ಮತದಾನದ ಹಕ್ಕು ನೀಡಲು ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಅ. 25
ಕೆ.ಆರ್. ನಗರ ತಾಲೂಕಿನ 20 ಸಹಕಾರ ಬ್ಯಾಂಕುಗಳ ಸದಸ್ಯರಿಗೆ ಮತದಾನದ ಹಕ್ಕು ನೀಡಬೇಕು ಎಂದು ಒತ್ತಾಯಿಸಿ ಶಾಸಕ ಸಾ.ರಾ. ಮಹೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ವಿವಿಧ ಬ್ಯಾಂಕ್ಗಳ ಪದಾಧಿಕಾರಿಗಳು ಪ್ರತಿಭಟಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಕೆ.ಆರ್. ನಗರ ತಾಲೂಕಿನಿಂದ ಈಗಾಗಲೆ ಶೇ.50 ರಷ್ಟು ವ್ಯವಹಾರ ನಡೆಸಿರುವ ಬ್ಯಾಂಕುಗಳಿಗೆ ಮತದಾನ ಹಕ್ಕು ಇದೆ ಎಂದು ತಿಳಿಸಲಾಗಿತ್ತು. ಈಗಾಗಲೆ ಕೆ.ಆರ್. ನಗರ ತಾಲೂಕಿನಲ್ಲಿ 20 ಬ್ಯಾಂಕ್ಗಳಿಂದ ಜಿಲ್ಲಾ ಸಹಕಾರ ಬ್ಯಾಂಕಿಗೆ ಡೆಲಿಗೇಟ್ ಬರೆದು ಕೊಡಲಾಗಿದೆ. ಆದರೆ ಈಗ ತಮ್ಮ ಅನುಕೂಲಕ್ಕಾಗಿ ಕೇವಲ 7 ಬ್ಯಾಂಕುಗಳು ಮಾತ್ರ ಮತದಾನ ಹಕ್ಕು ಪಡೆದಿವೆ ಎಂದು ತಿಳಿಸಿರುವುದು ಸರಿಯಲ್ಲ ಎಂದು ಹೇಳಿದರು.
ಇದು ಕೇವಲ ಒಂದು ಪಕ್ಷದ ಅನುಕೂಲಕ್ಕಾಗಿ ಈ ಮತದಾನದ ಮೊಟಕುಗೊಳಿಸಲಾಗಿದೆ. ಈ 7 ಬ್ಯಾಂಕುಗಳನ್ನು ಹೊರತುಪಡಿಸಿ ಬೇರೆ ಬ್ಯಾಂಕುಗಳ ಚಾಲ್ತಿ ಖಾತೆಯಲ್ಲಿ ಹಣ ಇರಿಸದೆ ಠೇವಣಿ ಇಟ್ಟು, ಶೇ.50 ರಷ್ಟು ವ್ಯವಹಾರ ನಡೆಸದ ಹಾಗೆ ಮಾಡಲಾಗಿದೆ. ಈ ಹಿಂದೆ ತಿಳಿಸಿರುವಂತೆ ನಮ್ಮ ತಾಲೂಕಿನಲ್ಲಿ ಶೇ.50 ರಷ್ಟು ವ್ಯವಹಾರ ನಡೆಸಿರುವ ಬ್ಯಾಂಕುಗಳಲ್ಲಿ 20 ಬ್ಯಾಂಕುಗಳ ಬರುವುದರಿಂದ ಈ ಎಲ್ಲಾ ಬ್ಯಾಂಕುಗಳಿಗೆ ಮತದಾನದ ಹಕ್ಕು ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.
28ಕ್ಕೆ ಮಾಧ್ಯಮ ಕಾರ್ಯಾಗಾರ
ಮೈಸೂರು: ಮೈಸೂರು ವಿವಿ ಸಾಮರ್ಥ್ಯವರ್ಧಿತ ನಿರ್ದಿಷ್ಟ ಕ್ಷೇತ್ರ-2 ಮತ್ತು ದೃಷ್ಟಿ ವಿಶ್ವಾಸಿಗರ ಶಿಕ್ಷಣ ಕೇಂದ್ರದ ಸಂಯೋಜಕರು ಮತ್ತು ಕೇಂದ್ರ ಸಮಿತಿ ಸದಸ್ಯರಿಂದ ಯುಪಿಇ ಯೋಜನೆಯ ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಅ.28ರ ಬೆಳಗ್ಗೆ 10.30ಕ್ಕೆ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ನಡೆಯಲಿದೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ಮಟ್ಟು ಕಾರ್ಯಕ್ರಮ ಉದ್ಘಾಟಿಸಿ, ಸಂಕಲನ ಕೊಠಡಿ, ಮಾಧ್ಯಮ ಮತ್ತು ಸಾಮಾಜಿಕ ಅಭಿವೃದ್ಧಿ, ಸಂಶೋಧನಾ ಪತ್ರಿಕೆ ಹಾಗೂ ಅಭ್ಯುದಯ ಸುದ್ದಿಪತ್ರ ಬಿಡುಗಡೆ ಮಾಡುವರು. ನಿವೃತ್ತ ಮುಖ್ಯ ನ್ಯಾ.ಎಸ್. ರಾಜೇಂದ್ರಬಾಬು ಯುನಿಸೆಫ್-ಯುಪಿಇ ಮಾಧ್ಯಮ ಪ್ರತಿನಿಧಿಗಳ ಕಾರ್ಯಾಗಾರ ಉದ್ಘಾಟಿಸುವರು. ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

