ಮೈಸೂರು

ಪಿಎಲ್ಡಿ ಚುನಾವಣೆ: ಜೆಡಿಎಸ್ಗೆ ಭರ್ಜರಿ ಗೆಲುವು

Published On :

ಹುಣಸೂರು: ಹುಣಸೂರು ತಾಲೂಕು ಕೃಷಿ ಪ್ರಾಥಮಿಕ ಅಭಿವೃದ್ಧಿ ಬ್ಯಾಂಕ್ನ 2013-18ನೇ ಅವಧಿಗೆ 12 ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು 9 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರ ಹಿಡಿದಿದ್ದಾರೆ. ಒಂದು ಸ್ಥಾನ ಮಾತ್ರ ಲಾಟರಿಯಲ್ಲಿ ಕಾಂಗ್ರೆಸ್ ಪಾಲಾಗುವ ಮೂಲಕ, ಕಾಂಗ್ರೆಸ್ ಕೇವಲ 2 ಸ್ಥಾನ ಪಡೆದು ತೀವ್ರ ಮುಖಭಂಗ ಅನುಭವಿಸಿದೆ. ತಾಲೂಕಿನ ಸಾಲಗಾರರ ಕ್ಷೇತ್ರದಿಂದ ಹನಗೋಡು ಹೋಬಳಿಯಿಂದ ಹಳೇವಾರಂಚಿ ಗ್ರಾಮದ ಆರ್. ಜಗದೀಶ್, ಹೊನ್ನೇನಹಳ್ಳಿಯ ಶ್ರೀನಿವಾಸ್, ಗಾವಡಗೆರೆ ಹೋಬಳಿಯಿಂದ ಸೋಮಶೇಖರ್, ಪ್ರಕಾಶ್ ಹಾಗೂ ಕಸಬಾ ಹೋಬಳಿಯಿಂದ ಮಹಿಳಾ ಕ್ಷೇತ್ರದಲ್ಲಿ ಎರಡನೆ ಬಾರಿಗೆ ವಸಂತಮ್ಮ ಹಾಗೂ ಚಂದ್ರಶೇಖರ್ ಮತ್ತು ಉದಯ್ ನಡುವೆ ಮತಗಳು ಸಮವಾಗಿ ಬಂದಿದ್ದರಿಂದ ಲಾಟರಿಯಲ್ಲಿ ಉದಯ್ ಚುನಾಯಿತರಾದರು. ಬಿಳಿಕೆರೆ ಹೋಬಳಿಯಿಂದ ರಂಗಯ್ಯನಕೊಪ್ಪಲು ಗ್ರಾಮದ ಸತ್ಯನಾರಾಯಣ 2ನೇ ಬಾರಿಗೆ ಆಯ್ಕೆಯಾದರೆ, ಹೇಮಂತ್ ಕುಮಾರ್, ದೇವರಾಜೇಗೌಡ ಹಾಗೂ ಮಹಿಳಾ ಕ್ಷೇತ್ರದಿಂದ ವಿಶಾಲಕ್ಷಮ್ಮ, ಪ. ಪಂಗಡ ಮೀಸಲು ಕ್ಷೇತ್ರದಿಂದ ಶಾಸಕ ಎಸ್. ಚಿಕ್ಕಮಾದು ಅವರ ಸಹೋದರ ಸಿಂಗರಮಾರನಹಳ್ಳಿ ಗ್ರಾಮದ ಜವರನಾಯ್ಕ ಚುನಾಯಿತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.