ಮೈಸೂರು

ಸಂಜೀವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ

Published On :

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿ ವತಿಯಿಂದ ಮುಕ್ತ ಸಂಜೀವಿನಿ ವಿದ್ಯಾರ್ಥಿ ವೇತನಕ್ಕೆ ಏ. 30 ರೊಳಗಾಗಿ ಸಲ್ಲಿಸುವಂತೆ ಕುಲಸಚಿವರು ಕೋರಿದ್ದಾರೆ.
2012-13ನೇ ಸಾಲಿನಲ್ಲಿ ಪ್ರಥಮ, ದ್ವಿತೀಯ, ತೃತೀಯ, ಬಿಎ., ಬಿಕಾಂ ಹಾಗೂ ಪ್ರಥಮ, ಅಂತಿಮ ವರ್ಷದ ಎಂಎ, ಎಂಕಾಂ, ಸ್ಪೆಷಲ್ ಬಿ.ಇಡಿ ಪದವಿಗೆ ಪ್ರವೇಶಾತಿ ಪಡೆದಿದ್ದು, ವಾರ್ಷಿಕ ಪರೀಕ್ಷೆ-2013ರ ಪರೀಕ್ಷೆಯಲ್ಲಿ ಮೊದಲನೇ ಪ್ರಯತ್ನದಲ್ಲಿ ಶೇ.50 ಮತ್ತು ಅದಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ ಎಲ್ಲ ವಿಷಯಗಳಲ್ಲಿ ಒಂದೇ ಬಾರಿಗೆ ತೇರ್ಗಡೆ ಹೊಂದಿರಬೇಕು.
ಹಾಗೂ 2013-14ನೇ ಸಾಲಿನಲ್ಲಿ ದ್ವಿತೀಯ ಮತ್ತು ತೃತೀಯ ಬಿಎ, ಬಿಕಾಂ ಮತ್ತು ಅಂತಿಮ ವರ್ಷದ ಎಂಎ, ಎಂಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆರ್ಥಿಕವಾಗಿ ಹಿಂದುಳಿದವರಾಗಿರಬೇಕು. ಏ.30ರ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮುಕ್ತ ಸಂಜೀವಿನಿ ವಿದ್ಯಾರ್ಥಿ ವೇತನದ ಅರ್ಜಿ ಫಾರಂಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿವಿ ವೆಬ್‌ಸೈಟ್ ಢಿಢಿಢಿ.್ಞಡ್ಟ್ಡಟಣಡ್ಟ್ಠಜ.ಜಜ್ಡ.್ಝಟಿ ಅಥವಾ ಹತ್ತಿರದ ಪ್ರಾದೇಶಿಕ ಕೇಂದ್ರ, ಅಧ್ಯಯನ ಕೇಂದ್ರ ಹಾಗೂ ಕೇಂದ್ರ ಕಚೇರಿಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ರಿಜಿಸ್ಟರ್‌ಡ್ ಪೋಸ್ಟ್, ಕೋರಿಯರ್, ಖುದ್ದಾಗಿ, ಉಪಕುಲಸಚಿವರು (ಪ್ರವೇಶಾತಿ), ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತಗಂಗೋತ್ರಿ, ಮೈಸೂರು-6 ಇವರಿಗೆ ಸಲ್ಲಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.