ಮೆಗಾ ಡೇರಿ ಸ್ಥಾಪನೆಗೆ ರಾಜ್ಯ ಸರ್ಕಾರ ಅಸ್ತು
ಕ.ಪ್ರ.ವಾರ್ತೆ ಟಿ.ನರಸೀಪುರ ಸೆ. 23
ಮೆಗಾ ಡೇರಿ ಸ್ಥಾಪನೆಯ ಯೋಜನೆಗೆ ರಾಜ್ಯ ಸರ್ಕಾರ ಸದಸ್ಯದಲ್ಲಿಯೇ ಆಡಳಿತಾತ್ಮಕ ಅನುಮೋದನೆ ನೀಡಲಿದೆ ಎಂದು ಮೈಸೂರು- ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ಮಾಜಿ ಅಧ್ಯಕ್ಷ ಸಿ. ಓಂಪ್ರಕಾಶ್ ಹೇಳಿದರು.
ತಾಲೂಕಿನ ಬೆನಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ 2012-13ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿರುವ ರೈತರು ಹಾಗೂ ಹಾಲು ಉತ್ಪಾದಕರ ಸಂಘಗಳ ಪರಿಶ್ರಮದಿಂದ ಮೈಮುಲ್ ಲಾಭದಾಯಕವಾಗಿ ನಡೆಯುತ್ತಿದ್ದು, ಮೆಗಾ ಡೇರಿ ಸ್ಥಾಪನೆ ಮಾಡಬೇಕೆಂಬ ಮಹತ್ವದ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಲಿದೆ ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಜಿ. ಮಾದಪ್ಪ ಮಾತನಾಡಿ, 2012-13ನೇ ಸಾಲಿಗೆ ಸಂಘವು 57.73 ಲಕ್ಷ ವಹಿವಾಟು ನಡೆಸಿದೆ. ವ್ಯಾಪಾರ ಲಾಭವಾಗಿ 4.19 ಲಕ್ಷ ಗಳಿಸಿದ್ದು, ಅದರಲ್ಲಿ 1.02 ಲಕ್ಷ ನಿವ್ವಳ ಲಾಭವಾಗಿದೆ. ಹಾಲು ಉತ್ಪಾದಕರಿಂದ ಗುಣಮಟ್ಟದ ಹಾಲು ಸರಬರಾಜಾಗುವುದಕ್ಕೆ ಪೂರಕವಾದ ನೆರವನ್ನು ಸಂಘದಿಂದ ನೀಡಲಾಗಿದೆ ಎಂದು ತಿಳಿಸಿದರು.
ಮೈಮುಲ್ ಸಹಾಯಕ ವ್ಯವಸ್ಥಾಪಕ ಕೆ.ಎನ್. ಗಣೇಶ್ ಹಲವು ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಬಿ.ಎಸ್. ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಜಿ.ಆರ್. ಸುಂದರಪ್ಪ, ಬಿ.ಎಸ್. ಪರಮೇಶ, ಬಿ.ಎನ್. ಸಿದ್ದಮಲ್ಲಸ್ವಾಮಿ, ಬಿ.ಎಸ್. ಸುಂದರ, ಬಿ.ಎನ್.ಶಿವಕುಮಾರ, ಬಿ.ಎಸ್. ಉಮೇಶ, ಸೌಭಾಗ್ಯ, ಬಸಮ್ಮ, ಮುಖಂಡ ಗೌಡ್ರು ರಾಜಶೇಖರ, ಹಾಲು ಪರೀಕ್ಷಕ ಬಿ.ಜಿ. ಶಿವಶಂಕರ, ಸಿಬ್ಬಂದಿ ಬಿ.ಪಿ. ಮಹೇಶ, ಬಿ.ಎನ್. ಮಹೇಶ, ಮಹದೇವಸ್ವಾಮಿ ಇದ್ದರು.
ಕೆ.ಜಿ. ಹಳ್ಳಿ: ಹೈನುಗಾರಿಕೆ ತರಬೇತಿ
ಎಚ್.ಡಿ. ಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾದಪುರ ವಲಯದ ಹೈರಿಗೆ ಗ್ರಾಪಂ ವ್ಯಾಪ್ತಿಯ ಕೆ.ಜಿ. ಹಳ್ಳಿಯಲ್ಲಿ ಹೈನುಗಾರಿಕಾ ತರಬೇತಿ ನಡೆಯಿತು.
ತಾಲೂಕಿನ ನುರಿತ ಕೃಷಿ ವೈದ್ಯ ಡಾ.ಪ್ರಕಾಶ್ ಮಾತನಾಡಿ, ಹೈನು ರಾಸುಗಳ ಪಾಲನೆ ಪೋಷಣೆ ಬಗ್ಗೆ ವಿವರಿಸಿ, ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಲಸಿಕೆ ಹಾಕಿಸುವುದು ಅತ್ಯಮೂಲ್ಯವಾಗಿದೆ. ಕಾಲುಬಾಯಿ ಮತ್ತು ಚಪ್ಪೆ ರೋಗ ಹಸುಗಳಲ್ಲಿ ಕಾಣಿಸಿಕೊಂಡಿದೆ. ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದರು.
ಯೋಜನಾಧಿಕಾರಿ ಉಮಾರಬ್ಬ ಮಾತನಾಡಿ, ಸ್ವ-ಉದ್ಯೋಗಕ್ಕೆ ಪೂರಕವಾಗಿರುವುದರಲ್ಲಿ ಹೈನುಗಾರಿಕೆ ಒಂದು ಉತ್ತಮವಾದ ಉದಾಹರಣೆ ಎಂದರು.
ಯೋಜನೆಯ ಹೈನುಗಾರಿಕಾ ಮೇಲ್ವಿಚಾರಕ ಸದಾಶಿವ ನಾಯಕ್, ವಲಯದ ಮೇಲ್ವಿಚಾರಕ ಪಿ.ಎಸ್. ಅಣ್ಣಪ್ಪ, ಸೇವಾಪ್ರತಿನಿಧಿಯಾದ ಹೇಮಂತ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

