ಹರಿಹರ ಆನಂದಸ್ವಾಮಿ ವಿರುದ್ಧ ಸತೀಶ್‌ಕುಮಾರ್ ಕಿಡಿ
ಹುಣಸೂರು: ಶಾಸಕ ಎಚ್.ಪಿ. ಮಂಜುನಾಥ್ ಅವರ ನೆರವಿನಿಂದ ಜೀವನ ಸಾಗಿಸುವ ಹರಿಹರ ಆನಂದಸ್ವಾಮಿ ಅವರಿಗೆ ಶಾಸಕ ಜಿ.ಟಿ. ದೇವೇಗೌಡರ ವಿರುದ್ಧ ಮಾತನಾಡುವ ನೈತಿಕತೆ ಹಾಗೂ ಟೀಕಿಸುವ ಹಕ್ಕಿಲ್ಲ ಎಂದು ಕರ್ನಾಟಕ ಪ್ರದೇಶ ಮಾದಿಗರ ಸಂಘದ ರಾಜ್ಯಾಧ್ಯಕ್ಷ ಎಚ್.ಪಿ. ಸತೀಶ್‌ಕುಮಾರ್ ಹೇಳಿದ್ದಾರೆ.
ಹರಿಹರ ಆನಂದಸ್ವಾಮಿ ಕಾಂಗ್ರೆಸ್ ಮುಖಂಡರೆ ಅಥವಾ ದಸಂಸ ಮುಖಂಡರೆ ಎಂಬುದನ್ನು ಮೊದಲು ನಿರ್ಧಾರ ಮಾಡಿಕೊಂಡು, ನಂತರ ಯಾರು, ಯಾರ ಬಗ್ಗೆ ಮಾತನಾಡಬಹುದು ಎಂಬುದನ್ನು ಮಾತನಾಡಲಿ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾಂಗ್ರೆಸ್ ದಲಿತರ ಸ್ವಾಭಿಮಾನದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿದೆ. ಆದರೆ ಸಾಮಾಜಿಕ ನ್ಯಾಯ ಎಲ್ಲಿ ನೀಡಿದೆ, ತಾಲೂಕಿನಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಪ.ಜಾತಿ ಮತದಾರರಿರುವ ಕ್ಷೇತ್ರದಲ್ಲಿ ನೀವು ಸ್ಥಳೀಯಮಟ್ಟ ಅಥವಾ ಬೇರೆ ಯಾವುದಾದರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಚುನಾಯಿತ ಪ್ರತಿನಿಧಿಯಾಗಿದ್ದೀರಾ, ಯೋಚಿಸಿ ನೋಡಿ ಅದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಮತ್ತು ದಲಿತರ ಕ್ಷಮೆ ಕೇಳದ ತಾವು, ಸಹಕಾರಿ ಧುರೀಣರ ಬಗ್ಗೆ ಮಾತನಾಡುವ ಹಕ್ಕು ಏನೀದೆ ಎಂದು ತೀವ್ರವಾಗಿ ತರಾಟೆ ತೆಗೆದುಕೊಂಡರು. ತಾಪಂ ಮಾಜಿ ಸದಸ್ಯ ಸತ್ಯಪ್ಪ ಮಾತನಾಡಿ, ಶಾಸಕರಾಗಿ ಐದು ವರ್ಷ ಅಧಿಕಾರ ನಡೆಸಿ, ಈಗ ರಾಜ್ಯದಲ್ಲಿ ತಮ್ಮದೆ ಕಾಂಗ್ರೆಸ್ ಸರ್ಕಾರ ಬಂದು ನಾಲ್ಕು ತಿಂಗಳು ಕಳೆದರೂ ತಾಲೂಕಿನ ಗುಂಡಿ ಮುಚ್ಚಲು ಆಗಿಲ್ಲ, ಇನ್ನೇನು ಮಾಡುತ್ತೀರಿ ಎಂದು ಶಾಸಕ ಎಚ್.ಪಿ. ಮಂಜುನಾಥ್ ಅವರನ್ನು ಪ್ರಶ್ನಿಸಿದ್ದಾರೆ. ಕಲ್ಕುಣಿಕೆ ರಮೇಶ್, ಜೆಡಿಎಸ್ ಮುಖಂಡ ಪಾಂಡು, ಪುರಸಭೆ ಮಾಜಿ ಅಧ್ಯಕ್ಷ ಚಂದ್ರನಾಯ್ಕ ಇದ್ದರು.
