ಮೈಸೂರು

ದೇಬೂರು ಗ್ರಾಪಂ ಅಭಿವೃದ್ಧಿ ಕುಂಠಿತ; ಪ್ರತಿಭಟನೆ

Published On :

ಕ.ಪ್ರ.ವಾರ್ತೆ ನಂಜನಗೂಡು ಅ. 21
ತಾಲೂಕಿನ ದೇಬೂರು ಗ್ರಾಪಂ ಕಚೇರಿಯಲ್ಲಿ ನೌಕರರ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸ ಕಾರ್ಯಗಳು ಕುಂಠಿತವಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರವೇ ದೇಬೂರು ಘಟಕದ ಅಧ್ಯಕ್ಷ ಅಶೋಕ್ ಮಾತನಾಡಿ, ಅವೈಜ್ಞಾನಿಕವಾಗಿ ಕಟ್ಟಿರುವ ಚರಂಡಿಗಳಲ್ಲಿ ನೀರು ಹರಿಯದೆ ಮಾಲಿನ್ಯ ಉಂಟುಮಾಡಿ ರೋಗ ಹರಡುವ ಭೀತಿಯುಂಟಾಗಿದೆ. ಶೌಚಾಲಯದ ಫಲಾನುಭವಿಗಳಿಗೆ ಕಾನೂನು ಉಲ್ಲಂಘಿಸಿ, ಹಣ ಪಾವತಿದೇ ಸಬೂಬು ಹೇಳುತ್ತಿದ್ದು, ಕಳೆದ 2 ವರ್ಷಗಳಿಂದ ಎಸ್ಸಿ, ಎಸ್ಟಿ ವರ್ಗದವರಿಗೆ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಬರುವ ಸಹಾಯಧನ ವಿತರಿಸಿಲ್ಲ ಎಂದು ಆರೋಪಿಸಿದ ಅವರು, ನ.10ರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಪಿಡಿಒ ಸಿದ್ದು ಮಾತನಾಡಿ, 13ನೇ ಹಣಕಾಸು ನಿಧಿ 2ರ ಅನುದಾನದಲ್ಲಿ 38 ಲಕ್ಷಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಈಗಾಗಲೇ 4 ಲಕ್ಷ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, ಸ್ವಚ್ಛತೆ, ಚರಂಡಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿಗಳಿಗೆ ಕ್ರಮ ಕೈಗೊಳ್ಳಲಾಗಿದೆ. ಶೇ.18ರ ಅನುದಾನದಲ್ಲಿ ಫಲಾನುಭವಿಗಳನ್ನು ಗುರುತಿಸಿ, ಹಸು- ಕರು, ಚಾಲಕ ಮತ್ತು ಕಂಪ್ಯೂಟರ್ ತರಬೇತಿಗಳನ್ನು ನಡೆಸಲಾಗಿದೆ ಎಂದು ಸಮಜಾಯಿಷಿ ನೀಡಿದರು. ಕರವೇ ಮುಖಂಡರಾದ ಅಶೋಕ್, ಡಿ.ಜಿ. ಮಹೇಶ್, ವಿಜಯ್ ಕುಮಾರ್, ಮಹೇಶ್, ಭಾಸ್ಕರ್, ನಾಗೇಶ್, ಮಹೇಶ್. ಎನ್, ಗಣೇಶ್, ಡಿ.ಪಿ. ರಾಜೇಶ್, ನಾಗೇಂದ್ರ, ರವಿ, ವಿಜಯ್, ಸುನಿಲ್, ಶಿವಕುಮಾರ್, ಆಟೋ ಮಂಜು, ಗ್ರಾಪಂ ಅಧ್ಯಕ್ಷ ಸಣ್ಣಯ್ಯ, ಉಪಾಧ್ಯಕ್ಷ ಸಿದ್ದರಾಜು ಇದ್ದರು. ಪಿಎಸ್‌ಐ ಜಿ.ಆರ್. ನಟರಾಜು ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.