ಮೈಸೂರು

ಉಚಿತ ತಪಾಸಣೆ

Published On :

ಮೈಸೂರು: ಹೆಬ್ಬಾಳಿನಲ್ಲಿರುವ ರೀವರ್ ವ್ಯೂ ಆಸ್ಪತ್ರೆಯಲ್ಲಿ ಸೆ.22ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಶ್ವಾಸಕೋಶದ ತೊಂದರೆಗಳಾದ ಧಮ್ಮು, ಕೆಮ್ಮು, ಅಲರ್ಜಿ ಇತ್ಯಾದಿ ರೋಗಗಳ ತಪಾಸಣೆ ಶಿಬಿರ ನಡೆಯಲಿದ್ದು, ಮೊ. 88844 08000 ಸಂಪರ್ಕಿಸಬಹುದು.

ಯಕ್ಷಗಾನ ಪ್ರಸಂಗ
ಕೃಷ್ಣತಾತ್ಪರ್ಯ ಯಕ್ಷವೃಂದದಿಂದ ಸೆ.22ರ ಮಧ್ಯಾಹ್ನ 3ಕ್ಕೆ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಶ್ರೀಪೂರ್ಣಪ್ರಜ್ಞಾ ವಿಜಯ ಯಕ್ಷಗಾನ ಪ್ರಸಂಗ ಏರ್ಪಡಿಸಿದ್ದು, ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೃತಿ ಬಿಡುಗಡೆಗೊಳಿಸುವರು.

ಸಂಗೀತ ಕಾರ್ಯಕ್ರಮ
ಸುರಭಿ ಗಾನಕಲಾಮಂದಿರ ಚಾರಿಟಬಲ್ ಟ್ರಸ್ಟ್‌ನಿಂದ ಸೆ.22ರ ಸಂಜೆ 5.30ಕ್ಕೆ ರಾಮಸ್ವಾಮಿ ವೃತ್ತದ ಬಳಿಯ ಟಿ.ವಿ. ಶ್ರೀನಿವಾಸನ್ ಸ್ಮಾರಕ ಸಭಾಂಗಣದಲ್ಲಿ ದ್ವೈಮಾಸಿಕ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದು, ಸಂಜನಾಕೌಶಿಕ್ ತಂಡದ ಹಿಂದೂಸ್ತಾನಿ ಸಂಗೀತ ಹಾಗೂ ಮೇಘಾ ಹರಿಸಂಕರ್ ತಂಡ ಹಾಡುಗಾರಿಕೆ ಪ್ರಸ್ತುತಪಡಿಸಲಿದೆ.

ಉಪನ್ಯಾಸ
ಯಾದವಗಿರಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ಸೆ.22ರ ಸಂಜೆ 6ಕ್ಕೆ ಸ್ವಾಮಿ ವೀರೇಶಾನಂದಜಿ ಶ್ರೀಮದ್ಭಾಗವತ ದಶಮಸ್ಕಂದ ಕುರಿತು ಉಪನ್ಯಾಸ ನೀಡುವರು.

ಪ್ರತಿಭಾ ಪುರಸ್ಕಾರ
ಕರ್ನಾಟಕ ದಲಿತರ ಕ್ಷೇಮಾಭಿವೃದ್ಧಿ ಪ್ರತಿಷ್ಠಾನದಿಂದ ಸೆ.22ರ ಬೆಳಗ್ಗೆ 10.30ಕ್ಕೆ ವಿಜಯನಗರದ ಧ್ಯಾನ ಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಿದ್ದು, ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸಲಿದ್ದು, ಪ್ರೊ.ಡಿ. ನಂಜುಂಡಯ್ಯ ಅಧ್ಯಕ್ಷತೆ ವಹಿಸುವರು.