ಮುಕ್ತ ವಿವಿಯಿಂದ ಮತ್ತೆರಡು ಅಧ್ಯಯನ ಪೀಠಗಳ ಸ್ಥಾಪನೆ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಮೈಸೂರಿನಲ್ಲಿ ಬಿ.ವಿ. ಕಾರಂತ ಹಾಗೂ ಡಾ. ರಾಮ್ ಮನೋಹರ ಲೋಹಿಯಾ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗಿದೆ.
ಬಿ.ವಿ. ಕಾರಂತರ ಅಧ್ಯಯನ ಪೀಠದ ನಿರ್ದೇಶಕರಾಗಿ ರಂಗತಜ್ಞ ಸಿ. ಬಸವಲಿಂಗಯ್ಯ ಹಾಗೂ ಡಾ. ರಾಮ್ ಮನೋಹರ ಲೋಹಿಯಾ ಅಧ್ಯಯನ ಪೀಠದ ನಿರ್ದೇಶಕರಾಗಿ ಇತಿಹಾಸ ಪ್ರಾಧ್ಯಾಪಕ ಡಾ. ಪೃಥ್ವಿದತ್ತ ಚಂದ್ರ ಶೋಭಿ ನೇಮಕವಾಗಿದ್ದಾರೆ. ಈಗಾಗಲೇ ಏಳು ಅಧ್ಯಯನ ಪೀಠಗಳು ಕಾರ್ಯನಿರ್ವಹಿಸುತ್ತಿದ್ದು, ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಅವರು ಹೊಸದಾಗಿ ಯೋಜಿಸಿರುವ ಕಾರ್ಯಕ್ರಮ ಇದಾಗಿದೆ.
ಬಿ.ವಿ. ಕಾರಂತ ಪೀಠ: ಹಿರಿಯ ರಂಗಕರ್ಮಿ, ರಂಗಾಯಣ ಸಂಸ್ಥಾಪಕರಾದ ಬಿ.ವಿ. ಕಾರಂತರ ಹೆಸರಿನಲ್ಲಿ ಸ್ಥಾಪಿಸಿರುವ ಪೀಠವು ರಂಗಭೂಮಿ ಮತ್ತು ಪ್ರದರ್ಶನ ಕಲೆಗಳ ಅಧ್ಯಯನವನ್ನು ಕೈಗೊಳ್ಳಲಿದೆ. ಪೀಠದ ಗೌರವ ನಿರ್ದೇಶಕ ಸಿ. ಬಸವಲಿಂಗಯ್ಯ ಅವರು ಭಾರತೀಯ ರಂಗಭೂಮಿಯಲ್ಲಿ ಕಳೆದರೆಡು ದಶಕಗಳಿಂದ ತಮ್ಮ ಮಹತ್ವಾಕಾಂಕ್ಷೆಯ ಮತ್ತು ಕ್ರಿಯಾಶೀಲ ಪ್ರಯೋಗಗಳಿಗೆ ಹೆಸರಾದವರು. ಗಾಂಧಿ ವರ್ಸಸ್ ಗಾಂಧಿ, ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರ ಮತ್ತು ವಿಶೇಷವಾಗಿ ಮಲೆಗಳಲ್ಲಿ ಮದುಮಗಳು ನಾಟಕ ನಿರ್ದೇಶಿಸಿ ಛಾಪು ಮೂಡಿಸಿದ್ದಾರೆ.
ಲೋಹಿಯಾ ಪೀಠ: ಈ ಪೀಠ ಲೋಹಿಯಾ ಬೌದ್ಧಿಕ ಚಿಂತನೆಯ ಎರಡು ಸೆಳೆಗಳಾದ ಸಮಾಜವಾದಿ ದರ್ಶನ ಮತ್ತು ಭಾರತೀಯ ಸಮಾಜದ ಅಧ್ಯಯನಗಳನ್ನು ಕೈಗೊಳ್ಳಲಿದೆ. ಪೀಠದ ಗೌರವ ನಿರ್ದೇಶಕ ಡಾ. ಪೃಥ್ವಿದತ್ತ ಚಂದ್ರ ಶೋಭಿ ಆಧುನಿಕ ಪೂರ್ವ ಭಾರತದ ಸಾಮಾಜಿಕ ಇತಿಹಾಸ, ಪ್ರತಿಭಟನೆಯ ಸಂಸ್ಕೃತಿಗಳ ಇತಿಹಾಸ ಮತ್ತು ಆಧುನಿಕ ಸಾಮಾಜಿಕ ಚಳವಳಿಗಳ ಅಧ್ಯಯನಗಳಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

