಲೂಕಿನ ಕಟ್ಟೇಮಳಲವಾಡಿಯ ಬೆಳಕು ಸೇವಾ ಸಂಸ್ಥೆಯಿಂದ ಪಾನಮುಕ್ತರಿಗೆ ಸಹಾಯಧನ ವಿತರಿಸಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮ ದಿನಾಚರಣೆಯಂದು ಪಾನ ನಿಷೇಧವನ್ನು ಅರ್ಥಪೂರ್ಣವಾಗಿ ಆಚರಿಸಿ, ಕುಡಿತ ಬಿಟ್ಟ 11 ಮಂದಿಗೆ ಪ್ರಥಮ ಹಂತದಲ್ಲಿ ಸಹಾಯಧನ ವಿತರಿಸಿ, ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ನಿಗಮದಿಂದ 25 ಸಾವಿರ ಸಹಾಯಧನ ನೀಡಿ 50 ಸಾವಿರ ಸಾಲ ಸೌಲಭ್ಯವನ್ನು ಪಾನಮುಕ್ತರಿಗೆ ಒದಗಿಸಲಾಯಿತು. ಬೆಳಕು ಸೇವಾ ಸಂಸ್ಥೆಯ ಅಧ್ಯಕ್ಷ ನಿಂಗರಾಜ ಮಲ್ಲಾಡಿ, ಬ್ಯಾಂಕಿನ ಪ್ರಾದೇಶಿಕ ಶಾಖೆಯ ಅಧಿಕಾರಿ ಗೀತಾ, ಜಿಪಂ ಸದಸ್ಯ ದೇವರಾಜ್, ತಾಪಂ ಸದಸ್ಯ ರಂಗಸ್ವಾಮಿ, ಮಹದೇವು, ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

