ಸಿದ್ದರಾಮ ಚಾರಿತ್ರ್ಯ ಕೃತಿ ಮುಟ್ಟುಗೋಲಿಗೆ ಒತ್ತಾಯ
ಕ.ಪ್ರ.ವಾರ್ತೆ ಮೈಸೂರು ಅ. 16
ಸೊಲ್ಲಾಪುರದ ಹಬ್ಬು ಪ್ರಕಾಶನವು ಮರು ಮುದ್ರಣಗೊಳಿಸಿರುವ ಸಿದ್ದರಾಮ ಚಾರಿತ್ರ್ಯ ಕೃತಿಯನ್ನು ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ತಕ್ಷಣವೇ ಮುಟ್ಟುಗೋಲು ಹಾಕಿಕೊಂಡು ನಾಶಗೊಳಿಸಬೇಕು ಎಂದು ಹೊಸಮಠದ ಪೀಠಾಧಿಪತಿ ಚಿದಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಪ್ರೊ. ಡಿ.ಎಲ್. ನರಸಿಂಹಾಚಾರ್ ಮತ್ತು ಟಿ.ಎಸ್. ವೆಂಕಣ್ಣಯ್ಯ ಅವರ ಸಂಪಾದಕತ್ವದಲ್ಲಿ 1940ರಲ್ಲಿ ಪ್ರಕಟವಾಗಿದ್ದ ಮಹಾಕವಿ ರಾಘವಾಂಕ ರಚಿತ ಸಿದ್ಧರಾಮ ಚಾರಿತ್ರ್ಯ ಕೃತಿಯ ಮರು ಮುದ್ರಣದಲ್ಲಿ 191 ಪದ್ಯಗಳನ್ನು ಸೃಷ್ಟಿಸಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿರುವುದು ಕೃತ್ರಿಮ ಕೃತ್ಯವಲ್ಲದೆ, ಕೃತಿಗೆ ಎಸಗಿದ ಅಪಚಾರವಾಗಿದೆ ಎಂದು ಹೇಳಿದ್ದಾರೆ. 1963 ಮತ್ತು 1964ರಲ್ಲಿ ಮರು ಮುದ್ರಣಗೊಂಡಿದ್ದ ಕೃತಿಗೆ ಪಂಚಪೀಠದ ಪರಂಪರೆಯವರಾಗಿದ್ದ ಹೂಟಗಿಮಠ ಮತ್ತು ಹೂಲಿಮಠದ ಸ್ವಾಮೀಜಿ ಬರೆದಿರುವ ಮುನ್ನುಡಿ ದುರಾಲೋಚನೆಯಿಂದ ಕೂಡಿದ್ದು, ಕೃತಿಯ ಮೂಲ ಆಶಯಕ್ಕೆ ಧಕ್ಕೆ ತರುವಂತಿದೆ.
2004ರಲ್ಲಿ ಮೂರನೆ ಮುದ್ರ ಕಂಡಿರುವ ಸಿದ್ದರಾಮ ಚಾರಿತ್ರ್ಯ ಕೃತಿಯಲ್ಲಿ 12ನೇ ಶತಮಾನದ ಮಹಾ ಶರಣರಾದ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಅಕ್ಕನಾಗಮ್ಮ ಅವರ ವ್ಯಕ್ತಿತ್ವ ಹಾಗೂ ವಿಚಾರಗಳನ್ನು ಅವಹೇಳನ ಮಾಡಿರುವುದು ಸರಿಯಲ್ಲ ಎಂದು ಅವರು ಖಂಡಿಸಿದ್ದಾರೆ. ಆಶೀರ್ವಚನ ನೀಡಿ ಈ ಕೃತಿಯನ್ನು ಬಿಡುಗಡೆ ಮಾಡಿರುವ ಶ್ರೀ ಪಂಪಾಚಾರ್ಯ ಪರಂಪರೆಯವರು ಸಮಾಜದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದಿದ್ದಲ್ಲಿ ಸಮಾಜದೊಡಗೂಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

