ಅತೃಪ್ತರನ್ನು ಓಲೈಸಲು ಮತ್ತೊಂದು ಪಟ್ಟಿ ಬಿಡುಗಡೆ
ಕ.ಪ್ರ.ವಾರ್ತೆ , ಮೈಸೂರು , ಸೆ. 29
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವನ್ನು ಸಡಗರದಿಂದ ಆಚರಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಉಪಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ನೇಮಿಸಿತ್ತು.
ಈ ಪಟ್ಟಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಅಸಮಾಧಾನ ಭುಗಿಲೆದ್ದಿತ್ತು.
ಇದರಿಂದ ಎಚ್ಚೆತ್ತ ಸರ್ಕಾರ ಅತೃಪ್ತ ಕಾರ್ಯಕರ್ತರ ಕೋಪ ಶಮನ ಮಾಡಲು ಈಗ ಎಲ್ಲಾ ಉಪಸಮಿತಿಗಳಿಗೆ ಹೆಚ್ಚುವರಿಯಾಗಿ ಒಬ್ಬರು ಉಪಾಧ್ಯಕ್ಷರು ಹಾಗೂ ಹನ್ನೆರಡು ಮಂದಿ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ.
ಉಪಸಮಿತಿಗಳ ಹೆಸರು: ಉಪಾಧ್ಯಕ್ಷರು- ಆರೋಗ್ಯ- ಕೆ. ನಾಗರಾಜ್, ವ್ಯವಸ್ಥೆ ಮತ್ತು ಸ್ವಚ್ಛತಾ- ನವೀನ್ಕುಮಾರ್, ಲಲಿತ ಕಲೆ ಮತ್ತು ಕರಕುಶಲ- ಕ್ರಿಯೇಟಿವ್ ಕುಮಾರ್, ಮಹಿಳಾ ಮತ್ತು ಮಕ್ಕಳ ದಸರಾ- ಎಸ್. ನಾಗರತ್ನ, ಸ್ತಬ್ಧಚಿತ್ರ- ಎಂ. ಪುಟ್ಟಸ್ವಾಮಿ, ಪ್ರಚಾರ ಪಾಯೋಜಕತ್ವ ಮತ್ತು ಗಾಳಿಪಟ- ಶೌಕತ್ ಅಲಿಖಾನ್, ಯೋಗ ದಸರಾ- ಬಿ. ಅಶೋಕ್, ದೀಪಾಲಂಕಾರ- ರಾಜು, ರೈತ ದಸರಾ- ಶಕೀಲ್ ಅಹಮ್ಮದ್.
ಕುಸ್ತಿ- ರಂಗಸ್ವಾಮಿ, ಯುವ ದಸರಾ- ಪ್ರದೀಪ್ಕುಮಾರ್, ಆಹಾರಮೇಳ- ಡಾ. ಶ್ರೀನಿವಾಸ್, ಪ್ರವಾಸೋದ್ಯಮ- ಸುನೀತಾ, ಯುವಸಂಭ್ರಮ- ರೇವಣ್ಣ, ದಸರಾ ದರ್ಶನ- ಎಂ. ಲಿಂಗರಾಜು, ಸ್ಥಳಾವಕಾಶ ಶಿಷ್ಟಾಚಾರ ಮತ್ತು ಸಮನ್ವಯ- ಅಬ್ದುಲ್ ಖಾದರ್.
ಚಲನಚಿತ್ರ- ಪಾರ್ವತಮ್ಮ, ಕ್ರೀಡೆ ಮತ್ತು ಸಾಹಸ ಕ್ರೀಡೆ- ಎಸ್. ಸ್ಟ್ಯಾನ್ಲಿ, ಸ್ವಾಗತ ಮತ್ತು ಆಮಂತ್ರಣ- ಸಿ. ರಂಗನಾಥ್, ಸಾಂಸ್ಕೃತಿಕ ಕಾರ್ಯಕ್ರಮ- ಎಚ್.ಎ. ವೆಂಕಟೇಶ, ಮೆರವಣಿಗೆ- ಡಾ. ಶ್ರೀನಿವಾಸನ್, ಕವಿಗೋಷ್ಠಿ- ಡಾ.ಮುಳ್ಳೂರು ನಂಜುಂಡಸ್ವಾಮಿ, ಗ್ರಾಮೀಣ ದಸರಾ- ಬಸವರಾಜು, ಮಹಿಳಾ ಉದ್ದಿಮೆ ದಸರಾ ವಸ್ತುಪ್ರದರ್ಶನ- ಪುಷ್ಪವಲ್ಲಿ, ಲಲಿತಾ ಕಲೆ ವಸ್ತುಪ್ರದರ್ಶನ- ಶಶಿರೇಖಾ, ಆರೋಗ್ಯ ಸಮಿತಿ (ವಸ್ತುಪ್ರದರ್ಶನ)- ರಾಜಶೇಖರ, ಮಹಿಳಾ ಮತ್ತು ಮಕ್ಕಳ ವಸ್ತುಪ್ರದರ್ಶನ- ರಾಣಿ, ಸಾಂಸ್ಕೃತಿಕ (ವಸ್ತುಪ್ರದರ್ಶನ)- ಎಂ.ಕೆ. ಅಶೋಕ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

