ಮೈಸೂರು

ಜೇನು ಕೃಷಿ ಕೈಗೊಳ್ಳಲು ರೈತರಿಗೆ ಕರೆ

Published On :

ಕೆ.ಆರ್. ನಗರ: ರೈತರು ಕೇವಲ ಕೃಷಿ ಚಟುವಟಿಕೆಯನ್ನು ಮಾತ್ರ ಅವಲಂಬಿಸದೆ ಅಧಿಕ ಆದಾಯ ತಂದುಕೊಡುವ ಜೇನು ಕೃಷಿಯನ್ನು ಕೈಗೊಳ್ಳಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ದಿನೇಶ್‌ಕುಮಾರ್ ಕರೆ ನೀಡಿದರು.
ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಿಪ್ಪೂರು ಗ್ರಾಮದಲ್ಲಿ ಹಂಪಾಪುರ ವಲಯ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ನಡೆದ ಜೇನು ಕೃಷಿ ತರಬೇತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಭಾರತದ ಕೃಷಿಯು ಅನಿಶ್ಚಿತತೆಯಿಂದ ಕೂಡಿರುವ ಮಾನ್ಸೂನ್ ಮಳೆಯೊಡನೆ ಆಟವಾಗಿದ್ದು, ಉತ್ತಮ ಮಳೆ ಬಿದ್ದರೆ ಕೃಷಿ ಉತ್ಪಾದನೆ ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ರೈತ ಕೃಷಿಗಾಗಿ ಮಾಡಿದ ಸಾಲದಲ್ಲಿ ಸಿಲುಕಿ ಸಾಯುತ್ತಾನೆ ಎಂದು ಅವರು ತಿಳಿಸಿದರು.
ಕೃಷಿ ಅಲ್ಪಾವಧಿಯ ಬೇಸಾಯ ಕ್ರಮವಾಗಿದ್ದು, ಉಳಿದ ಸಮಯದಲ್ಲಿ ರೈತ ಅನಾವಶ್ಯಕವಾಗಿ ತಮ್ಮ ಕಾಲ ಕಳೆಯುತ್ತಾನೆ.
ಆದ್ದರಿಂದ ಜೇನು ಸಾಕುವ ಬೇಸಾಯವನ್ನು ಆರಂಭಿಸಿ, ತಮ್ಮ ಆದಾಯವನ್ನು ಹೆಚ್ಚಿಕೊಳ್ಳುವ ಮೂಲಕ ಆರ್ಥಿಕಾಭಿವೃದ್ದಿ ಹೊಂದಬೇಕೆಂದು ಸಲಹೆ ನೀಡಿದರು.
ಪ್ರಗತಿಪರ ಕೃಷಿಕ ಮುಕುಂದ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ಜೇನು ಕೃಷಿ ಪ್ರದರ್ಶಕ ಲಕ್ಷಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬಿ. ಅಶೋಕ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕುಮಾರಿ ಗೀತಾ, ಮೇಲ್ವಿಚಾರಕಿ ಎಚ್. ಜಯಶ್ರೀ, ಸೇವಾ ಪ್ರತಿನಿಧಿ ಕುಮಾರಿ, ತಾಲೂಕು ತೋಟಗಾರಿಕೆ ಇಲಾಖೆಯ ರಾಜೇಶ್, ಶೇಖರ್, ಚಲುವಯ್ಯ, ಬಸವರಾಜು, ತಿಪ್ಪೇಶ್ ಇದ್ದರು.

ಕಾಲುಬಾಯಿ ಜ್ವರಕ್ಕೆ ರಾಸು ಬಲಿ
ಕ.ಪ್ರ.ವಾರ್ತೆ ಸಾಲಿಗ್ರಾಮ ಅ. 15

ಸಮೀಪದ ತಂದ್ರೆ ಅಂಕನಹಳ್ಳಿ ಗ್ರಾಮದಲ್ಲಿ ಕಾಲುಬಾಯಿ ಜ್ವರಕ್ಕೆ ತುತ್ತಾಗಿ ಹಸುವೊಂದು ಮಂಗಳವಾರ ಮೃತಪಟ್ಟಿದೆ.
ಎ.ಎಲ್. ಕುಮಾರ ಅವರಿಗೆ ಸೇರಿದ ಈ ರಾಸು 40 ಸಾವಿರಕ್ಕೂ ಅಧಿಕ ಬೆಲೆ ಬಾಳುವ ಈ ಹಸುವಿಗೆ ಕಳೆದ ಒಂದು ವಾರದಿಂದ ಕಾಲುಬಾಯಿ ಜ್ವರ ಕಾಣಿಸಿಕೊಂಡು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಇದರೊಂದಿಗೆ ಸಾಲಿಗ್ರಾಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಲುಬಾಯಿ ಜ್ವರಕ್ಕೆ ಮೃತಪಟ್ಟ ರಾಸುಗಳು ಸಂಖ್ಯೆ ಎರಡಂಕಿಯನ್ನು ದಾಟಿದಂತಾಗಿದೆ. ಇದಲ್ಲದೆ ಗ್ರಾಮದ ಬಿ. ರಾಜಶೇಖರ್, ಲಿಂಗರಾಜಪ್ಪ ಯೋಗೇಶ್ ಅವರ ಎಮ್ಮೆ ಮತ್ತು ಹಸುಗಳಿಗೆ ಈ ರೋಗವು ಹರಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಗ್ರಾಮದ ಜನರಲ್ಲಿ ಆತಂಕ ಮೂಡಿದ್ದು, ಈ ಬಗ್ಗೆ ಪಶು ಇಲಾಖೆಯವರು ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.