381 ಅಂಗನವಾಡಿಗಳಿಗೆ ಸ್ವಂತ ಕಟ್ಟಡ
ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ ಮೈಸೂರು ಅ. 22
ಡಾ. ಡಿ.ಎಂ. ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ವರದಿಯ ಅನುಸಾರ ರಾಜ್ಯದ 114 ತಾಲೂಕುಗಳು ಹಿಂದುಳಿದಿದ್ದು, ಅಲ್ಲಿ 381 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ 44.44 ಕೋಟಿ ಬಿಡುಗಡೆ ಮಾಡಿದೆ.
ಈ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ನಿವೇಶನವಿದೆ. ಪ್ರತಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 12 ಲಕ್ಷದಂತೆ ಅನುದಾನ ನಿಗದಿಪಡಿಸಲಾಗಿದೆ. 381 ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಿಸಲು 45.72 ಕೋಟಿಗಳ ಅನುದಾನದ ಅವಶ್ಯಕತೆ ಇದೆ. ವಿಶೇಷ ಅಭಿವೃದ್ಧಿ ಕಾಮಗಾರಿಗಳಡಿ 44.44 ಕೋಟಿ ಅನುದಾನ ಒದಗಿಸಲಾಗಿದ್ದು, 1.28 ಕೋಟಿ ಅನುದಾನವಿನ್ನೂ ಅವಶ್ಯಕತೆ ಇದೆ. ಸದರಿ ಅನುದಾನವನ್ನು ತಾಪಂಗಳಿಗೆ ವಾರ್ಷಿಕವಾಗಿ ಬಿಡುಗಡೆ ಮಾಡುವ 1 ಕೋಟಿ ಅಭಿವೃದ್ಧಿ ಅನುದಾನದಲ್ಲಿ ಕೊರತೆಯಾಗುವ ಅನುದಾನವನ್ನು ಸಂಬಂಧಿಸಿದ ತಾಪಂಗಳು ಬಳಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ.
ಕಾಮಗಾರಿಗಳ ಆಯ್ಕೆ: ಈ ಕಾರ್ಯಕ್ರಮದಡಿ ಜಿಲ್ಲಾವಾರು ತಾಲೂಕುಗಳಿಗೆ ನಿಗದಿಪಡಿಸಿದ ಅನುದಾನದ ಮಿತಿಯೊಳಗೆ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಿಸಿಕೊಳ್ಳಲು ಕಾಮಗಾರಿ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡುವ ಎಲ್ಲ ಕಾಮಗಾರಿಗಳಿಗೆ ವಿವರವಾದ ಯೋಜನಾ ವರದಿಗಳನ್ನು ಮತ್ತು ಅಂದಾಜು ಪಟ್ಟಿಗಳನ್ನು ತಯಾರಿಸಬೇಕು. ಕಾಮಗಾರಿಗಳ ಕ್ರಿಯಾ ಸಯೋಜನೆಯನ್ನು ಮಾರ್ಗಸೂಚಿ ಹೊರಡಿಸಿದ 15 ದಿನಗಳೊಳಗಾಗಿ ತಾಪಂಗಳು ತಯಾರಿಸಿ ಜಿಪಂಯಿಂದ ಅನುಮೋದನೆ ಪಡೆದುಕೊಳ್ಳಬೇಕು. ಅನುಮೋದಿತವಾದ ಕ್ರಿಯಾ ಯೋಜನೆ ಪ್ರತಿಯನ್ನು ಯೋಜನಾ ಇಲಾಖೆಯ ಡಾ.ಡಿ.ಎಂ. ನಂಜುಂಡಪ್ಪ ಉಸ್ತುವಾರಿ ಕೋಶಕ್ಕೆ ಸಲ್ಲಿಸಬೇಕು ಎಂದು ಪಂಚಾಯತ್ ರಾಜ್ ನಿರ್ದೇಶಕ ಕೆ. ಯಾಲಕ್ಕಿಗೌಡ ತಿಳಿಸಿದ್ದಾರೆ.
