ಆಲಿಕಲ್ಲು ಮಳೆ
Published On :
ಎಚ್.ಡಿ. ಕೋಟೆ/ಮೈಸೂರು: ಕಳೆದ ಒಂದು ತಿಂಗಳಿನಿಂದ ಬೇಸಿಗೆಯ ಬೇಗೆಯಿಂದ ಬೇಯುತ್ತಿದ್ದ ತಾಲೂಕಿಗೆ ಮಂಗಳವಾರ ಸಂಜೆ ಸತತ ಒಂದು ಗಂಟೆಗೂ ಕಾಲ ಹೆಚ್ಚು ಬಿದ್ದ ಮಳೆ ತಂಪೆರಿಯಿತು. ತಾಲೂಕಿನ ಕೊಳಗಾಲ ಮತ್ತು ಮಾದಾಪುರದಲ್ಲಿ ಆಲಿಕಲ್ಲು ಮಳೆಯಾದರೆ, ಎಚ್.ಡಿ. ಕೋಟೆ ಪಟ್ಟಣ, ಸರಗೂರು ಹಾಗೂ ಹ್ಯಾಂಡ್ಪೋಸ್ಟ್ ಸಾದಾರಣ ಮಳೆಯಾಯಿತು. ಮೈಸೂರಿನಲ್ಲಿ ಮಂಗಳವಾರ ಸಂಜೆ ಹನಿ ಮಳೆ ಬಿದ್ದಿತು.
ರಥೋತ್ಸವ
ಹುಣಸೂರು: ಶ್ರೀ ರಾಮನವಮಿಯಂದು ಶ್ರೀ ಆಂಜನೇಯಸ್ವಾಮಿಯ ರಥೋತ್ಸವವು ಮಂಗಳವಾರ ತಾಲೂಕಿನ ತಟ್ಟೆಕೆರೆ ಗೇಟ್ನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ತಟ್ಟೆಕೆರೆ ಗೇಟ್ನಲ್ಲಿರುವ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪೂಜಾ ವಿಧಿ-ವಿಧಾನ ಆರಂಭಗೊಂಡು 10.40ಕ್ಕೆ ಹೂವಿನಿಂದ ಅಲಂಕೃತಗೊಂಡಿದ್ದ ರಥವನ್ನು ಮಹಿಳೆಯರು, ಮಕ್ಕಳಾದಿಯಾಗಿ ಭಕ್ತಿಭಾವದಿಂದ ಎಳೆದರು. ಶ್ರೀರಾಮ, ಸೀತಾ, ಲಕ್ಷ್ಮಣ, ಆಂಜನೇಯ ಉತ್ಸವಮೂರ್ತಿಯನ್ನು ರಥಕ್ಕೇರಿಸುವ ಮುನ್ನಾ ದೇವಾಲಯದಿಂದ ಮೆರವಣಿಗೆಯಲ್ಲಿ ತಂದು ಪೂಜೆ ಸಲ್ಲಿಸಿ, ನಂತರ ಉಯ್ಯಾಲೆಯಾಡಿಸಿದರು. ಹೆಂಗಳೆಯರು ವಿಶೇಷ ಪೂಜೆ ಸಲ್ಲಿಸಿ, ತಾವು ಉಯ್ಯಾಲೆಯಾಡಿಸಿದ ನಂತರ ರಥದ ಸುತ್ತ ಪ್ರದಕ್ಷಿಣೆ ಹಾಕಿ ರಥದ ಮೇಲಕ್ಕೆರಿಸಿದರು. ರಥೋತ್ಸವಕ್ಕೂ ಮುನ್ನ ಪುಟ್ಟ ಕಂದಮ್ಮಗಳನ್ನು ರಥದ ಕೆಳಗೆ ಮಲಗಿಸಿ, ಹರಕೆ ತೀರಿಸುವರು. ಹರಕೆ ಹೊತ್ತವರು, 6 ತಿಂಗಳಿಂದ 5 ವರ್ಷದ ಮಕ್ಕಳನ್ನು ರಥದ ಕೆಳಗೆ ಸಾಲಾಗಿ ಮಲಗಿಸಿದ ನಂತರ ರಥ ಎಳೆಯುವ ಪದ್ಧತಿಯಂತೆ ಈ ಬಾರಿಯು ಹಲವಾರು ಮಕ್ಕಳನ್ನು ಮಲಗಿಸಿ ರಥ ಎಳೆಯಲಾಯಿತು.
ಸಂತಾಪ ಸೂಚನೆ
ನೇರ ನಡೆ-ನುಡಿಗೆ ಹೆಸರವಾಸಿಯಾಗಿದ್ದ ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಹಾಗೂ ದಾದಾ ಫಾಲ್ಕೆ ಪ್ರಶಸ್ತಿ ವಿಜೇತ, ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರ ನಿಧನಕ್ಕೆ ಸೆನೆಟ್ನ ಮಾಜಿ ಸದಸ್ಯ ಎಸ್. ಜಯಪ್ರಕಾಶ್ ಸಂತಾಪ ಸೂಚಿಸಿದ್ದಾರೆ.
