ಮೈಸೂರು

ನಗರ ಪೊಲೀಸ್‌ಗೆ ಎರಡು ವೈಬ್‌ಸೈಟ್...

Published On :

ಬಿ. ಶೇಖರ್ ಗೋಪಿನಾಥಂ
ಕ.ಪ್ರ.ವಾರ್ತೆ ಮೈಸೂರು ಅ. 21
ಬೆಂಗಳೂರು ನಗರ ಪೊಲೀಸರ ಮಾದರಿಯಲ್ಲಿ ಮೈಸೂರು ನಗರ ಪೊಲೀಸರು ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದಕ್ಕಾಗಿಯೋ ಏನೋ ಎಂಬಂತೆ ಮೈಸೂರು ನಗರ ಪೊಲೀಸ್ ಘಟಕವು ಎರಡು ವೆಬ್‌ಸೈಟ್‌ಗಳನ್ನು ಹೊಂದಿದೆ.
ಬೆಂಗಳೂರು ನಗರ ಪೊಲೀಸ್ ಸಹ ಎರಡು ವೆಬ್‌ಸೈಟ್ ಹೊಂದಿದೆ. ಸಾಮಾನ್ಯ ಪೊಲೀಸರಿಗಾಗಿ ಹಾಗೂ ಸಂಚಾರ ಪೊಲೀಸರಿಗಾಗಿ ಎರಡು ಪ್ರತ್ಯೇಕ ವೆಬ್‌ಸೈಟ್‌ಗಳು ಕಾರ್ಯ ನಿರ್ವಹಿಸುತ್ತಿದೆ. ಆದರೆ, ಮೈಸೂರು ಪೊಲೀಸರು ಆರಂಭಿಸಿರುವ ಹೊಸ ಮತ್ತು ಹಳೆಯ ಎರಡೂ ವೆಬ್‌ಸೈಟ್‌ಗಳಲ್ಲೂ ಸಾಮಾನ್ಯ ಪೊಲೀಸ್ ಹಾಗೂ ಸಂಚಾರ ಪೊಲೀಸ್ ಸಂಬಂಧಿಸಿದ ಮಾಹಿತಿಗಳಿವೆ.
ಹಳೆಯ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರೊಂದಿಗೆ ಸಂವಾದ ಮಾಡಲು ಆಗುತ್ತಿರಲಿಲ್ಲ. ಹೊಸ ವೆಬ್‌ಸೈಟ್ ಮೂಲಕ ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ಅಂದರೆ ಇಂಟರ್ಯಾಕ್ಟಿವ್ ಮಾಡಬಹುದು ಎಂಬುದು ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಸ್ಪಷ್ಟನೆ. ಮೈಸೂರು ನಗರ ಪೊಲೀಸ್ ಹಳೆಯದು ಢಿಢಿಢಿ.ಟಣಡ್ಟ್ಠಜ್ಛ್ಝಡಿಣಠ್ಟಟ್ಝ್ಛಜ.್ಟ್ಠ್ಜ ವೆಬ್‌ಸೈಟ್ ಹೊಂದಿತ್ತು. ಈಗ ಹೊಸದಾಗಿ ಢಿಢಿಢಿ.ಟಣಡ್ಟ್ಠಜ್ಛ್ಝಡಿಣಠ್ಟಟ್ಝ್ಛಜ.್ಜ್ಟಢ.್ಝಟಿ ವೆಬ್‌ಸೈಟ್ ವ್ಯವಸ್ಥೆ ಮಾಡಿದೆ. ಈ ಹೊಸ ವೆಬ್‌ಸೈಟ್ ಅನ್ನು ನಿವೃತ್ತ ಎಡಿಜಿಪಿ ಕೆಂಪಯ್ಯ ಚಾಲನೆ ನೀಡಿದ್ದಾರೆ.
ಹೊಸ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ದೂರು ನೀಡಬಹುದು. ಆರ್‌ಟಿಐ, ಸಕಾಲ ಕಾಯ್ದೆ ಕಾನೂನಗಳ ಮಾಹಿತಿ ಲಭ್ಯ. ಪಾಸ್‌ಪೋರ್ಟ್ ಅರ್ಜಿ, ಪೊಲೀಸ್ ಪರಿಶೀಲನಾ ಅರ್ಜಿ, ಶಸ್ತ್ರಾಸ್ತ್ರ ಪರವಾನಗಿ ಅರ್ಜಿಗಳ ಮಾಹಿತಿ, ಸ್ಥಿತಿಗತಿ ತಿಳಿಯಬಹುದು. ಸಂಚಾರ ನಿರ್ವಹಣೆ ಕಾರ್ಯವೈಖರಿ, ಸಂಚಾರ ನಿಯಮಗಳು, ಏಕಮುಖ ಸಂಚಾರ ಮಾಹಿತಿ, ಸಂಚಾರ ನಿಯಮ ಉಲ್ಲಂಘನೆಗಾಗಿ ವಿಧಿಸುವ ದಂಡಗಳ ವಿವರ ಇದೆ. ಆದರೆ, ಹಳೆಯ ವೆಬ್‌ಸೈಟ್‌ನಲ್ಲೂ ಸಹ ಇದೇ ಮಾಹಿತಿ ಲಭ್ಯವಿದೆ. ಈ ಎರಡು ವೆಬ್‌ಸೈಟ್‌ಗಳಲ್ಲೂ ಕನ್ನಡ ಭಾಷೆಯೇ ಮಾಯವಾಗಿದೆ.
ಫೇಸ್‌ಬುಕ್: ಮೈಸೂರು ನಗರ ಸಂಚಾರ ಪೊಲೀಸರಿಗಾಗಿ ಮಾಡಿದ್ದ ಫೇಸ್‌ಬುಕ್ ಖಾತೆ ಬದಲಾಗಿ ಮೈಸೂರು ನಗರ ಪೊಲೀಸ್ ಎಂಬ ಹೊಸ ಫೇಸ್‌ಬುಕ್ ಖಾತೆ ತೆರೆಯಲಾಗಿದೆ. ಸಾಮಾನ್ಯ ಹಾಗೂ ಸಂಚಾರ ಪೊಲೀಸ್ ಸಂಬಂಧಿಸಿದ ಎರಡೂ ಮಾಹಿತಿಯು ಇದೇ ಖಾತೆಯಲ್ಲಿ ವೀಕ್ಷಿಸಬಹುದು.

