ಮೈಸೂರು

ಸರ್ಕಾರದ ಯೋಜನೆ ತಲುಪಿಸಲು ಕರೆ

Published On :

ಕೆ.ಆರ್. ನಗರ: ಹಳ್ಳಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ದುಡಿಯುವ ಕೈಗಳಿಗೆ ಕೂಲಿ ಕೆಲಸ ನೀಡಲು ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದ್ದು ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು ಇದರ ಸದುಪಯೋಗವನ್ನು ಅರ್ಹರಿಗೆ ತಲುಪಿಸಬೇಕು ಎಂದು ಡೋರನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಎಂ. ಗಿರೀಶ್ ಹೇಳಿದರು. ತಾಲೂಕಿನ ಅರಕೆರೆಕೊಪ್ಪಲು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಯೋಜನೆಯಿಂದ ಗ್ರಾಮಗಳಿಗೆ ಚರಂಡಿ, ರಸ್ತೆ ಮತ್ತಿತರ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಹುದಾಗಿದ್ದು ಸಾರ್ವಜನಿಕರು ಅಗತ್ಯವಿರುವ ಕೆಲಸ ಮಾಡಲು ಪಂಚಾಯಿತಿಯೊಂದಿಗೆ ಸಹಕರಿ ಎಂದು ಕೋರಿದರು. ಗ್ರಾಮದಲ್ಲಿ 1.75 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಿಸಿದ್ದು ಅಗತ್ಯವಿರುವ ಇತರ ಕಾಮಗಾರಿಗಳನ್ನು ಮಾಡಿಸಲಾಗುತ್ತಿದೆ ಎಂದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಮಾಲೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಮುಖಂಡರಾದ ಚಿಕ್ಕಮಾಲೇಗೌಡ, ರಮೇಶ್, ನಾಗಮ್ಮ, ಶಿವಣ್ಣೇಗೌಡ, ಮಾಲೇಗೌಡ, ಜವರೇಗೌಡ ಇದ್ದರು.

ಕ್ಲಬ್‌ಮೇಲೆ ದಾಳಿ ಏಳು ಮಂದಿ ವಶಕ್ಕೆ
ಪಿರಿಯಾಪಟ್ಟಣ:
ಕ್ಲಬ್ ಮೇಲೆ ದಾಳಿ ನಡೆಸಿರುವ ಪೊಲೀಸರು 7 ಮಂದಿಯನ್ನು ವಶಕ್ಕೆ ತೆಗೆದುಕೊಂಡು, ಕ್ಲಬ್‌ನ ಪೀಠೋಪಕರಣ ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಹುಣಸೇಕುಪ್ಪೆ ರಸ್ತೆಯ ರಾಜಾಪುರ ರಿಕ್ರಿಯೇಷನ್ ಕ್ಲಬ್ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಸನ್ನಕುಮಾರ್ ನೇತೃತ್ವದ ತಂಡ ಕ್ಲಬ್‌ನಲ್ಲಿದ್ದ ಮಂಜುನಾಥ, ಮೂಮುಲ್ ಷರೀಫ್, ಕುಮಾರ, ನರಸಿಂಹ, ಶ್ರೀನಿವಾಸ, ವೆಂಕಟೇಶ್ ಹಾಗೂ ಶ್ರೀನಿವಾಸಗೌಡ ಅವರನ್ನು ಬಂಧಿಸಿ ಕ್ಲಬ್‌ನಲ್ಲಿದ್ದ ಚೇರು, ಬೆಂಚು, ಕಂಪ್ಯೂಟರ್ ಉಪಕರಣಗಳು ಹಾಗೂ 1,850 ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ವಿಶ್ವನಾಥ ಶೆಟ್ಟಿಗೆ ಯೋಗಸಿರಿ ಪ್ರಶಸ್ತಿ
ಕೆ.ಆರ್. ನಗರ:
ನಗರದ ಪತಂಜಲಿ ಯೋಗಾಶ್ರವು ಟ್ರಸ್ಟ್‌ನ ಯೋಗ ಶಿಕ್ಷಕ ಪಿ.ಆರ್. ವಿಶ್ವನಾಥಶೆಟ್ಟಿ ಅವರಿಗೆ 2013ನೆ ಸಾಲಿನ ದಸರಾ ಯೋಗಸಿರಿ ಪ್ರಶಸ್ತಿ ಲಭಿಸಿದೆ.
ಶತಮಾನೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ದಸರಾ ಯೋಗ ಉಪಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಯೋಗ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದ್ದು, ನಗರದ ವಾಸವಿ ಮಹಲ್‌ನಲ್ಲಿ ವಿಶ್ವನಾಥಶೆಟ್ಟಿ ಉಚಿತ ಯೋಗ ತರಬೇತಿ ನೀಡುತ್ತಿದ್ದಾರೆ.

ಪೌರ ಕಾರ್ಮಿಕರ ದಿನಾಚರಣೆ ನಿರ್ಲಕ್ಷ್ಯ
ಹುಣಸೂರು:
ಹುಣಸೂರು ಪಟ್ಟಣದ ಪುರಸಭೆ ಆಡಳಿತ ವರ್ಗವು ಸರ್ಕಾರದ ಸುತ್ತೋಲೆಯಂತೆ ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರ ದಿನಾಚರಣೆ ಆಯೋಜಿಸದೆ ನಿರ್ಲಕ್ಷಿಸಿದೆ ಎಂದು ಪುರಸಭಾ ಸದಸ್ಯ ಕೆ. ಲಕ್ಷ್ಮಣ್ ಆರೋಪಿಸಿದರು.ಕ್ಷಣವೆ ಶಾಸಕರು ಸೂಚನೆ ನೀಡಿ ಪೌರ ಕಾರ್ಮಿಕರ ದಿನಾಚರಣೆ ಆಚರಿಸಿ ಕಾರ್ಮಿಕರನ್ನು ಗೌರವಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.