ಮೈಸೂರು

ಮಂಡಿ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ನಾಪತ್ತೆ

Published On :

ಮೈಸೂರು: ನಗರದ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಹೀನಾಬಾನು(24) ಎಂಬವರು ನಾಪತ್ತೆಯಾಗಿದ್ದಾರೆ. ಸೈಫುಲ್ಲಾ ಅವರೊಂದಿಗೆ ಮೂರು ವರ್ಷಗಳ ಹಿಂದೆ ಹೀನಾ ಬಾನು ಮದುವೆಯಾಗಿತ್ತು. ತಂದೆಯ ಮನೆಯಲ್ಲಿಯೆ ವಾಸವಿದ್ದ ಹೀನಾಬಾನು ಮಂಗಳವಾರ ತನ್ನ ಮೊಬೈಲ್ ಮನೆಯಲ್ಲಿಯೆ ಬಿಟ್ಟು ಪತಿ ಫೋನ್ ಮಾಡಿರುವುದಾಗಿ ಹೇಳಿ ಹೋದವರು ಹಿಂದಿರುಗಿಲ್ಲ ಎಂದು ಅವರ ತಂದೆ ಮೊಹಮ್ಮದ್ ಶೌಕತ್ ಮಂಡಿ ಪೊಲೀಸರಿಗೆ ದೂರು ನೀಡಿದ್ದಾರೆ. 5.4 ಅಡಿ ಎತ್ತರ, ಸಾದಾರಣ ಮೈಕಟ್ಟು, ಬಿಳಿ ಬಣ್ಣ, ಉರ್ದು ಹಾಗೂ ಕನ್ನಡ ಮಾತನಾಡುತ್ತಾರೆ. ಇವರು ಪತ್ತೆಯಾದಲ್ಲಿ ಪೊಲೀಸ್ ಠಾಣೆ ದೂ. 2418113, 2418113ಗೆ ಕರೆ ಮಾಡಬಹುದು.

ಕಾಲುಬಾಯಿ ರೋಗಕ್ಕೆ ಲಸಿಕೆ
ಕ.ಪ್ರ.ವಾರ್ತೆ ಮೈಸೂರು ಅ. 17
ಸಿದ್ದಲಿಂಗಪುರದ ಪಶು ಚಿಕಿತ್ಸಾಲಯವು ಹಾಲು ಉತ್ಪಾದಕರ ಸಹಕಾರ ಸಂಘ, ಗ್ರಾಪಂ ಸಹಯೋಗದೊಂದಿಗೆ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಕಾಲುಬಾಯಿ ರೋಗದ ತಡೆಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿದ್ದಲಿಂಗಪುರ ಗ್ರಾಪಂ ವ್ಯಾಪ್ತಿಯ ನಾಗನಹಳ್ಳಿ, ನಾಗನಹಳ್ಳಿ ಹೊಸ ಬಡಾವಣೆ, ಶಾದನಹಳ್ಳಿ ವ್ಯಾಪ್ತಿಯಲ್ಲಿ ಹಸುಗಳಿಗೆ ಲಸಿಕೆ ಹಾಕಲಾಯಿತು. ವೈದ್ಯಾಧಿಕಾರಿ ಡಾ. ಪೂರ್ಣಾನಂದ, ಸಿಬ್ಬಂದಿ ಪ್ರಸಾದ, ರವಿಚಂದ್ರ, ಅಫ್ತಾನ ಖಾನಂ, ಚಲುವರಾಜು, ಕೆಎಂಎಫ್ ಸಿಬ್ಬಂದಿ ಇದ್ದರು.

ಮೈಗ್ರಾಪ ಆಡಳಿತ ಸಮಿತಿ ರಚನೆ
ಕ.ಪ್ರ.ವಾರ್ತೆ ಮೈಸೂರು ಅ. 17
ಮೈಸೂರು ಗ್ರಾಹಕರ ಪರಿಷತ್ತಿನ ಹೊಸ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಪ್ರೊ. ಆರ್. ಚಂದ್ರಪ್ರಕಾಶ್, ಕಾರ್ಯಾಧ್ಯಕ್ಷರಾಗಿ ಅಶೋಕ್ ಕಕ್ಕಡ್, ಕಾರ್ಯದರ್ಶಿ- ವಿಶ್ವಾಸ್ ಕೃಷ್ಣ, ಖಜಾಂಚಿಯಾಗಿ ಕೆ.ಆರ್. ಶೇಷಾದ್ರಿ, ಸದಸ್ಯರಾಗಿ ಎಸ್.ಜಿ. ಒಂಬತ್ಕೆರೆ, ಬಿ.ವಿ. ಶೆಣೈ, ಪ್ರೊ. ಎಸ್. ಶೋಭನಾ, ಪ್ರೊ. ಎಸ್. ಶೇಖರ್ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.