ಹೊಸ ವೆಬ್‌ಸೈಟ್ ಅಧಿಕೃತ
ಹಳೆಯ ವೆಬ್‌ಸೈಟ್ ಅನ್ನು 6 ವರ್ಷಗಳ ಹಿಂದೆ ಖಾಸಗಿಯಾಗಿ ರಚಿಸಲಾಗಿತ್ತು. ಈಗ ಹೊಸ ವೆಬ್‌ಸೈಟ್ ಅನ್ನು ಸರ್ಕಾರದ ಸಹಾಯದಿಂದಲೇ ರಚಿಸಲಾಗಿದೆ. ಹಳೆಯ ವೆಬ್‌ಸೈಟ್ ಅನ್ನು ಸ್ಥಗಿತಗೊಳಿಸಲಾಗುತ್ತಿದೆ. ಇನ್ನೂ ಮುಂದೆ ಹೊಸ ವೆಬ್‌ಸೈಟ್ ಅಧಿಕೃತವಾಗಿ ಇರಲಿದೆ. ಹೊಸ ವೆಬ್‌ಸೈಟ್‌ನಲ್ಲಿ ಕನ್ನಡ ಅಳವಡಿಸಲಾಗುತ್ತಿದ್ದು, 3- 4 ದಿನಗಳಲ್ಲಿ ಕನ್ನಡ ಅಳವಡಿಕೆ ಪೂರ್ಣಗೊಳ್ಳಲಿದೆ. ಸಾರ್ವಜನಿಕರು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ವೆಬ್‌ಸೈಟ್ ವೀಕ್ಷಿಸಬಹುದು.
 ಡಾ. ಎಂ.ಎ. ಸಲೀಂ, ನಗರ ಪೊಲೀಸ್ ಆಯುಕ್ತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.