ಮೈಸೂರು

ಗ್ರಾಮೀಣ ರೈತ ದಸರಾ ಅಂಗವಾಗಿ ಆಟೋಟ

Published On :

ಕ.ಪ್ರ.ವಾರ್ತೆ ನಂಜನಗೂಡು ಸೆ. 20
ಗ್ರಾಮೀಣ ರೈತರ ದಸರಾ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ಒಂದಾದ ಕೆಸರು ಗದ್ದೆ ಓಟದಲ್ಲಿ ತಾಲೂಕಿನ ಗೋಳೂರು ಗ್ರಾಮದ ರವಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಹೊರ ಆವರಣದಲ್ಲಿ ಮೂಟೆ ಹೊತ್ತು ಓಡುವ ಸ್ಪರ್ಧೆ, ಗುಂಡು ಎತ್ತುವುದು, ಕೆಸರು ಗದ್ದೆ ಓಟ, ಮಹಿಳೆಯರಿಗೆ ನೀರು ತುಂಬಿದ ಬಿಂದಿಗೆ ತಲೆ ಮೇಲಿಟ್ಟು ಓಡುವುದು, ರಂಗೋಲಿ ಸ್ಪರ್ಧೆಗಳು ನಡೆದವು.
ವಿಜೇತರ ವಿವರ: ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದಿದ್ದಾರೆ.
ಗುಂಡು ಎತ್ತುವ ಸ್ಪರ್ಧೆ- ನಂಜುಂಡ ಬಸವಟ್ಟಿಗೆ, ಜಯಣ್ಣ, ಸ್ವಾಮಿ ಗೋಣಹಳ್ಳಿ. 50 ಕೆಜಿ ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆ- ಕೆ.ಟಿ. ಮಹದೇವಸ್ವಾಮಿ ಕಪ್ಪಸೋಗೆ, ಸ್ವಾಮಿ, ಜಯಣ್ಣ ಗೋಣಹಳ್ಳ.  ಕೆಸರುಗದ್ದೆ ಓಟ- ರವಿ ಗೋಳೂರು, ನೀರು ತುಂಬಿದ ಬಿಂದಿಗೆ ತಲೆ ಮೇಲಿಟ್ಟು ಓಡುವ ಸ್ಪರ್ಧೆ ಮಹಿಳೆಯರ ಸ್ಪರ್ಧೆ- ಶಿವನಾಗಮ್ಮ, ಹುಲ್ಲಹಳ್ಳಿ, ಶಶಿಕಲಾ, ನಂಜನಗೂಡು. ರಂಗೋಲಿ ಸ್ಪರ್ಧೆ- ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿರೇಖಾ, ಗೀತಾ (ಕಳಲೆ), ಶಿವನಾಗಮ್ಮ (ಹುಲ್ಲಹಳ್ಳಿ). ಮೇಲ್ಕಂಡ ಸ್ಪರ್ಧೆಗಳಲ್ಲಿ ಮೊದಲೆರಡು ಸ್ಥಾನಗಳಲ್ಲಿ ವಿಜೇತರಾದವರನ್ನು ಸೆ.25 ರಂದು ರಂದು ಮೈಸೂರಿನಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು ಎಂದು ಕೃಷಿ ಅಧಿಕಾರಿ ಟಿ.ಎಸ್. ಕುಮಾರಸ್ವಾಮಿ ತಿಳಿಸಿದರು.
ತಾಪಂ ಇ.ಒ ಡಾ. ಕೃಷ್ಣಂರಾಜು ಮಾತನಾಡಿ, ಗ್ರಾಮೀಣ ದಸರಾ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ನಂಜನಗೂಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಸೆ.25 ರಂದು ಸನ್ಮಾನಿಸಲಾಗುವುದು ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಕೃಷಿ ಅಧಿಕಾರಿ ಟಿ.ಎಸ್. ಕುಮಾರಸ್ವಾಮಿ, ಸಿಡಿಪಿಒ ಗೀತಾಲಕ್ಷ್ಮಿ, ಆರ್‌ಐ ಜಗದೀಶ್, ಎಒ ನಾಗೇಂದ್ರ ರಾಘವೇಂದ್ರ, ದೈಹಿಕ ಶಿಕ್ಷಕರಾದ ಒಣಕಾರ ನಾಯಕ, ಚಲುವರಾಜು, ಶ್ರೀಪತಿ, ರವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.