ಅವಿರೋಧ ಆಯ್ಕೆ
ಬೈಲಕುಪ್ಪೆ: ಕೊಪ್ಪ ಗ್ರಾಪಂ ಅಧ್ಯಕ್ಷರಾಗಿ ಸಿ.ಎಸ್. ರೇಣುಕಾಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ಕೊಪ್ಪ ಗ್ರಾಪಂ ಅಧ್ಯಕ್ಷರ ಚುನಾವಣೆಯಲ್ಲಿ ಸಿ.ಎಸ್.ರೇಣುಕಾಸ್ವಾಮಿ ವಿನ ಬೇರಾರೂ ನಾಮಪತ್ರ ಸಲ್ಲಿಸದಿರುವುದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾದ ಸಹಾಯಕ ಕೃಷಿ ನಿರ್ದೇಶಕ ಕೆ. ರಾಜು ಘೋಷಿಸಿದರು. ಒಟ್ಟು 19 ಸದಸ್ಯರ ಪೈಕಿ 17 ಮಂದಿ ಹಾಜರಿದ್ದು, ಗಂಗಾಂಬಿಕೆ ಯೋಗೇಶ್, ಜಯಮ್ಮ ಗೈರು ಹಾಜರಾಗಿದ್ದರು. ಮಾಜಿ ಶಾಸಕ ಎಚ್.ಸಿ. ಬಸವರಾಜ್, ಜಿಪಂ ಸದಸ್ಯೆ ಕಾವೇರಿ ಶೇಖರ್, ಸಾಹಿತಿ ಪ್ರೊ.ಎಚ್.ಗೋವಿಂದಯ್ಯ, ಮುಖಂಡರಾದ ಸಿ.ಸಿ.ಸದಾಶಿವಪ್ಪ, ಪ್ರಕಾಶ್, ಶಿವಯ್ಯ, ರಾಮಸ್ವಾಮಿ, ಸದಸ್ಯರಾದ ಮಂಜುನಾಥ, ಶಿವಸ್ವಾಮಿ, ದ್ರಾಕ್ಷಾಯಿಣಿ, ಜಯಶೀಲ, ಚಂದ್ರಶೇಖರ್, ಶಿವರುದ್ರನಾಯಕ್ ಇದ್ದರು.
ಜೂಜು ಅಡ್ಡೆ ದಾಳಿ
ಲಷ್ಕರ್ ಮೊಹಲ್ಲಾದ ಕುಂಬಾರಗೇರಿ 1ನೇ ತಿರುವಿನಲ್ಲಿರುವ ಮನೋಜ್ ಜ್ಯೂವೆಲ್ಲರಿ ವರ್ಕ್ಸ್ ಎದುರು ಜೂಜು ಅಡ್ಡೆ ಮೇಲೆ ನಗರದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಜ್ಯೂವೆಲ್ಲರಿ ವರ್ಕ್ಸ್ ಎದುರು ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಮುಂಭಾಗದ ರಸ್ತೆಯಲ್ಲಿ ಜೂಜಿನಲ್ಲಿ ತೊಡಗಿದ್ದ 18 ಮಂದಿಯನ್ನು ಬಂಧಿಸಿ, ರು. 44,500 ಹಾಗೂ 15 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿ ಕೆ.ಎನ್. ಮಾದಯ್ಯ, ಇನ್ಸ್ಪೆಕ್ಟರ್ ಪಿ.ಎ. ಸೂರಜ್, ಆರ್.ಜಗದೀಶ್, ಪಿಎಸ್ಐ ಶ್ರೀನಿವಾಸಗೌಡ, ಎಎಸ್ಐ ಎಂ.ಜೆ. ಜಯಶೀಲನ್, ಎಂ.ಡಿ. ಶಿವರಾಜು ಭಾಗವಹಿಸಿದ್ದರು.
ದತ್ತು ಸ್ವೀಕಾರ
ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಬೆಂಗಳೂರಿನ ಡಾ.ವಿ.ಎಚ್. ಪಾಟಿ ಹಾಗೂ ಶ್ರೀಮತಿ ಪಾಟಿ ಅವರು ಭಾರತದ ಬೂದು ತೋಳವನ್ನು ದತ್ತು ಸ್ವೀಕರಿಸಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ: ಒಬ್ಬ ಸೆರೆ
ಹುಣಸೂರು: ಅಕ್ರಮವಾಗಿ ಸಾವಿರಾರು ರು. ಬೆಲೆ ಬಾಳುವ ಮದ್ಯವನ್ನು ಸಂಗ್ರಹಿಸಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿ, ಮದ್ಯ ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ಜರುಗಿದೆ.ತಾಲೂಕಿನ ಹನಗೋಡು ಹೋಬಳಿಯ ಕಾಳಬೂಚನಹಳ್ಳಿ ಗ್ರಾಮದ ಸ್ವಾಮಿ (48) ಎಂಬಾತನೆ ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಕಾಳಬೂಚನಹಳ್ಳಿ ಗ್ರಾಮದಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಇಲಾಖೆಗೆ ಬಂದ ಖಚಿತ ಮಾಹಿತಿ ಮೇರೆಗೆ, ಅಬಕಾರಿ ಡಿವೈಎಸ್ಪಿ ನಾಗಶಯನ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಧರಣಿಕುಮಾರ್ ತಂಡ ದಾಳಿ ನಡೆಸಿದರು. ಇದಲ್ಲದೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ಮದ್ಯ ವಿಚಾರವಾಗಿ ಆರು ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ ಎಂದು ಧರಣಿಕುಮಾರ್ ಮಾಹಿತಿ ನೀಡಿದರು. ದಾಳಿಯಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

