ಮೈಸೂರು

ಶ್ರೀರಾಮೋತ್ಸವ

Published On :

ಮೈಸೂರು: ಕೃಷ್ಣಮೂರ್ತಿಪುರಂನಲ್ಲಿರುವ ಭಗಿನಿ ಸೇವಾ ಸಮಾಜ ಎಜುಕೇಷನಲ್ ಮತ್ತು ಕಲ್ಚರಲ್ ಟ್ರಸ್ಟ್‌ನಲ್ಲಿ ಏ.4 ರಿಂದ 8 ರವರೆಗೆ ಶ್ರೀರಾಮೋತ್ಸವ ಏರ್ಪಡಿಸಿದ್ದು, ಪ್ರತಿದಿನ ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಏ.4 ರಂದು ದೇವರನಾಮ, ಏ.5 ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ, ಏ.6 ರಂದು ಶಾಸ್ತ್ರೀಯ ಸಂಗೀತ, ಏ.7 ರಂದು ಸ್ಯಾಕ್ಸೋಫೋನ್, ಏ.8 ರಂದು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮಾರಂಭ
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭವು ಏ. 4ರ ಬೆಳಗ್ಗೆ 11ಕ್ಕೆ ಕಾಲೇಜಿನ ಕಲಾಮಂಟಪದಲ್ಲಿ ನಡೆಯಲಿದ್ದು, ಶಾಸಕ ವಾಸು, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಸಿ.ಕೆ. ಮಹೇಶ್ವರಪ್ಪ, ನಟ ಅರುಣ್ ಸಾಗರ್ ಭಾಗವಹಿಸುವರು.
ಬ್ರಹ್ಮೋಪದೇಶ
ಬ್ರಾಹ್ಮಣ ಧರ್ಮ ಸಹಾಯಸಭಾ ಆಶ್ರಯದಲ್ಲಿ ಮೇ 4 ರಂದು ಶಂಕರಾಚಾರ್ಯರ ಜಯಂತಿ ಶುಭದಿನದಂದು ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಉಚಿತವಾಗಿ ಬ್ರಹ್ಮೋಪದೇಶವನ್ನು ತ್ಯಾಗರಾಜ ರಸ್ತೆಯಲ್ಲಿರುವ ಕಲ್ಯಾಣಭವನದಲ್ಲಿ ಆಚರಿಸಲಿದೆ. ಆಸಕ್ತ ತ್ರಿಮತಸ್ಥ ಬ್ರಾಹ್ಮಣ ವಟುಗಳು ಏ.26ರೊಳಗೆ ತಮ್ಮ ಪೂರ್ಣ ವಿವರಗಳನ್ನು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂ.2446498 ಸಂಪರ್ಕಿಸಬಹುದು.
ವ್ಯಕ್ತಿ ನಾಪತ್ತೆ
ಮೈಸೂರು: ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ರತ್ನಮ್ಮ ಎಂಬವರ ಪತಿ ಕಾಂತರಾಜು (45) ಮಾ.20 ರಿಂದ ಕಾಣೆಯಾಗಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ ಹೀಗಿದೆ. 5.3 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ. ಕಾಣೆಯಾದ ವ್ಯಕ್ತಿಯ ಕಂಡಬಂದಲ್ಲಿ ಮೊ. 7760047235ನ್ನು ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.