ಕೃತಜ್ಞತೆ
ಕರ್ನಾಟಕ ಸರ್ಕಾರಿ ಶುಶ್ರೂಷಕರ ಸಂಘ ಜಿಲ್ಲಾಧ್ಯಕ್ಷೆಯಾಗಿ ಆಯ್ಕೆಯಾದ ಶಿವಮ್ಮ ಅವರು ತಮ್ಮ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಅಭಿನಂದನೆ
ಬಿಜೆಪಿ ನಗರಾಧ್ಯಕ್ಷ ಇ.ಮಾರುತಿರಾವ್ ಹಾಗೂ ಹಿರಿಯ ಮುಖಂಡರಾದ ಯತೀರಾಜ್ ಅವರಿಗೆ ಜ್ಯೋತಿನಗರದ ಶ್ರೀ ಗುರುರಾಘವೇಂದ್ರ ಯುವಕರ ಸಂಘದ ಪದಾಧಿಕಾರಿಗಳಾದ ರಾಜೇಶ್, ಗಿರೀಶ್, ಮನೋಹರ್,  ಸೂರತ್, ಶಿವು, ದಿನೇಶ್ ಅಭಿನಂದನೆ ಸಲ್ಲಿಸಿದ್ದಾರೆ.

ಇಂದು ವಿದ್ಯುತ್ ಪೂರೈಕೆ ವ್ಯತ್ಯಯ
ಮೈಸೂರು: ಕರಕನಹಳ್ಳಿ ಮತ್ತು ಇಲವಾಲದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವಿರುವುದರಿಂದ ಸೆ.21ರ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಇಲವಾಲ, ನಾಗವಾಲ, ಕೂರ್ಗಳ್ಳಿ, ಗುಂಗ್ರಾಲ್ ಛತ್ರ, ಆನಂದೂರು ಗ್ರಾಪಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ.

ಇಂದು ಫೋನ್ ಇನ್ ಕಾರ್ಯಕ್ರಮ
ಎಚ್.ಡಿ. ಕೋಟೆ: ತಾಲೂಕು ಪತ್ರಕರ್ತರ ಸಂಘದಲ್ಲಿ ಸೆ.21ರ ಬೆಳಗ್ಗೆ 11.30 ರಿಂದ 12.30 ರವರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಾಲೇಗೌಡರಿಂದ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಿದೆ. ಸಾರ್ವಜನಿಕರು ತಾಲೂಕಿನ ಆರೋಗ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಮೊ. 9379886675 ಕರೆ ಮಾಡುವಂತೆ ಪ್ರದಾನ ಕಾರ್ಯದರ್ಶಿ ಕನ್ನಡಪ್ರಮೋದ್ ಹೇಳಿದ್ದಾರೆ.

ತೆರೆಕಂಡ ಚಲನಚಿತ್ರ ಜಂಗಲ್ ಜಾಕಿ
ಎಚ್.ಡಿ. ಕೋಟೆ: ಹಳ್ಳಿಹೈದ ಪ್ಯಾಟೇಗ್ ಬಂದ ರಿಯಾಲಿಟಿ ಶೋ ಖ್ಯಾತಿಯ ರಾಜೇಶ್ ಅಭಿನಯದ ಶುಕ್ರವಾರ ತೆರೆಕಂಡ ಚಲನಚಿತ್ರ ಜಂಗಲ್ ಜಾಕಿಯನ್ನು ಎಚ್.ಡಿ. ಕೋಟೆ ಮಂಜುನಾಥ ಚಿತ್ರಮಂದಿರದಲ್ಲಿ ತಾಲೂಕಿನ ಚಿತ್ರಪ್ರೇಮಿಗಳು ನೋಡಿ ಆನಂದಿಸಿದರು.

ವಧು- ವರರ ಸಮಾವೇಶ
ಮೈಸೂರು: ಜೆ.ಪಿ. ನಗರದಲ್ಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಸೆ.22ರ ಬೆಳಗ್ಗೆ 10ಕ್ಕೆ ತ್ರಿಮತಸ್ಥ ಬ್ರಾಹ್ಮಣ ವಧು- ವರರ ಅನ್ವೇಷಣೆ, ಸಮಾವೇಶ ಹಾಗೂ ನೋಂದಣಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೊ. 98453 49221 ಸಂಪರ್ಕಿಸಬಹುದು.