ಆಯವ್ಯಯ ಕಾರ್ಯಕ್ರಮದ ಅನುಷ್ಠಾನವನ್ನು ಜಿಲ್ಲಾ, ತಾಪಂ ಉಸ್ತುವಾರಿಯಡಿಯಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ನಿರ್ವಹಿಸಬೇಕು. ತಾಪಂ ಕಾರ್ಯಕ್ರಮದ ಕಾಮಗಾರಿಗಳನ್ನು ಸಂಬಂಧಿಸಿದ ಜಿಪಂಗಳು ಉಸ್ತುವಾರಿ ಕಾರ್ಯ ಮಾಡಬೇಕು. ಕಾಮಗಾರಿ ಆರಂಭವಾಗುವುದಕ್ಕೆ ಮುಂಚೆ, ಆರಂಭವಾದ ನಂತರ ಹಾಗೂ ಪೂರ್ಣಗೊಂಡ ನಂತರ ಮೂರು ಹಂತಗಳಲ್ಲಿ ಛಾಯಾಚಿತ್ರಗಳನ್ನು ತೆಗೆದು ಕಡತದಲ್ಲಿ ದಾಖಲಿಸಬೇಕು. ಮಾಹಿತಿ ಹಕ್ಕು ನಿಯಮಗಳ ಪ್ರಕಾರ ಕಾಮಗಾರಿ ಅನುಷ್ಠಾನವಾಗುವ ಸ್ಥಳದಲ್ಲಿ ಕಾಮಗಾರಿಯ ಹೆಸರು, ಅಂದಾಜು ವೆಚ್ಚ, ನಿಗದಿಪಡಿಸಿದ ಸಮಯ, ಆರಂಭದ ದಿನಾಂಕ, ಟೆಂಡರ್ ಮೊಬಲಗು, ಟೆಂಡರ್ದಾರನ ಹೆಸರು, ವಿಳಾಸವನ್ನು ನಮೂದಿಸಲಾದ ಫಲಕವನ್ನು ಸ್ಥಾಪಿಸಬೇಕು. ಪ್ರಗತಿ ವರದಿಯನ್ನು ಸರ್ಕಾರಕ್ಕೆ ಪ್ರತಿ ತಿಂಗಳು ವೆಬ್ಸೈಟ್ನಲ್ಲಿ ತುಂಬುವ ಮೂಲಕ ಮತ್ತು ಇ-ಮೇಲ್ ಮೂಲಕ ಸಲ್ಲಿಸಬೇಕು ಎಂದೂ ತಿಳಿಸಲಾಗಿದೆ.
ಜಿಪಂ ಹೆಸರು ಅನುದಾನ ಲಕ್ಷ ಗಳಲ್ಲಿ ಅಂಗನವಾಡಿಗಳ ಸಂಖ್ಯೆ
ಬೆಂಗಳೂರು (ನ) 20.88 2
ಬೆಂಗಳೂರು (ಗ್ರಾ) 6.27 1
ಬೆಳಗಾವಿ 148.85 13
ಬಳ್ಳಾರಿ 220.55 19
ಬೀದರ್ 262.45 22
ಬಿಜಾಪುರ 302.02 26
ಚಿಕ್ಕಮಗಳೂರು 72.46 6
ಚಿತ್ರದುರ್ಗ 179.6 15
ಧಾರವಾಡ 47.46 4
ಗುಲ್ಬರ್ಗ 522.67 44
ಯಾದಗಿರಿ 222.75 19
ಹಾಸನ 101.44 9
ಕೋಲಾರ 52.21 5
ಮಂಡ್ಯ 159.4 14
ಜಿಪಂ ಹೆಸರು ಅನುದಾನ ಲಕ್ಷ ಗಳಲ್ಲಿ ಅಂಗನವಾಡಿಗಳ ಸಂಖ್ಯೆ
ಮೈಸೂರು 185.97 16
ರಾಯಚೂರು 330.82 28
ಶಿವಮೊಗ್ಗ 54.3 5
ತುಮಕೂರು 369.64 31
ಉತ್ತರ ಕನ್ನಡ 88.45 8
ಚಾಮರಾಜನಗರ 147.33 13
ದಾವಣಗೆರೆ 175.42 15
ಬಾಗಲಕೋಟೆ 120.81 10
ಗದಗ 66.88 6
ಹಾವೇರಿ 114.34 10
ಕೊಪ್ಪಳ 218.34 19
ರಾಮನಗರ 108.59 9
ಚಿಕ್ಕಬಳ್ಳಾಪುರ 144.1 12
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

