ವಿಷ್ಣುವರ್ಧನ್ ವಿರುದ್ಧ ಅವಹೇಳನ ಲೇಖನ: ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಸೆ. 26
ನಟ ಡಾ.ವಿಷ್ಣುವರ್ಧನ್ ಅವರ ಕುರಿತು ಅವಹೇಳನಕಾರಿ ಲೇಖನ ಖಂಡಿಸಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದವರು ಡಾ.ವಿಷ್ಣುವರ್ಧನ್ ಉದ್ಯಾನದ (ಕರ್ಜನ್ ಪಾರ್ಕ್) ಬಳಿ ಗುರುವಾರ ಪ್ರತಿಭಟಿಸಿದರು.
ಮುಕುಂದರಾಜ್ ಎಂಬವರು ಚಂದ್ರಮೌನ ಸಮಗ್ರ ಲೇಖನ ಪ್ರಬಂಧ ಮಾಲಿಕೆ ಬರೆದಿದ್ದಾರೆ. ಇದರಲ್ಲಿ ನಟ ಡಾ. ವಿಷ್ಣುವರ್ಧನ್ ಅವರಿಗೆ ಅಭಿನಯದ ಗಂಧಗಾಳಿ ಇಲ್ಲವೆಂದು ಮೂದಲಿಕೆ ಅರ್ಥ ಬರುವಂತೆ ಲೇಖನ ಬರೆದಿರುವುದು ಅಕ್ಷಮ್ಯ ಅಪರಾಧ. ಬರವಣಿಗೆ ಪ್ರತಿಯೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ, ಮೇರುನಟರ ಬಗ್ಗೆ ಕೀಳಾಗಿ ಬರೆಯಲು ಇವರಿಗೇನು ಹಕ್ಕಿದೆ ಎಂದು ಅವರು ಪ್ರಶ್ನಿಸಿದರು.
ಡಾ.ವಿಷ್ಣು ಅವರ ನಟನೆ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಲೇಖಕ ಮುಕುಂದರಾಜ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಬಳಗದ ಎಸ್.ಎನ್. ರಾಜೇಶ್, ಹರೀಶ್ ನಾಯ್ಡು, ಜಿ. ರಾಘವೇಂದ್ರ, ವಿಕ್ರಮ್, ರಾಕೇಶ್ ಭಟ್, ಗುರುಮೂರ್ತಿ, ರವೀಶ್, ದೀಪಕ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

