ಮೈಸೂರು

ಎನ್‌ಆರ್‌ಐ ಮೈಸೂರಲ್ಲಿ ನಾಪತ್ತೆ

Published On :

ಮೈಸೂರು: ಅಮೆರಿಕ ನಾಗರಿಕರಾದ ಅನಿವಾಸಿ ಭಾರತೀಯ ಪ್ರಜೆ ತೇಜಸ್ ಗೌತಮ್ ಶ್ರೀಪ್ರಸಾದ್(30) ಎಂಬವರು ಮೈಸೂರಿನಲ್ಲಿ ನಾಪತ್ತೆಯಾಗಿದ್ದಾರೆ.ಇವರು ಬಿ.ಎಸ್. ಪದವೀಧರರಾಗಿದ್ದು, ಅಮೆರಿಕ ದೇಶದ ಪ್ರಜೆಯಾಗಿದ್ದಾರೆ. ಸೆ.14ರಂದು ತಾಯಿ ಜಯಂತಿ ಶ್ರೀಪ್ರಸಾದ್ ಅವರೊಂದಿಗೆ ಮೈಸೂರಿಗೆ ಆಗಮಿಸಿದ್ದು, ಸರಸ್ವತಿಪುರಂನಲ್ಲಿರುವ ತಮ್ಮ ತಾತ ಎಸ್.ಕೆ. ಗುರುರಾಜರಾವ್ ಅವರ ಮನೆಯಲ್ಲಿದ್ದರು.ಅ.9ರ ರಾತ್ರಿ ಯುವ ದಸರಾ ಕಾರ್ಯಕ್ರಮ ನೋಡಲು ಹೋದ ತೇಜಸ್ ನಾಪತ್ತೆಯಾಗಿದ್ದು, ತಮ್ಮ ಮಗನನ್ನು ಪತ್ತೆ ಮಾಡಿಕೊಡುವಂತೆ ತಾಯಿ ಜಯಂತಿ ಶ್ರೀಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.9 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈ ಬಣ್ಣ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418123, 323 ಸಂಪರ್ಕಿಸಲು ಸರಸ್ವತಿಪುರಂ ಠಾಣೆ ಎಎಸ್‌ಐ ಎಚ್.ಎಸ್. ಮನೋಹರ ಕೋರಿದ್ದಾರೆ.

ಮಹಿಳೆ ಸೇರಿ ಇಬ್ಬರು ನಾಪತ್ತೆ
ಮೈಸೂರು:
ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿ ಇಬ್ಬರು ನಾಪತ್ತೆಯಾಗಿದ್ದಾರೆ. ಎನ್.ಆರ್. ಠಾಣೆ ವ್ಯಾಪ್ತಿಯ ನಿವಾಸಿ ನಂದೀಶ್ ಎಂಬವರ ಪತ್ನಿ ರೂಪ(20) ಅ.6ರಿಂದ ನಾಪತ್ತೆಯಾಗಿದ್ದಾರೆ. ಚಹರೆ- 4.5 ಅಡಿ ಎತ್ತರ, ಸಾಧಾರಣ ಶರೀರ, ಕಪ್ಪು ಮೈಬಣ್ಣ, ಗುಂಡು ಮುಖ, ಕನ್ನಡ ಮಾತನಾಡುತ್ತಾರೆ. ಗೋಪಾಲ್ ಎಂಬವರ ತಂದೆ ಗಂಗಯ್ಯ(65) ಭಾನುವಾರದಿಂದ ನಾಪತ್ತೆಯಾಗಿದ್ದಾರೆ. ಚಹರೆ- 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಕೋಲು ಮುಖ, ನೆತ್ತಿಯ ಮೇಲೆ ಬೋಳು ಆಗಿದೆ. ತೆಲುಗು ಮಾತನಾಡುತ್ತಾರೆ. ಈ ಇಬ್ಬರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 2418112, 312 ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.

19ರಂದು ಸಂಗೀತ ಸಂಜೆ
ಮೈಸೂರು:
ಇಂಚರ ಬಳಗ, ಪದ್ಮ ಮತ್ತು ಕಡಾಂಬಿ ಸೀತಾರಾಮ ಅಯ್ಯಂಗಾರ್ ಸ್ಮಾರಕ ವತಿಯಿಂದ ಅ.19ರ ಸಂಜೆ 5ಕ್ಕೆ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಸಂಗೀತ ಸಂಜೆ 100ನೇ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ನಾರಾಯಣಪ್ರಸಾದ್ ತಿಳಿಸಿದರು. ಈ ಸಂಗೀತ ಸಂಜೆಯಲ್ಲಿ 9 ಮಂದಿ ಗಾಯಕರು ಭಕ್ತಿಗೀತೆ, ಭಾವಗೀತೆ ಮತ್ತು ಹಳೆಯ ಸುಮಧುರ ಚಿತ್ರಗೀತೆಗಳನ್ನು ಹಾಡಲಿದ್ದಾರೆ. ಇದೇ ವೇಳೆ ಗಾಯಕ ಹಾಗೂ ಸಂಗೀತ ಸಂಯೋಜಕ ಗರ್ತಿಕೆರೆ ರಾಘಣ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ ಎಂದರು. ಬಳಗದ ನಳಿನಿ, ನಾಗರಾಜ ರಾವ್, ರವಿಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.