ಕೇನ್ಸ್ ಟೆಕ್ನಾಲಜಿಯಿಂದ ವಿವಿಧ ಸ್ಪರ್ಧೆಗಳು
ಕ.ಪ್ರ.ವಾರ್ತೆ ಮೈಸೂರು ಅ. 21
ವಿದ್ಯುನ್ಮಾನ ವಿನ್ಯಾಸ, ಉತ್ಪಾದನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಸೂರಿನ ಕೇನ್ಸ್ ಟೆಕ್ನಾಲಜಿ ಸಂಸ್ಥೆಯು 25ನೇ ವರ್ಷದ ಬೆಳ್ಳಿ ಹಬ್ಬ ಆಚರಣೆ ಅಂಗವಾಗಿ ಶಾಲಾ ಮಕ್ಕಳು, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ.
ಅ.24ರ ಮಧ್ಯಾಹ್ನ 2ಕ್ಕೆ ಕಲಾಮಂದಿರದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿದ್ದು, ಮುಖ್ಯ ಅತಿಥಿಗಳಾಗಿ ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಭಾಗವಹಿಸುವರು. ಗೋಪಿ ಮಹದೇವ ರಸಪ್ರಶ್ನೆ ನಡೆಸಿಕೊಡುವರು. ವಿಜೇತರಿಗೆ ಪ್ರಥಮ 20 ಸಾವಿರ, ದ್ವಿತೀಯ 12 ಸಾವಿರ ಹಾಗೂ ತೃತೀಯ 8 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಕೇನ್ಸ್ ಟೆಕ್ನಾಲಜಿಯ ಪ್ರಧಾನ ವ್ಯವಸ್ಥಾಪಕ ಟಿ.ವಿ. ವೆಂಕಟರಾಮ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.25ರ ಮಧ್ಯಾಹ್ನ 2ಕ್ಕೆ ಕಲಾಮಂದಿರದಲ್ಲಿ ಅಂತರ ಶಾಲಾ ಭರತನಾಟ್ಯ ನೃತ್ಯ ಸ್ಪರ್ಧೆ ಏರ್ಪಡಿಸಿದ್ದು, ಮುಖ್ಯ ಅತಿಥಿಗಳಾಗಿ ಡಾ. ವಸುಂಧರಾ ದೊರೆಸ್ವಾಮಿ, ತೀರ್ಪುಗಾರರಾಗಿ ಡಾ. ಮಾಣಿಕ್ ಬೆಂಗೆರಿ, ನಂದಿನಿ ಈಶ್ವರ್, ಡಾ. ತುಳಸಿ ರಾಮಚಂದ್ರ ಭಾಗವಹಿಸುವರು. ವಿಜೇತರಿಗೆ ಪ್ರಥಮ 8 ಸಾವಿರ, ದ್ವಿತೀಯ 5 ಸಾವಿರ, ತೃತೀಯ 3 ಸಾವಿರ ಬಹುಮಾನ ನೀಡಲಾಗುತ್ತದೆ. ಅ.28ರ ಮಧ್ಯಾಹ್ನ 2ಕ್ಕೆ ಅಂತರ ಶಾಲಾ ಗಾಯನ ಸ್ಪರ್ಧೆ ಏರ್ಪಡಿಸಿದ್ದು, ಅತಿಥಿಯಾಗಿ ಆಕಾಶವಾಣಿ ನಿರ್ದೇಶಕಿ ಜಯಶ್ರೀ, ತೀರ್ಪುಗಾರರಾಗಿ ಕವಿತಾ, ಡಾ. ಎಂ.ಎಸ್. ನಟಶೇಖರ್, ವೀರಭದ್ರಯ್ಯ, ರಂಜನಿ ಸುರೇಶ್ ಭಾಗವಹಿಸುವರು. ವಿಜೇತರಿಗೆ ಪ್ರಥಮ 6 ಸಾವಿರ, ದ್ವಿತೀಯ 4 ಸಾವಿರ, ತೃತೀಯ 2 ಸಾವಿರ ಬಹುಮಾನ ನೀಡಲಾಗುತ್ತದೆ.
ನ.2ರ ಬೆಳಗ್ಗೆ 10ಕ್ಕೆ ಜಗನ್ಮೋಹನ ಅರಮನೆಯಲ್ಲಿ ಎಲ್ಕೆಜಿ, ಯುಕೆಜಿ, 1ರಿಂದ 3ನೇ ತರಗತಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಏರ್ಪಡಿಸಿದ್ದು, ಅತಿಥಿಯಾಗಿ ಸ್ವಾಮಿ ವಿವೇಕಾನಂದ ಯೂತ್ಮೂವ್ಮೆಂಟ್ನ ಡಾ. ಆರ್. ಬಾಲಸುಬ್ರಹ್ಮಣ್ಯಂ ಭಾಗವಹಿಸುವರು. ವಿಜೇತರಿಗೆ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ, ತೃತೀಯ 1 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ನ.18ರ ಬೆಳಗ್ಗೆ 10ಕ್ಕೆ ಜಗನ್ಮೋಹನ ಅರಮನೆಯಲ್ಲಿ ರಾಜ್ಯ ಮಟ್ಟದ ಭರತನಾಟ್ಯ ನೃತ್ಯ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಪ್ರಥಮ 25 ಸಾವಿರ, ದ್ವಿತೀಯ 15 ಸಾವಿರ, ತೃತೀಯ 10 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ. ದೂ. 0821- 4280259, ಮೊ. 96866 65347, 99001 92996 ಸಂಪರ್ಕಿಸಬಹುದು.
ಕೇನ್ಸ್ ಟೆಕ್ನಾಲಜಿ ಬಗ್ಗೆ: ಕೇನ್ಸ್ ಟೆಕ್ನಾಲಜಿ ಸಂಸ್ಥೆಯು ರೇಲ್ವೆ ಕೈಗಾರಿಕೆಯ ಮೂಲ ಸಾಧನಗಳನ್ನು ಪೂರೈಸುವ ಆಗ್ನೇಯ ಏಷ್ಯಾದ ಪ್ರಥಮ ಸಂಸ್ಥೆಯಾಗಿದೆ. ದೇಶದ ಏಳು ಕಡೆ ತನ್ನ ಶಾಖೆಗಳನ್ನು ಹೊಂದಿದೆ. ಎಸ್ಎಂಡಿ ಮತ್ತು ಟಿಎಚ್ ವಸ್ತುಗಳ ಉತ್ಕೃಷ್ಟ ದರ್ಜೆಯ ರೇಲ್ವೆ ಸಿಗ್ನಲಿಂಗ್, ಡಿಎಸ್ಪಿ ಆಧಾರಿತ ಅಪ್ಲಿಕೇಶನ್ಗಳು, ಮೆಡಿಕಲ್, ಎಲೆಕ್ಟ್ರಾನಿಕ್ಸ್, ಎನರ್ಜಿ, ರಕ್ಷಣಾ ವೈಮಾನಿಕ ಕೈಗಾರಿಕಾ ನಿಯಂತ್ರಣಗಳು, ಐಟಿ ಹಾರ್ಡ್ವೇರ್, ಆಟೋಮೋಟಿವ್ ಇತ್ಯಾದಿ ಕ್ಷೇತ್ರಗಳಲ್ಲಿ ಹಲವಾರು ಕಂಪನಿಗಳಿಗೆ ಪೂರೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

