ಮೈಸೂರು

ಅಂಬಾರಿ ತಾಲೀಮು: ಗಜೇಂದ್ರನ ಸರದಿ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಸೆ. 27
ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವಂತೆಯೇ ದಸರಾ ಆನೆಗಳ ತಾಲೀಮು ಚುರುಕುಗೊಂಡಿದೆ.  ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಅರ್ಜುನ ನೇತೃತ್ವದ ಗಜಪಡೆಯ ಪೈಕಿ ಶುಕ್ರವಾರ ಗಜೇಂದ್ರನಿಗೆ ಮರದ ಅಂಬಾರಿಯನ್ನು ಕಟ್ಟಿ ತಾಲೀಮು ನೀಡಲಾಯಿತು. ಪ್ರತಿದಿನ ಒಂದೊಂದು ಆನೆಗೆ ಮರದ ಅಂಬಾರಿಯನ್ನು ಕಟ್ಟಿ ತಾಲೀಮು ನೀಡುವಂತೆ, ಶುಕ್ರವಾರ ಗಜೇಂದ್ರನ ಸರದಿ. ಬೆಳಗ್ಗೆ 9ರ ಸುಮಾರಿಗೆ ಆರಂಭವಾದ ಆನೆಗಳ ತಾಲೀಮಿನ ಮುಂಚೂಣಿಯಲ್ಲಿ ಗಜೇಂದ್ರ ಕಾಣಿಸಿಕೊಂಡ, ಚಿನ್ನದ ಅಂಬಾರಿಯಷ್ಟೆ ತೂಕದ ಮರದ ಅಂಬಾರಿಯನ್ನು ಗಜೇಂದ್ರನ ಬೆನ್ನಿಗೆ ಕಟ್ಟಿ ತಾಲೀಮು ನಡೆಸಲಾಯಿತು. ಗಜೇಂದ್ರನ ಜೊತೆ, ಅರ್ಜುನ, ಬಲರಾಮ, ಸರಳ, ವರಲಕ್ಷ್ಮಿ ಸೇರಿದಂತೆ ಇತರ ಆನೆಗಳು ಹೆಜ್ಜೆ ಹಾಕಿದವು. ಅಂತೆಯೆ ಸಂಜೆ ಅಂಬಾರಿ ಪ್ರತಿಕೃತಿ ಇಲ್ಲದೆ ಅರಮನೆಯಿಂದ ಬನ್ನಿಮಂಟದವರೆಗೆ ತಾಲೀಮು ನಡೆಸಿದವು. ಈ ವೇಳೆ ಆನೆಗಳ ವೈದ್ಯ ಡಾ.ನಾಗರಾಜ್ ಇದ್ದರು. ಎಂದಿನಂತೆ ಆನೆಗೆ ಪೌಷ್ಟಿಕಯುಕ್ತ ಆಹಾರ ನೀಡಲಾಗುತ್ತಿದೆ. ಒಣ ಹುಲ್ಲು, ಆಲದ ಎಲೆ, ಕಬ್ಬು, ಬೆಲ್ಲ, ಬೇಯಿಸಿದ ಹೆಸರು, ಉದ್ದು, ಉರುಳಿ ಮುಂತಾದ ಕಾಳುಗಳನ್ನು ಆನೆಗೆ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.