ಗಣೇಶ ಚತುರ್ಥಿ
ಮೈಸೂರು: ವಾಸವಿ ಶಾಂತಿಧಾಮ ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನಿಂದ ಸೆ.22ರ ಸಂಜೆ 6ಕ್ಕೆ ಆಲನಹಳ್ಳಿಯ ವಾಸವಿ ಶಾಂತಿಧಾಮದಲ್ಲಿ ಸಂಕಷ್ಟಹರ ಚತುರ್ಥಿ ಪ್ರಯುಕ್ತ ವಿಘ್ನೇಶ್ವರ ಸ್ವಾಮಿ ವಿಶೇಷ ಸಾಮೂಹಿಕ ಪೂಜೆ ಏರ್ಪಡಿಸಲಾಗಿದೆ.

ಕಣ್ಣಿನ ತಪಾಸಣೆ
ಮೈಸೂರು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಹಾಗೂ ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಟ್ರಸ್ಟ್‌ನಿಂದ ಸೆ. 23ರ ಬೆಳಗ್ಗೆ 9ಕ್ಕೆ ಎಂಆರ್‌ಸಿ ಆಸ್ಪತ್ರೆಯಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ದೂ. 0821- 2472102 ಸಂಪರ್ಕಿಸಬಹುದು.

ಜೀವನ ಕಲೆ ಶಿಬಿರ
ಕುವೆಂಪುನಗರದಲ್ಲಿರುವ ದಿ ಆರ್ಟ್ ಆಫ್ ಲೀವಿಂಗ್‌ನ ವ್ಯಕ್ತಿ ವಿಕಾಸ ಕೇಂದ್ರದಲ್ಲಿ ಸೆ.24 ರಿಂದ 29 ರವರೆಗೆ ಜೀವನ ಕಲೆಯ ಸಂತಸದ ಶಿಬಿರ ಏರ್ಪಡಿಸಿದ್ದು, ಮೊ. 98459 63387 ಸಂಪರ್ಕಿಸಬಹುದು.

ನಾಳೆ ಸರ್ವ ಸದಸ್ಯರ ಸಭೆ
ಟಿ. ನರಸೀಪುರ: ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ)ನ 2012-13ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಸೆ.22ರ ಬೆಳಗ್ಗೆ 11ಕ್ಕೆ ಗುರುಭವನದಲ್ಲಿ ನಡೆಯಲಿದೆ. ಬ್ಯಾಂಕಿನ ಅಧ್ಯಕ್ಷ ಕೆ.ವಜ್ರೇಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಬ್ಯಾಂಕಿನ ಮುಂದಿನ ಕಾರ್ಯಯೋಜನೆಗಳನ್ನು ರೂಪಿಸಲು ಸಭೆಯಲ್ಲಿ ಚರ್ಚೆ ನಡೆಯಲಿದೆ. ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸದಸ್ಯರೆಲ್ಲರೂ ತಪ್ಪದೆ ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ವ್ಯವಸ್ಥಾಪಕ ಎನ್.ಎಸ್. ದೇವರಾಜ ಅರಸು ಕೋರಿದ್ದಾರೆ.

ಮಳೆಗೆ ಗ್ರಾಪಂ ಕಟ್ಟಡ ಕುಸಿತ
ಬೈಲಕುಪ್ಪೆ: ಕೆಲದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಗ್ರಾಪಂ ಕಚೇರಿಗೆ ಸೇರಿದ ಕಟ್ಟಡ ಕುಸಿದು ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ. ಗ್ರಾಪಂಗೆ ಸೇರಿದ ತೀರಾ ಹಳೆಯದಾದ ಮನೆಯ ಗೋಡೆ, ಕಿಟಕಿ ಕುಸಿದು ಬಿದ್ದಿದೆ. ಉಳಿದ ಭಾಗ ಸಂಪೂರ್ಣ ಶಿಥಿಲಗೊಂಡಿದೆ. ಅದೃಷ್ಟವಶಾತ್ ಯಾರಿಗೂ ಅನಾಹುತವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ತಾಪಂ ಇಒ ಮನೋಹರ್, ಪಿಡಿಒ ಶಿವಯೋಗ, ಹಾಗೂ ಎಂಜಿನಿಯರ್ ಪ್ರಭು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.